ವಾಹನಗಳಿಗೆ ಇನ್ಷೂರೆನ್ಸ್ ಇಲ್ಲಾಂದ್ರೆ ಪೆಟ್ರೋಲ್ ಸಿಗಲ್ಲ? ಜಾರಿ ಬರುತ್ತಿವೆ ಹೊಸ ನಿಯಮಗಳು.

ಥರ್ಡ್ ಪಾರ್ಟಿ ಇನ್ಷೂರೆನ್ಸ್ ಇಲ್ಲದ ವಾಹನಗಳಿಗೆ ಸಾಕಷ್ಟು ನಿರ್ಬಂಧಗಳನ್ನು ವಿಧಿಸಲು ಸರ್ಕಾರ ಯೋಜಿಸಿದೆ. ಪೆಟ್ರೋಲ್, ಡೀಸಲ್ ಸಿಗುವುದಿಲ್ಲ. ಹೆದ್ದಾರಿಯಲ್ಲಿ ಫಾಸ್ಟ್ಯಾಗ್ ಲೇನ್ನಲ್ಲಿ ಹೋಗಲು ಆಗುವುದಿಲ್ಲ. ದೊಡ್ಡ ಮೊತ್ತದ ದಂಡ ಕಟ್ಟಬೇಕಾಗಬಹುದು. ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಅಳವಡಿಕೆಗೆ ಉತ್ತೇಜಿಸಲು ಹಲವು ಕ್ರಮಗಳನ್ನು ಸರ್ಕಾರ ಯೋಜಿಸುತ್ತಿದೆ.
ನವದೆಹಲಿ : ನಿಮ್ಮ ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮಾಡಿಸದೇ ಇದ್ದರೆ ಪೆಟ್ರೋಲ್ ಬಂಕ್ನಲ್ಲಿ ನಿಮಗೆ ಪೆಟ್ರೋಲ್ ಅಥವಾ ಡೀಸಲ್ ಸಿಕ್ಕೋದೇ ಹೋಗಬಹುದು. ಹೆದ್ದಾರಿಯಲ್ಲಿ ಟೋಲ್ ಬಳಿ ಫಾಸ್ಟ್ಯಾಗ್ ಲೇನ್ನಲ್ಲಿ ಸಾಗಲು ನಿಮ್ಮ ವಾಹನಕ್ಕೆ ಅವಕಾಶ ಸಿಗದೇ ಹೋಗಬಹುದು. ಇನ್ಷೂರೆನ್ಸ್ ಇಲ್ಲದ ವಾಹನ ಮಾಲೀಕರಿಗೆ ಡ್ರೈವಿಂಗ್ ಲೈಸೆನ್ಸ್ ನವೀಕರಣ ಸಾಧ್ಯವಾಗದೇ ಹೋಗಬಹುದು. ಗಾಡಿಗೆ ಇನ್ಷೂರೆನ್ಸ್ ಇಲ್ಲದಿದ್ದರೆ ಇನ್ನೂ ಬೇರೆ ಬೇರೆ ನಿರ್ಬಂಧಗಳು, ದಂಡಗಳನ್ನು ನೀವು ಎದುರಿಸಬೇಕಾಗಬಹುದು. ಕೇಂದ್ರ ಸರ್ಕಾರ ಈ ರೀತಿಯ ಆಲೋಚನೆಯಲ್ಲಿದೆ.
ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಕವರೇಜ್ ಅಳವಡಿಕೆಗೆ ಉತ್ತೇಜಿಸಲು ವಿವಿಧ ಕ್ರಮಗಳನ್ನು ಅವಲೋಕಿಸುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಹಣಕಾಸು ಸಚಿವಾಲಯ ಮನವಿ ಮಾಡಿದೆ. ಭಾರತದಲ್ಲಿ ಈಗಲೂ ಕೂಡ ಹೆಚ್ಚಿನ ವಾಹನಗಳು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಹೊಂದಿಲ್ಲ. 1988ರ ಮೋಟಾರು ವಾಹನ ಕಾಯ್ದೆ ಪ್ರಕಾರ ಎಲ್ಲಾ ಮೋಟಾರು ವಾಹನಗಳು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಪಾಲಿಸಿ ಮಾಡಿಸುವುದು ಕಡ್ಡಾಯವಾಗಿದೆ.
