
ಗಂಡನ ಮನೆಯಲ್ಲಿ ಮಗಳಿಗೆ ತೀವ್ರ ಮಾನಸಿಕ ಕಿರುಕುಳ ನೀಡಲಾಗುತ್ತಿತ್ತು. ಮದುವೆಯಾದ ಕೆಲವು ವಾರಗಳಲ್ಲೇ ಪ್ರಭಿನ್ ಕಿರುಕುಳ ನೀಡಲು ಪ್ರಾರಂಭಿಸಿದ. ಕೆಲಸವಿಲ್ಲದ ಕಾರಣಕ್ಕೆ ಕಿರುಕುಳ ನೀಡಲಾಗುತ್ತಿತ್ತು. ತಂದೆ-ತಾಯಿಗೆ ತೊಂದರೆ ಕೊಡಬಾರದು ಎಂದು ಮಗಳು ಎಲ್ಲವನ್ನೂ ಮುಚ್ಚಿಟ್ಟಳು. ಮಗಳನ್ನು ಬೈಯ್ಯುವ ವಾಯ್ಸ್ ನೋಟ್ಗಳು ನನ್ನ ಬಳಿ ಇವೆ. ದೈಹಿಕವಾಗಿಯೂ ಮಗಳಿಗೆ ಕಿರುಕುಳ ನೀಡಲಾಗುತ್ತಿತ್ತು, ಮಗಳ ದೇಹದ ಮೇಲಿನ ಗಾಯಗಳ ಬಗ್ಗೆ ಆಕೆಯ ಗೆಳತಿ ಹೇಳಿದ್ದಳು ಎಂದು ವಿಷ್ಣುಜಾಳ ತಂದೆ ತಿಳಿಸಿದ್ದಾರೆ.
ಅನ್ನಭಾಗ್ಯ ಅಕ್ಕಿಯಲ್ಲಿ ದೊಡ್ಡ ಸ್ಕ್ಯಾಮ್ ಇದೆ MLA, ಸಚಿವರ ಪಟಾಲಂ ಈ ದಂಧೆಯಲ್ಲಿ ತೊಡಗಿದೆ.!
ಸೌಂದರ್ಯ ಕಡಿಮೆ, ಕೆಲಸವಿಲ್ಲ, ವರದಕ್ಷಿಣೆ ಕಡಿಮೆ ಎಂದು ಹೇಳಿ ವಿಷ್ಣುಜಾಳಿಗೆ ಗಂಡ ಕಿರುಕುಳ ನೀಡುತ್ತಿದ್ದ ಎಂದು ಕುಟುಂಬ ಆರೋಪಿಸಿದೆ. ಇದಕ್ಕೆಲ್ಲ ಗಂಡನ ಸಂಬಂಧಿಕರು ಸಹಕರಿಸಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಗಂಡ ಮತ್ತು ಆತನ ಕುಟುಂಬದ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯುವತಿಯ ಕುಟುಂಬ ಒತ್ತಾಯಿಸಿತ್ತು. ಇದರ ಬೆನ್ನಲ್ಲೇ ಮಂಜೇರಿ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದಾರೆ.





