ನನಗೆ ಕುಮಾರ್ ಸಾಲವನ್ನೇ ನೀಡಿರಲಿಲ್ಲ. ನನಗೆ ಸಮಸ್ಯೆ ಇದ್ದ ಕಾರಣ1.5 ಲಕ್ಷ ಸಾಲ ಕೇಳಿದ್ದೆ ಅದಕ್ಕೆ ದಿನಾಂಕ ನಮೂದಿಸದ ಚೆಕ್ ಕೇಳಿದ್ರು, ಕೊಟ್ಟಿದ್ದೆ. ವ್ಯವಹಾರದ ಹಣ ಕೊಡುತ್ತೀನಿ ಎಂದು ಹೇಳಿ ಹಣ ಕೊಡಲಿಲ್ಲ.

ಸಾಲ ಕೊಡುವುದಾಗಿ ಹೇಳಿ ದಿನಾಂಕ ನಮೂದಿಸದ ಚೆಕ್ ಪಡೆದಿದ್ದ ಕುಮಾರ್. ನಂತರ ಸಾಲವನ್ನೂ ಕೊಡದೇ ಚೆಕ್ನ್ನು ಬ್ಯಾಂಕ್ಗೆ ಪ್ರೆಸೆಂಟ್ ಮಾಡಿದ್ದ ಚೆಕ್ ಬೌನ್ಸ್ ಮಾಡಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದಾನೆ. ಈ ಕುರಿತು ನನ್ನ ಕಾನೂನು ಹೋರಾಟ ಮುಂದುವರಿಸುತ್ತೇನೆಂದು ಸ್ನೇಹಮಯಿಕೃಷ್ಣ ಪ್ರತಿಕ್ರಿಯಿಸಿದ್ದಾರೆ.