ವಾಹನಗಳಿಗೆ ಥರ್ಡ್ ಪಾರ್ಟಿ ವಿಮಾ ಕವರೇಜ್ ಅನ್ನು ಅಳವಡಿಸಲು ಉತ್ತೇಜಿಸಲು ಸಂಸದೀಯ ಸ್ಥಾಯಿ ಸಮಿತಿಯೊಂದು ಸರ್ಕಾರಕ್ಕೆ ಕೆಲ ಶಿಫಾರಸುಗಳನ್ನು ನೀಡಿತ್ತು. ಸರ್ಕಾರ ಈ ವಿಚಾರದಲ್ಲಿ ಗಂಭೀರವಾಗಿದೆ.

ವಾಹನಗಳಿಗೆ ಥರ್ಡ್ ಪಾರ್ಟಿ ಇನ್ಷೂರೆನ್ಸ್ ಯಾಕೆ ?
ವಾಹನಗಳ ಇನ್ಷೂರೆನ್ಸ್ನಲ್ಲಿ ಮೂರು ವಿಧಗಳಿವೆ. ಫಸ್ಟ್ ಪಾರ್ಟಿ ಇನ್ಷೂರೆನ್ಸ್, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಮತ್ತು ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್. ಇದರಲ್ಲಿ ಫಸ್ಟ್ ಪಾರ್ಟಿ ಇನ್ಷೂರೆನ್ಸ್ ಎಂಬುದು ಪಾಲಿಸಿದಾರನಿಗೆ ಮತ್ತು ವಾಹನಕ್ಕೆ ಮಾತ್ರ ಇನ್ಷೂರೆನ್ಸ್ ಕವರೇಜ್ ಸಿಗುತ್ತದೆ.
ಥರ್ಡ್ ಪಾರ್ಟಿ ಇನ್ಷೂರೆನ್ಸ್ನಲ್ಲಿ, ಥರ್ಡ್ ಪಾರ್ಟಿ ಅಥವಾ ಮೂರನೇ ವ್ಯಕ್ತಿಗೆ ವಿಮಾ ಕವರೇಜ್ ಸಿಗುತ್ತದೆ. ಅಂದರೆ, ಥರ್ಡ್ ಪಾರ್ಟಿ ಇನ್ಷೂರೆನ್ಸ್ ಹೊಂದಿರುವ ವಾಹನದಿಂದ ಯಾವುದಾದರೂ ಅಪಘಾತ ಸಂಭವಿಸಿದರೆ, ಅದರಿಂದ ಬೇರೆ ವ್ಯಕ್ತಿಗಳಿಗೆ ಹಾನಿಯಾದರೆ, ಅದಕ್ಕೆ ವಿಮಾ ಕವರೇಜ್ ಇರುತ್ತದೆ.
ಕಾಂಪ್ರೆಹೆನ್ಸಿವ್ ಇನ್ಷೂರೆನ್ಸ್ ಪಾಲಿಸಿಯು ಫಸ್ಟ್ ಪಾರ್ಟಿ ಮತ್ತು ಥರ್ಡ್ ಪಾರ್ಟಿ ಎರಡನ್ನೂ ಒಳಗೊಂಡಿರುವ ಪಾಲಿಸಿಯಾಗಿದೆ. ವಾಹನದಿಂದ ಬೇರೆಯವರಿಗೆ ಹಾನಿಯಾದ ಸಂದರ್ಭದಲ್ಲಿ ನಷ್ಟ ಭರಿಸಲು ಥರ್ಡ್ ಪಾರ್ಟಿ ಇನ್ಷೂರೆನ್ಸ್ ಬಹಳ ಅಗತ್ಯ. ಈ ಕಾರಣಕ್ಕೆ ಸರ್ಕಾರವು ಈ ವಿಮೆ ಅಳವಡಿಕೆಗೆ ಒತ್ತು ನೀಡುತ್ತಿದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!