ಗೋಲ್ಡನ್ ಡಕ್, ಡೈಮಂಡ್ ಡಕ್, ಅಲ್ಲದೆ ಕ್ರಿಕೆಟ್ನಲ್ಲಿ 8 ಡಕ್ ಔಟ್ಗಳಿವೆ ಗೊತ್ತಾ? ಗೊತ್ತಿಲ್ಲವಾದಾರೆ ಈ ಮಾಹಿತಿ ನಿಮಗಾಗಿ….

ಕ್ರಿಕೆಟ್ನಲ್ಲಿ ಡಕ್ ಔಟ್ ಎಂಬ ಪದ ಬಳಸುವುದು ನೀವೆಲ್ಲಾ ಕೇಳಿರುತ್ತೀರಿ, ಇಲ್ಲಾ ಓದಿರುತ್ತೀರಿ. ಸಾಮಾನ್ಯವಾಗಿ ಕ್ರಿಕೆಟ್ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದರೆ ಗೋಲ್ಡನ್ ಡಕ್ ಎಂಬ ಪದ ಬಳಕೆ ಕೇಳಿ ಬರುತ್ತಿರುತ್ತವೆ. ಆದರೆ ಆಟಗಾರನೊಬ್ಬ ಶೂನ್ಯಕ್ಕೆ ಔಟಾಗುವುದನ್ನು ಗೋಲ್ಡನ್ ಡಕ್ ಎಂದು ನೀವಂದುಕೊಂಡಿದ್ದರೆ ನಿಮ್ಮ ಊಹೆ ತಪ್ಪು. ಏಕೆಂದರೆ ಕ್ರಿಕೆಟ್ನಲ್ಲಿ ಗೋಲ್ಡನ್ ಡಕ್ ಝೀರೋಗೆ ಔಟಾದ್ರೆ ಬಳಸುವ ಪದವಲ್ಲ. ಬದಲಾಗಿ ಬ್ಯಾಟ್ಸ್ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಇಲ್ಲಿ ಗೋಲ್ಡನ್ ಡಕ್ ಜೊತೆ ಸಿಲ್ವರ್, ಡೈಮಂಡ್, ಪ್ಲಾಟಿನಂ ಡಕ್ ಔಟ್ಗಳಿವೆ ಎಂಬುದು ಅನೇಕರಿಗೆ ತಿಳಿದಿಲ್ಲ. ಹಾಗಿದ್ರೆ ಕ್ರಿಕೆಟ್ ಅಂಗಳದಲ್ಲಿರುವ ಇತರೆ ಡಕ್ ಔಟ್ಗಳಾವುವು ಎನ್ನುವ ಕುತೂಹಲಕಾರಿ ಮಾಹಿತಿ ಇಲ್ಲಿದೆ ನೋಡಿ….
1- ಗೋಲ್ಡನ್ ಡಕ್: ಬ್ಯಾಟ್ಸ್ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಮಾತ್ರ ಅದು ಗೋಲ್ಡನ್ ಡಕ್. ಉದಾಹರಣೆಗೆ 1 ಎಸೆತಗಳಲ್ಲಿ 0 ರನ್ಗಳಿಸಿ ಬೌಲ್ಡ್ ಅಥವಾ ಕ್ಯಾಚ್ ನೀಡಿ ಔಟಾಗುವುದನ್ನು ಗೋಲ್ಡನ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

2- ಸಿಲ್ವರ್ ಡಕ್: ಬ್ಯಾಟ್ಸ್ಮನ್ ತನ್ನ ಇನ್ನಿಂಗ್ಸ್ನ ಎರಡನೇ ಎಸೆತದಲ್ಲಿ ಶೂನ್ಯಕ್ಕೆ ಔಟಾದರೆ, ಅದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ. ಇಲ್ಲೂ ಕೂಡ ಎರಡು ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸುವುದನ್ನು ಸಿಲ್ವರ್ ಡಕ್ ಎಂದು ಕರೆಯಲಾಗುತ್ತದೆ.

