ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಬಡತನವೇ ಮೂವರನ್ನು ಬಲಿ ತೆಗೆದುಕೊಳ್ತಾ?

ಒಂದೇ ಕುಟುಂಬದ ಮೂವರು ಆತ್ಮಹತ್ಯೆ; ಬಡತನವೇ ಮೂವರನ್ನು ಬಲಿ ತೆಗೆದುಕೊಳ್ತಾ?

ಶಿವಮೊಗ್ಗ ನಗರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಒಂದೇ ಕುಟುಂಬದ ಮೂವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕಿತ್ತು ತಿನ್ನುವ ಬಡತನ, ತಮ್ಮನಿಗೆ ಅನಾರೋಗ್ಯ, ಬೆಳೆದು ನಿಂತ ಮಗ ನೆಟ್ಟಗೆ ದುಡಿಯಲಿಲ್ಲ. ಹೀಗಾಗಿ ಮಹಿಳೆಯೇ ದುಡಿದು ಸಂಸಾರ ನಡೆಸುತ್ತಿದ್ದಳು. ಮನೆಯಲ್ಲಿ ಒಬ್ಬಳೇ ದುಡಿದು ಸಾಕಾಗಿ ಹೋಗಿದ್ದ ಮಹಿಳೆಯು ಇಬ್ಬರಿಗೂ ವಿಷಕೊಟ್ಟು ತಾನು ವಿಷಸೇವಿಸಿ ಆತ್ಮಹತ್ಯೆ ಶರಣಾಗಿದ್ದಾಳೆ

ಶಿವಮೊಗ್ಗ ನಗರದ ಓಟಿ ರಸ್ತೆಯಲ್ಲಿರುವ ಆಜಾದ್ ನಗರದ ಮುಖ್ಯ ರಸ್ತೆಯಲ್ಲಿ ಎಲ್ಲರೂ ಬೆಚ್ಚಿ ಬೀಳುವ ಘಟನೆ ನಡೆದಿತ್ತು. ಕಳೆದ ಎರಡು ದಿನಗಳ ಹಿಂದೆ ಮನೆಯ ಯಜಮಾನಿ ಭುವನೇಶ್ವರಿ (40) ಮತ್ತು ಈಕೆಯ ತಮ್ಮ ಮಾರುತಿ (38) ಹಾಗೂ ಮಗ ದರ್ಶನ (22) ಮೂವರು ಮೂವರು ವಿಷಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪತಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದ. ಭುವನೇಶ್ವರಿ ಹೊಟೇಲ್ ಕೆಲಸ ಮಾಡಿಕೊಂಡಿದ್ದಳು. ಇಡೀ ಕುಟುಂಬದ ಜವಾಬ್ದಾರಿಯು ಮಹಿಳೆಯ ಮೇಲೆ ಇತ್ತು. ಮನೆಯಲ್ಲಿ ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ತಮ್ಮ ಮತ್ತು ವಯಸ್ಸಿಗೆ ಬಂದ ಮಗನು ನೆಟ್ಟಿಗೆ ದುಡಿಯುತ್ತಿರಲಿಲ್ಲ. ಈ ಇಬ್ಬರು ದುಡಿಯದೇ ಇರುವುದು ದೊಡ್ಡ ಸಮಸ್ಯೆಯಾಗಿತ್ತು

ಷ್ಟೇ ಹೇಳಿದರೂ ಇಬ್ಬರು ಯಾವುದೇ ಜವಾಬ್ದಾರಿ ತೆಗೆದುಕೊಳ್ಳಲಿಲ್ಲ. ಇದರಿಂದ ರೋಸಿ ಹೋಗಿದ್ದ ತಾಯಿ ಮೊನ್ನೆ(ಆ.11) ರಾತ್ರಿ ಇಬ್ಬರಿಗೂ ಊಟದಲ್ಲಿ ವಿಷ ಕೊಟ್ಟು ಕೊಂದಿದ್ದಾಳೆ. ಬಳಿಕ ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಮನೆ ಒಳಗೆಯಿಂದ ಲಾಕ್ ಆಗಿತ್ತು. ಅಕ್ಕ-ಪಕ್ಕದವರಿಗೆ ಶವದ ದುರ್ವಾಸನೆ ಬರುವುದಕ್ಕೆ ಶುರುವಾಗಿದೆ. ಬಳಿಕ ಕಿಟಕಿ ಗಾಜು ಒಡೆದು ನೋಡಿದಾಗ ಮೂವರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ. ಈ ಮೂವರು ಸಾವು ಕಂಡು ಕುಟುಂಬಸ್ಥರಿಗೆ ದೊಡ್ಡ ಆಘಾತವಾಗಿದ್ದು, ಸಂಬಂಧಿಗಳ ಅಕ್ರಂದನ ಮುಗಿಲು ಮುಟ್ಟಿದೆ.

  • Related Posts

    ದೂರು ನೀಡಲು ಹೋದ ಅಮಾಯಕ ದಲಿತ ಹುಡುಗರ ಮೇಲೆ ಪೊಲೀಸರಿಂದಲೇ ಹ*!

    ಯಳಂದೂರು ತಾಲ್ಲೂಕಿನ ಕಂದಹಳ್ಳಿ ದಲಿತ ಜನಾಂಗದ ಶಿವರಾಜು ಹಾಗೂ ಕುಮಾರ್ ಎಂಬುವವರು ನನ್ನ ಮೊಬೈಲ್ ಕಳ್ಳತನ ಮಾಡಿ ಅದರಲ್ಲಿದ್ದ ಫೋನ್ ಪೇ/ಯು.ಪಿ.ಐ ಖಾತೆಯಲ್ಲಿ ಪಿನ್ ನಂಬರ್ ನಕಲು ಮಾಡಿ ರೂ.10.560/- ರೂಪಾಯಿಗಳನ್ನು ಅಕ್ರಮವಾಗಿ ಡ್ರಾ ಮಾಡಿರುವ ಬಗ್ಗೆ ದೂರು ನೀಡಲು ಯಳಂದೂರು…

    ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ಹರಿದ ನೆತ್ತರು!

    ಉಡುಪಿಯ ಮಲ್ಪೆ ಬೀಚ್‌ನಲ್ಲಿ ಪ್ರೇಮ ಪ್ರಕರಣದ ರಾಜಿ ಪಂಚಾಯಿತಿ ವೇಳೆ ಗಲಾಟೆ ಸಂಭವಿಸಿ, ಸ್ಥಳೀಯ ಮುಖಂಡ ಮಂಜು ಕೊಳ ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿಯಲಾಗಿದೆ. ಗಲಾಟೆ ತಡೆಯಲು ಬಂದ ಮತ್ತಿಬ್ಬರ ಮೇಲೂ ಹ* ನಡೆಸಲಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ…

    You Missed

    ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

    ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

    ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

    ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

    ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

    ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

    ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

    ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

    ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

    ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

    ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

    ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!