
ಹಿಮಾವೃತ ಪ್ರದೇಶದಲ್ಲಿ ಅತ್ಯಪರೂಪದ ಬಿಳಿ ಬಣ್ಣದ ಆಲ್ಬಿನೋ ಜಿಂಕೆ ಕಾಣಿಸಿಕೊಂಡಿದೆ. ಕಾಡಿನ ಸಮೀಪದಲ್ಲುರುವ ರಸ್ತೆಯಲ್ಲಿ ಹೋಗುತ್ತಿರುವ ವೇಳೆ ಮಹಿಳೆಯೊಬ್ಬರ ಕಣ್ಣಿಗೆ ಸುಂದರವಾದ ಆಲ್ಬಿನೋ ಜಿಂಕೆ ಕಾಣಿಸಿಕೊಂಡಿದ್ದು, ಈ ದೃಶ್ಯವನ್ನು ಆಕೆ ಕ್ಯಾಮೆರಾದಲ್ಲಿ ಸೆರೆ ಹಿಡಿದು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಹಿಂದೆ ಕಬಿನಿಯಲ್ಲಿಯೂ ಬಿಳಿ ಬಣ್ಣದ ಜಿಂಕೆಯೊಂದು ಕಾಣಿಸಿಕೊಂಡಿತ್ತು. ಅಲ್ಬಿನೋ ಜಿಂಕೆಗಳು ಅತ್ಯಂತ ಅಪರೂಪದ ಮೃಗಗಳಾಗಿವೆ. ಪ್ರತಿ ಒಂದು ಲಕ್ಷ ಜಿಂಕೆಗಳ ಜನನದಲ್ಲಿ ಒಂದು ಮಾತ್ರ ಈ ಬಿಳಿ ಬಣ್ಣದ ಜಿಂಕೆ ಜನಿಸುತ್ತವೆ. ರಕ್ತದಲ್ಲಿನ ಮೆಲನಿನ್ ಎಂಬ ಅಂಶದ ಕೊರತೆಯಿಂದಾಗಿ ಕೆಲವೊಂದು ಜಿಂಕೆಗಳು ಹೀಗೆ ಬಿಳಿ ಬಣ್ಣವನ್ನು ಹೊಂದಿರುತ್ತವೆ. ಹೀಗಿದ್ದರೂ ಇವುಗಳು ನೋಡಲು ಬಹಳ ಸುಂದರವಾಗಿರುತ್ತವೆ. ಇದೀಗ ಮತ್ತೊಮ್ಮೆ ಶ್ವೇತ ವರ್ಣದ ಜಿಂಕೆ ಕಾಣಿಸಿಕೊಂಡಿದೆ.

AccuWeather ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಹಿಮದ ರಾಶಿಯ ಮಧ್ಯೆ ಗುಲಾಬಿ ಬಣ್ಣದ ಕಂಗಳ ಹಾಗೂ ಶ್ವೇತ ವರ್ಣದಿಂದ ಕೂಡಿದ ಆಲ್ಬಿನೋ ಜಿಂಕೆ ನಿಂತಿರುವ ಸುಂದರ ದೃಶ್ಯವನ್ನು ಕಾಣಬಹುದು. ಮಹಿಳೆಯೊಬ್ಬರು ಕಾರಿನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಅವರ ಕಣ್ಣಿಗೆ ಈ ಅದ್ಭುತ ಪ್ರಾಣಿ ಕಾಣಿಸಿಕೊಂಡಿದೆ.
2028 ಚುನಾವಣೆಗೂ ಹುಣಸೂರಿನ ಜನತೆ ಆಶೀರ್ವಾದ ಮಾಡ್ತರೆ… ಮುಂದಿನ ದಿನಗಳಲ್ಲಿ ಹರೀಶ್ ಗೌಡ್ರು ಸಚಿವರಾಗ್ತಾರೆ!
ಫೆಬ್ರವರಿ 2 ರಂದು ಹಂಚಿಕೊಳ್ಳಲಾದ ಈ ವಿಡಿಯೋ 1.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ʼನಾನು ನೋಡಿದ ಅತ್ಯಂತ ಸುಂದರ ಪ್ರಾಣಿಗಳಲ್ಲಿ ಇದು ಒಂದುʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ. ಮತ್ತೊಬ್ಬ ಬಳಕೆದಾರರು ʼ ವಾವ್ಹ್.. ಇದಂತೂ ತುಂಬಾ ಸುಂದರವಾದ ಪ್ರಾಣಿʼ ಎಂದು ಹೇಳಿದ್ದಾರೆ. ಇನ್ನೊಬ್ಬ ಬಳಕೆದಾರರು ʼಪರಿಪೂರ್ಣ ಸೌಂದರ್ಯಕ್ಕೆ ಉದಾಹರಣೆಯಂತಿದೆʼ ಎಂಬ ಕಾಮೆಂಟ್ ಬರೆದುಕೊಂಡಿದ್ದಾರೆ.





