ಮೇ 31ಕ್ಕೆ ಡೆಡ್ ಲೈನ್ ನೀಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ.

ಗುಡ್ ನ್ಯೂಸ್ ಕನ್ನಡ ವಾಹಿನಿಯೊಂದಿಗೆ ಸಂದರ್ಶನ ನೀಡಿದ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿ.ಎಸ್ ಸಂಗ್ರೇಶಿ. ZP,TP ಕಾರ್ಪೊರೇಷನ್ ಎಲೆಕ್ಷನ್ ಸೇರಿದಂತೆ ವಿವಿಧ ಸ್ಥಳೀಯ ಸಂಸ್ಥೆ ಚುನಾವಣೆ ಕುರಿತು ಹಲವಾರು ಹೇಳಿಕೆಗಳನ್ನು ನೀಡಿದ್ದಾರೆ. ಸರ್ಕಾರದ ಮಂದ ನಡೆಯಿಂದ ಲೋಕಲ್ ವಾರ್ ಗೆ ಬೆಲೆ ಆಗ್ತಾ ಇದೆ. ಈ ಡಿಲೆಯಿಂದ ಸರ್ಕಾರಕ್ಕೂ ಸಹ ಕೆಟ್ಟ ಪರಿಣಾಮ ಬೀರಬಹುದು.

ಈ ಚುನಾವಣೆ ಕುರಿತಂತೆ ಮೇ 31ಕ್ಕೆ ಸರ್ಕಾರಕ್ಕೆ ಡೆಡ್ ಲೈನ್ ಇರುತ್ತದೆ. ಅಷ್ಟರೊಳಗೆ ಸರ್ಕಾರ ಪಟ್ಟಿ ಕೊಡಲಿಲ್ಲವಾದರೆ, ಸುಪ್ರೀಂ ಕೋರ್ಟ್ ನ ಮೊರೆ ಹೋಗುತ್ತೇವೆ. ಚುನಾವಣೆಗೆ ನಾವು ಸಂಪೂರ್ಣವಾಗಿ ತಯಾರಿದ್ದೇವೆ. ಈ ವಿಷಯದ ಕುರಿತಂತೆ ನಾವು ಹೋದಲ್ಲಿ ಬಂದಲ್ಲಿ ಚುನಾವಣೆಯ ಬಗ್ಗೆ ಪ್ರಸ್ತಾಪವನ್ನು ಮಾಡ್ತಾ ಇದ್ದಾರೆ. ಈ ಚುನಾವಣಾ ವಿಷಯದಲ್ಲಿ ಇನ್ನೂ ತಡವಾದರೆ ನಾವು ಖಂಡಿತವಾಗಿಯೂ ಸುಪ್ರೀಂಕೋರ್ಟ್ ಮೊರೆ ಹೋಗುತ್ತೇವೆ ಎಂದು ಕಡಾ ಖಂಡಿತವಾಗಿ ಹೇಳಿಕೆ ನೀಡಿದ್ದಾರೆ.

ಇನ್ನು ಮತದಾರರ ಪಟ್ಟಿ ಕೂಡ ರೆಡಿ ಇದೆ ರಿಸರ್ವೇಶನ್ ಕೊಡಬೇಕಾಗಿರೋದು ಬಾಕಿ ಇದೆ ಅಷ್ಟೇ. ಸ್ಥಳೀಯ ಸಂಸ್ಥೆ ಚುನಾವಣೆ ಡಿಲೆ ಆಗ್ತಾ ಇರೋದ್ರ ಬಗ್ಗೆ ಬೇಸರವನ್ನ ವ್ಯಕ್ತಪಡಿಸಿ ಸರ್ಕಾರದ ವಿರುದ್ಧ ಗರಂ ಆಗಿ ಮಾತನಾಡಿದರು. ಅಷ್ಟೇ ಅಲ್ಲದೆ ನಾಲ್ಕು ಎಂಎಲ್ಎ ಕ್ಷೇತ್ರಗಳ ಬಗ್ಗೆ ಮಾಹಿತಿ ಸಂಗ್ರಹಣೆಯೂ ಸಹ ಈಗಾಗಲೇ ನಡೆದಿದೆ. ನಾಲಕ್ಕು ಕ್ಷೇತ್ರದಿಂದ 7 ಲಕ್ಷಕ್ಕೂ ಹೆಚ್ಚು ಮತದಾರರು ಇದ್ದಾರೆ. ಅಷ್ಟೇ ಅಲ್ಲದೆ ಭಾರತೀಯ ಚುನಾವಣಾ ಆಯೋಗ ಮತದಾರರ ಪಟ್ಟಿಯನ್ನು ಸಹ ರೆಡಿ ಮಾಡಿಕೊಂಡಿದ್ದಾರೆ. ಅದರ ಆಧಾರದ ಮೇಲೆ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಮಾಡ್ತೀವಿ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೆ ಸಂವಿಧಾನದ ನೀತಿ ನಿಯಮಗಳನ್ನು ಸಹ ಹೇಳಿದರು. ಐದು ವರ್ಷ ಅವಧಿ ಮುಗಿಯುವ ಆರು ತಿಂಗಳ ಮುಂಚೆ ಚುನಾವಣೆ ಮಾಡ್ಬೇಕು, ಇದರ ಬಗ್ಗೆ ಸ್ಪಷ್ಟವಾಗಿ ಸಂವಿಧಾನದಲ್ಲಿ ಉಲ್ಲೇಖ ಆಗಿದೆ ಆದರೆ ಸರ್ಕಾರಗಳು ಮೀಸಲಾತಿ ಪಟ್ಟಿ ಕೊಡದೆ ವಿಳಂಬ ಮಾಡ್ತಾ ಇದ್ದಾರೆ. ಜನಗಳಿಗೆ ನಾವು ಉತ್ತರ ಹೇಳಿ ಸಾಕಾಗಿದೆ. ಮೇ 31ಕ್ಕೆ ಅಂತಿಮವಾಗಿ ಸರ್ಕಾರಕ್ಕೆ ಡೆಡ್ ಲೈನ್, ಅದರ ಒಳಗಾಗಿ ಅವರು ಸರಿಪಡಿಸಿಕೊಳ್ಳದಿದ್ದರೆ, ಕೋರ್ಟ್ ಮೂಲಕ ಹೋಗಿ ಚುನಾವಣೆಯನ್ನು ಮಾಡೇ ಮಾಡ್ತೀವಿ. ಈಗಾಗಲೇ ಸಾಕಷ್ಟು ಬಾರಿ ಸರ್ಕಾರಕ್ಕೆ ಪತ್ರವನ್ನು ಬರೆದು ಆಗಿದೆ ಇನ್ನೇನಿದ್ರೂ ಸುಪ್ರೀಂಕೋರ್ಟ್ ಮೊರೆ ಹೋಗಿ ಕಲೆಕ್ಷನ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದು ಮೈಸೂರಿನಲ್ಲಿ ರಾಜ್ಯ ಮುಖ್ಯ ಚುನಾವಣಾ ಆಯುಕ್ತ ಜಿಎಸ್ ಸಂಗ್ರೇಶಿ ಹೇಳಿಕೆಯನ್ನು ನೀಡಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!