ಏರ್ ಹೋಸ್ಟೆಸ್ ಕನಸು ನನಸು ಮಾಡಿಕೊಳ್ಳುವುದು ಹೇಗೆ? ಯಾವ ಕೋರ್ಸ್ ಮಾಡಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

ಭಾರತದ ವಿಮಾನಯಾನ ಉದ್ಯಮವು ವಿಶ್ವದ ಮೂರನೇ ಅತಿದೊಡ್ಡ ಉದ್ಯಮವಾಗಿ ಬೆಳೆದು ನಿಂತಿದೆ. ಹೀಗಾಗಿ ವಿಮಾನಯಾನ ಉದ್ಯಮದಲ್ಲೇ ವೃತ್ತಿ ಜೀವನವನ್ನು ಆಯ್ಕೆ ಮಾಡಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಹೆಚ್ಚಿನ ಹೆಣ್ಣು ಮಕ್ಕಳಿಗೆ ಗಗನಸಖಿ ಅಥವಾ ಏರ್ ಹೋಸ್ಟೆಸ್ ಆಗಬೇಕೆಂಬ ಕನಸಿರುತ್ತದೆ. ವಿಮಾನದಲ್ಲಿ ಪ್ರಯಾಣಿಕರನ್ನು ಸ್ವಾಗತಿಸುತ್ತ, ಅತಿಥಿ ಸತ್ಕಾರ ಮಾಡುವ ಗಗನಸಖಿಯರನ್ನು ಕಂಡಾಗ ಆ ಹುದ್ದೆಯನ್ನ ತಾನು ಅಲಂಕರಿಸಬೇಕೆನ್ನುವ ಕನಸು ಕಾಣುವುದು ಸಹಜ. ಈ ಗಗನಸಖಿ ಎಂಬುದು ಅನೇಕ ಮಹಿಳೆಯರ ನೆಚ್ಚಿನ ಹುದ್ದೆಗಳಲ್ಲಿ ಒಂದು. ನೋಡಲು ಸುಂದರವಾಗಿರುವ ಯುವತಿಯರು, ಉತ್ತಮ ಸಂಬಳ, ಗೌರವ ಹಾಗೂ ವಿದೇಶ ಪ್ರಯಾಣ ಹೋಗಲು ಅವಕಾಶ ಸಿಗುವ ಕಾರಣ ಗಗನಸಖಿಯರಾಗಲು ಬಯಸುವುದಿದೆ. ಆದರೆ ಸುಂದರವಾಗಿದ್ದರೆ ಮಾತ್ರ ಸಾಲದು, ಅಗತ್ಯ ಕೌಶಲ್ಯದೊಂದಿಗೆ ಕೋರ್ಸ್ ಮಾಡಿದರೆ ಕೈ ತುಂಬಾ ಸಂಬಳ ಸಿಗುವ ಉದ್ಯೋಗ ನಿಮ್ಮದಾಗುತ್ತದೆ.
ಗಗನಸಖಿಯಾಗಲು ಇರಬೇಕಾದ ಶೈಕ್ಷಣಿಕ ಅರ್ಹತೆಗಳು
ವೃತ್ತಿಪರ ಗಗನಸಖಿಯಾಗಲು ಪಿಎಚ್ಡಿ ಅಥವಾ ಸ್ನಾತಕೋತ್ತರ ಪದವಿ ಪಡೆಯಬೇಕಾಗಿಲ್ಲ. ಪ್ರತಿಷ್ಠಿತ ಸಂಸ್ಥೆಯಿಂದ ವಾಯುಯಾನದಲ್ಲಿ ಪದವಿ ಪಡೆಯುವುದು ಕಡ್ಡಾಯ. ಅದಲ್ಲದೇ, ಸರ್ಟಿಫಿಕೇಟ್ ಕೋರ್ಸ್ ಗಳು, ಡಿಪ್ಲೊಮಾ ಮತ್ತು ಪದವಿ ಕೋರ್ಸ್ ಗಳನ್ನು ಏರ್ ಹೊಸ್ಟೆಸ್ ತರಬೇತಿ, ಕ್ಯಾಬಿನ್ ಕ್ರ್ಯೂ, ಏವಿಯೇಷನ್ ಮ್ಯಾನೇಜ್ ಮೆಂಟ್, ಏರ್ಲೈನ್ಸ್ ಹಾಸ್ಪಿಟಾಲಿಟಿ, ಹಾಸ್ಪಿಟಾಲಿಟಿ ಮತ್ತು ಟ್ರಾವೆಲ್ ಮ್ಯಾನೇಜ್ಮೆಂಟ್, ಏರ್ಲೈನ್ ಪ್ಯಾಸೆಂಜರ್ ಸರ್ವಿಸ್ ಕೋರ್ಸ್ ಮಾಡಬಹುದಾಗಿದೆ. ಅತ್ಯುತ್ತಮ ಸಂವಹನ ಕೌಶಲ್ಯ, ಹಿಂದಿ, ಇಂಗ್ಲಿಷ್ ಭಾಷೆಯನ್ನು ಸಲೀಸಾಗಿ ಮಾತನಾಡುವಂತಿರಬೇಕು. ವಿದೇಶಿ ವಿಮಾನಯಾನ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ವಿದೇಶಿ ಭಾಷೆ ಮಾತನಾಡ ಬಲ್ಲವರಾಗಿರಬೇಕು.

