ವಿಧಾನಸಭೆಯಲ್ಲಿ ಬಿಜೆಪಿ ಧರಣಿ ವೇಳೆ ಸ್ಪೀಕರ್ ಪೀಠಕ್ಕೆ ಅಗೌರವ ; ಬಿಜೆಪಿಯ 18 ಶಾಸಕರು 6 ತಿಂಗಳು ಸಸ್ಪೆಂಡ್.

ಬೆಂಗಳೂರು :- ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐ ಇಲ್ಲವೇ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಒಬ್ಬರಿಂದ ತನಿಖೆ ನಡೆಸುವಂತೆ ಆಗ್ರಹಿಸಿ, ಧರಣಿ ನಡೆಸುವ ವೇಳೆ ವಿಧೇಯಕ ಹರಿದು. ಕಾಗದ ವನ್ನು ಸ್ಪೀಕರ್ ಮೇಲೆ ತೂರಿ, ಸಭಾ ಧ್ಯಕ್ಷರ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನು ಮುಂದಿನ 6 ತಿಂಗಳವರೆಗೆ ಸದನದಿಂದ ಅಮಾ ನತುಗೊಳಿಸಿ ಸ್ಪೀಕರ್ ಯು.ಟಿ.ಖಾದರ್ ಆದೇಶಿಸಿ, ಸದನವನ್ನು ಅನಿರ್ದಿಷ್ಟಾ ವಧಿಗೆ ಮುಂದೂಡಿದರು.


ಸದನ ಮುಂದೂಡುವುದಕ್ಕೂ ಮುನ್ನ ಸದಸ್ಯರಾದ ದೊಡ್ಡನಗೌಡ ಪಾಟೀಲ್, ಡಾ.ಸಿ.ಎನ್.ಅಶ್ವತ್ಥನಾರಾಯಣ, ಎಸ್.ಆರ್. ವಿಶ್ವನಾಥ್, ಬೈರತಿ ಬಸವರಾಜು, ಎಂ.ಆರ್. ಪಾಟೀಲ್, ಚನ್ನಬಸಪ್ಪ ಉಮಾನಾಥ್ ಎ. ಕೋಟ್ಯಾನ್, ಬಿ.ಸುರೇಶ್ ಗೌಡ, ಡಾ.ಶೈಲೇಂದ್ರ ಬೆಲ್ದಾಳೆ, ಶರಣು ಸರಲಗರ, ಸಿ.ಕೆ.ರಾಮಮೂರ್ತಿ, ಯಶ್ ಪಾಲ್ ಎ. ಸುವರ್ಣ, ಬಿ.ಪಿ. ಹರೀಶ್, ಡಾ.ವೈ.ಭರತ್ ಶೆಟ್ಟಿ ಬಸವರಾಜ್ ಮತ್ತಿಮೂಡ್, ಧೀರಜ್ ಮುನಿರಾಜು, ಮುನಿರತ್ನ ಹಾಗೂ ಡಾ.ಚಂದ್ರು ಲಮಾಣಿ ಅವರುಗಳನ್ನು ಹೆಸರಿಸಿ, ಸಭಾಧ್ಯಕ್ಷರು ಸದನದಿಂದ ಅಮಾನತುಗೊಳಿಸಿದರು. ಕೂಡಲೇ ಮಾರ್ಷಲ್ಗಳು ಆ ಶಾಸಕ ರನ್ನು ಸದನದಿಂದ ಹೊತ್ತು ತಂದು, ಹೊರಗೆಬಿಟ್ಟರು. ಮಧ್ಯಾಹ್ನದ ನಂತರ ಸದನ ಸೇರುತ್ತಿದ್ದಂತೆ ಸಭಾಧ್ಯಕ್ಷರ ಪೀಠಕ್ಕೆ ಈ 18 ಶಾಸಕರು ಕೆಲ ವಿಧೇಯಕಗಳ ಪ್ರತಿಯನ್ನು ಹರಿದು ಸ್ಪೀಕರ್ ಮೇಲೆ ತೂರಿ, ಅವರಿಗೆ ಅಗೌರವ ತರುವ ರೀತಿಯಲ್ಲಿ ನಡೆದುಕೊಂಡಿರುವುದು ಪರಿಶೀಲನೆ ಯಿಂದ ಕಂಡುಬಂದಿದೆ ಎಂದು ಸ್ಪೀಕರ್ ಪ್ರಕಟಿಸಿ ದರು. ಹೆಸರಿಸಿದ ಎಲ್ಲಾ 18 ಶಾಸಕರನ್ನು ಆರು ತಿಂಗಳ ಅವಧಿಗೆ ಸದನದಿಂದ ಅಮಾನತು ಮಾಡುವಂತೆ ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ್ ಮಂಡಿಸಿದ ಪ್ರಸ್ತಾವವನ್ನು ಸಭಾಧ್ಯಕ್ಷರು ಧ್ವನಿಮತಕ್ಕೆ ಹಾಕಿದರು. ಗದ್ದಲದ ನಡುವೆಯೇ ನಿರ್ಣಯ ಅಂಗೀಕಾರ ವಾಯಿತು. ವಿಧಾನಸಭೆ ಕಲಾಪ ಆರಂಭದಿಂದಲೂ ಹನಿಟ್ರಾಪ್ ಪ್ರಕರಣ ಮುಂದಿಟ್ಟು ಕೊಂಡು ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು, ಸರ್ಕಾರದ ವಿರುದ್ಧ ಹರಿಹಾಯ್ದು ಧರಣಿ ನಡೆಸಿದರು. ಅಲ್ಲದೇ, ಬಜೆಟ್ ಹಾಗೂ ಮಸೂದೆಗಳ ಪ್ರತಿಗಳನ್ನು ಹರಿದು ಪ್ರತಿಭಟಿಸಿದರು.