3- ಬ್ರೋನ್ಝ್ ಡಕ್: ಬ್ಯಾಟ್ಸ್ಮನ್ ತನ್ನ ಇನ್ನಿಂಗ್ಸ್ನ ಮೂರನೇ ಎಸೆತದಲ್ಲಿ ಖಾತೆ ತೆರೆಯದೆ ಔಟಾದರೆ ಅದು ಬ್ರೋನ್ಝ್ ಡಕ್. ಅಂದರೆ ಮೂರು ಎಸೆತಗಳನ್ನು ಎದುರಿಸಿ ಕ್ಯಾಚ್ ಅಥವಾ ಬೌಲ್ಡ್ ಆಗಿ ವಿಕೆಟ್ ಒಪ್ಪಿಸಿದರೆ ಅದು ಬ್ರೋನ್ಝ್ ಡಕ್ ಔಟ್.

4- ಡೈಮಂಡ್ ಡಕ್: ಬ್ಯಾಟ್ಸ್ಮನ್ ಒಂದೇ ಒಂದು ಎಸೆತವನ್ನು ಎದುರಿಸದೆ ಔಟಾದರೆ ಅದನ್ನು ‘ಡೈಮಂಡ್ ಡಕ್’ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ನಾನ್ ಸ್ಟ್ರೈಕ್ನಲ್ಲಿದ್ದ ಆಟಗಾರರು ಒಂದು ಎಸೆತವನ್ನು ಎದುರಿಸದೇ ರನೌಟ್ ಆದರೆ ಅದನ್ನು ಡೈಮಂಡ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

5- ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್: ಇನ್ನಿಂಗ್ಸ್ನ ಮೊದಲ ಎಸೆತದಲ್ಲಿ ಬ್ಯಾಟ್ಸ್ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಪಂದ್ಯದ ಮೊದಲ ಓವರ್ನ ಮೊದಲ ಎಸೆತದಲ್ಲೇ ಶೂನ್ಯಕ್ಕೆ ಔಟಾದರೆ ಅದು ಪ್ಲಾಟಿನಂ ಡಕ್ ಅಥವಾ ರಾಯಲ್ ಡಕ್.

6- ಪೇರ್ ಡಕ್: ಟೆಸ್ಟ್ನಲ್ಲಿ ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟ್ಸ್ಮನ್ ಶೂನ್ಯಕ್ಕೆ ಔಟಾದಾದರೆ ಅದನ್ನು ಪೇರ್ ಡಕ್ ಎಂದು ಕರೆಯಲಾಗುತ್ತದೆ. ಅಂದರೆ ಮೊದಲ ಇನಿಂಗ್ಸ್ನಲ್ಲಿ ಶೂನ್ಯಕ್ಕೆ ಔಟಾಗಿ ದ್ವಿತೀಯ ಇನಿಂಗ್ಸ್ನಲ್ಲೂ ಸೊನ್ನೆ ಸುತ್ತಿದರೆ ಅದು ಪೇರ್ ಡಕ್ ಔಟ್.

7- ಕಿಂಗ್ ಪೇರ್ ಡಕ್: ಟೆಸ್ಟ್ನ ಎರಡೂ ಇನ್ನಿಂಗ್ಸ್ಗಳಲ್ಲಿ ಬ್ಯಾಟ್ಸ್ಮನ್ ಎದುರಿಸಿದ ಮೊದಲ ಎಸೆತದಲ್ಲೇ ಔಟಾದರೆ ಅದನ್ನು ಕಿಂಗ್ ಪೇರ್ ಡಕ್ ಔಟ್ ಎಂದು ಕರೆಯಲಾಗುತ್ತದೆ.

8 – ಲಾಫಿಂಗ್ ಡಕ್: ಇನ್ನಿಂಗ್ಸ್ನ ಕೊನೆಯ ಎಸೆತದಲ್ಲಿ ಬ್ಯಾಟ್ಸ್ಮನ್ ಶೂನ್ಯಕ್ಕೆ ಔಟಾದರೆ ಅದನ್ನು ಲಾಫಿಂಗ್ ಡಕ್ ಔಟ್ ಎಂದು ಕರೆಯಲಾಗುತ್ತದೆ. ಉದಾಹರಣೆಗೆ ಟಿ20, ಏಕದಿನ ಅಥವಾ ಟೆಸ್ಟ್ ಪಂದ್ಯದ ಅಂತಿಮ ಓವರ್ನ ಕೊನೆಯ ಎಸೆತದಲ್ಲಿ ಸೊನ್ನೆಗೆ ಔಟಾದರೆ ಅದು ಲಾಫಿಂಗ್ ಡಕ್ ಔಟ್.

 

 

 

 

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!