ಅಭ್ಯರ್ಥಿಗೆ ಇರಬೇಕಾದ ಸಾಮಾನ್ಯ ಅರ್ಹತೆಗಳು
 ಗಗನಸಖಿಯ ಎತ್ತರ ಕನಿಷ್ಠ ಐದು ಅಡಿ ಎರಡು ಇಂಚು ಎತ್ತರ ಇರಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯವು ಉತ್ತಮವಾಗಿರಬೇಕು.
 ಯಾವುದೇ ಆರೋಗ್ಯ ಸಂಬಂಧಿತ ಸಮಸ್ಯೆ ಇರಬಾರದು. ಉತ್ತಮ ಆರೋಗ್ಯ ಹೊಂದಿದ್ದರೆ ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಆಗಬಹುದು.
 ಈ ಕೆಲಸಕ್ಕೆ ಅರ್ಜಿ ಸಲ್ಲಿಸುವ ಹೆಣ್ಣುಮಕ್ಕಳು ವಿವಾಹಿತರಾಗಿರಬಾರದು. ಮದುವೆಯಾದ ಹುಡುಗಿಯರು ಏರ್ ಹೋಸ್ಟೆಸ್ ಕೆಲಸಕ್ಕೆ ಅರ್ಜಿ ಸಲ್ಲಿಸುವಂತಿಲ್ಲ.
 ನಗು ಮುಖ, ಆಕರ್ಷಕ ವ್ಯಕ್ತಿತ್ವದೊಂದಿಗೆ ಎತ್ತರಕ್ಕೆ ತಕ್ಕದಾದ ತೂಕ ಹೊಂದಿರಬೇಕು.
 ಗಗನಸಖಿಯಾಗಲು ಅಭ್ಯರ್ಥಿಯ ಕನಿಷ್ಠ ವಯಸ್ಸು 17 ವರ್ಷ ಮತ್ತು ಗರಿಷ್ಠ ವಯಸ್ಸು 26 ವರ್ಷ ದಾಟಿರಬಾರದು.
 ಗಗನಸಖಿಯಾಗಬೇಕೆಂದು ಕೊಂಡವರು ದೇಹದ ಮೇಲೆ ಯಾವುದೇ ಟ್ಯಾಟೂ ಹಾಕಿಕೊಂಡಿರಬಹುದು.
ನೇಮಕಾತಿ ಪ್ರಕ್ರಿಯೆ ಹೇಗಿರುತ್ತದೆ?
 ಏರ್ ಹೋಸ್ಟೆಸ್ ಆಗಲು ವಿವಿಧ ಸುತ್ತಿನ ಸಂದರ್ಶನಗಳು ಹಾಗೂ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ.
 ಮೊದಲ ಹಂತವು ಲಿಖಿತ ಪರೀಕ್ಷೆಯಾಗಿದೆ. ಈ ಪರೀಕ್ಷೆಯೂ ತರ್ಕ ಮತ್ತು ತಾರ್ಕಿಕ ಸಾಮರ್ಥ್ಯದ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ.
 ಈ ಸುತ್ತಿನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಗುಂಪು ಚರ್ಚೆಯಲ್ಲಿ ಪಾಲ್ಗೊಳ್ಳುತ್ತಾರೆ.
 ಗುಂಪು ಚರ್ಚೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ವೈಯಕ್ತಿಕ ಸಂದರ್ಶನ ನಡೆಸಲಾಗುತ್ತದೆ.
 ಆ ಬಳಿಕ ಫಿಟ್ನೆಸ್ ಪರೀಕ್ಷೆ ಸೇರಿದಂತೆ, ಕಣ್ಣಿನ ಸೈಟ್ ಅನ್ನು ಸಹ ಪರಿಶೀಲಿಸಲಾಗುತ್ತದೆ. ಕನಿಷ್ಟ ಕಣ್ಣಿನ ದೃಷ್ಟಿ 6/9 ಆಗಿರಬೇಕು. ಈ ಎಲ್ಲಾ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗೆ ಏರ್ ಹೋಸ್ಟೆಸ್ ತರಬೇತಿ ನೀಡಲಾಗುತ್ತದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!