ಇದರ ನಡುವೆಯೇ ರಾಜ್ಯ ಬಜೆಟ್, ಶಾಸಕರ ವೇತನ ಹಾಗೂ ಕೆಲವು ಮಸೂದೆಗಳಿಗೆ ಸದನದ ಅಂಗೀಕಾರ ಪಡೆದು ಕೊಳ್ಳಲಾಯಿತು. ಬಜೆಟ್ ಪ್ರತಿಗಳನ್ನು ಹರಿದುಹಾಕಿದ್ದರಿಂದ ರೋಷಗೊಂಡ ಮುಖ್ಯಮಂತ್ರಿ ಹಾಗೂ ಸಚಿವರು, ಪ್ರತಿಭಟನೆ ನಡೆಸುತ್ತಿದ್ದವರನ್ನು ಸದನದಿಂದ ಹೊರಹಾಕುವಂತೆ ಮನವಿ ಮಾಡಿದರು. ಆದರೂ ಧರಣಿನಿರತರು ಪೀಠದತ್ತ ತೆರಳಿ ಗದ್ದಲ ಎಬ್ಬಿಸಿದರು. ಇದಕ್ಕೂ ಮುನ್ನ ಬೆಳಗ್ಗೆ ಸದನ ಆರಂಭವಾಗು ತ್ತಿದ್ದಂತೆ ಬಿಜೆಪಿಯ ಸುನೀಲ್ ಕುಮಾರ್ ಮಾತನಾಡಿ, ಸಚಿವರು ಹನಿಟ್ರ್ಯಾಪ್ ಕುರಿತು ಸದನದಲ್ಲಿ ಉಲ್ಲೇಖ ಮಾಡಿದ್ದಾರೆ. ಶಾಸನ ಸಭೆಯಲ್ಲಿ ಮೊದಲ ಬಾರಿಗೆ ಇಂತಹ ಘಟನೆ ನಡೆದಿದೆ. ಇದು ನಂಬಿಕೆಗೆ ವಿಷಪ್ರಾಸನ ಮಾಡುವ ಘಟನೆಯಾಗಿದೆ. ಸಚಿವರ ಹೇಳಿಕೆ ನಂತರ ಅನೇಕ ಸಚಿವರು, ಶಾಸಕರು, ನಮ್ಮ ಮೇಲೂ ಈ ಪ್ರಯತ್ನ ನಡೆದಿದೆ ಎಂದು ಬಹಿರಂಗವಾಗಿ ಹೇಳಿ ಕೊಂಡಿದ್ದಾರೆ. ಹನಿಟ್ರ್ಯಾಪ್ ಫ್ಯಾಕ್ಟರಿ ಇದೆಯೆಂದು ನಿಮ್ಮ ಪಕ್ಷದ ಸಚಿವರೇ ಹೇಳಿದ್ದಾರೆ, ಇಂತಹ ಪರಿಸ್ಥಿತಿ ಯಾರಿಗೂ ಬರಬಾರದು, ಮೊದಲು ಈ ವಿಚಾರಕ್ಕೆ ಉತ್ತರಿಸಿ ನಂತರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿ ಎಂದು ಪಟ್ಟು ಹಿಡಿದರು.

ಈ ಸಂದರ್ಭದಲ್ಲಿ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ಏರಿದ ಧನಿಯಲ್ಲಿ ಮಾತಿನ ಚಕಮಕಿ ನಡೆಯಿತು. ಸಚಿವರುಗಳನ್ನೇ ಹನಿಟ್ರ್ಯಾಪ್ ಮಾಡಲು ಹೊರಟಿ ರುವ ವಿಷಯ ನಿಮ್ಮ ಗುಪ್ತಚರ ವಿಭಾಗಕ್ಕೆ ತಿಳಿದಿಲ್ಲವೇ, ಅವರು ಏನು ಕೆಲಸ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಮಧ್ಯೆ ಪ್ರವೇಶಿಸಿದ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ಜನಪ್ರತಿನಿಧಿ ಗಳಷ್ಟೇ ಅಲ್ಲ, ಜಡ್ಜ್ಗಳೂ ಹನಿಟ್ರ್ಯಾಪ್ಗೆ ಒಳಗಾಗಿದ್ದಾರಂತೆ ಇದೊಂದು ಗಂಭೀರ ವಿಚಾರ, ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿ ಇಲ್ಲವೇ ಸಿಬಿಐನಿಂದ ತನಿಖೆ ಆಗಬೇಕು, ಮಂತ್ರಿಗಳಿಗೆ ಅಭದ್ರತೆ ಎದುರಾಗಿದೆ, ಹನಿಟ್ರ್ಯಾಪ್ ಅನ್ನು ದೊಡ್ಡ ದಂಧೆ ಮಾಡಿ ಕೊಂಡಿದ್ದಾರೆ ಎಂದು ಉಲ್ಲೇಖಿಸಿದರು.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!