ಈ ಸಂಬಂಧ ಸುದ್ದಿಗಾರರಿಗೆ ಮಾಹಿತಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್.
ಇಡ್ಲಿ, ವಡೆ, ಸಾಂಬಾರ್, ಕಾಫಿ, ಟೀ ಸೇರಿದಂತೆ ಪ್ಲಾಸ್ಟಿಕ್ ಚೀಲ ಗಳಲ್ಲಿ ಬಿಸಿ ಬಿಸಿ ತಿಂಡಿ ಪಾರ್ಸೆಲ್ ನೀಡುವುದು ಮಾರಣಾಂತಿಕ ರೋಗಕ್ಕೆ ಕಾರಣವಾಗಲಿದೆ ಎಂದಿ ದ್ದಾರೆ. ಇಡ್ಲಿ ತಯಾರಿಕೆ ವೇಳೆ ಪ್ಲಾಸ್ಟಿಕ್ ಬಳಸುತ್ತಿರುವುದು ಅನೇಕ ರೋಗಗಳಿಗೆ ಎಡೆಮಾಡಿದೆ, ಅದರಲ್ಲೂ, ರಸ್ತೆ ಬದಿಯ ತಿಂಡಿ ಅಂಗಡಿ ಗಳು ಪ್ಲಾಸ್ಟಿಕ್ ಬಳಕೆ ಮಾಡಿ ಆಹಾರ ತಯಾರಿಕೆ ಹಾಗೂ ಪಾರ್ಸಲ್ಗಳಿಗೆ ಬಳಸುತ್ತಿರುವುದು ಅಪಾಯಕಾರಿಯಾಗಿದೆ.
ಹೋಟೆಲ್ ಇಡ್ಲಿ ಮತ್ತಿತರ ಆಹಾರ ಗಳನ್ನು ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ ಅಪಾಯಕಾರಿ ಪ್ಲಾಸ್ಟಿಕ್ ಅಂಶಗಳಿರುವುದು ಪತ್ತೆಯಾಗಿದೆ. ಪ್ರಯೋಗಾಲಯದ ಪರೀಕ್ಷೆ ವೇಳೆ ಇಡ್ಲಿ ಮತ್ತಿತರ ಆಹಾರಗಳಲ್ಲಿ ಕಾರ್ಸಿನೋಜೆನಿಕ್ ವಿಷ ಅಂಶ ಪತ್ತೆಯಾಗಿದೆ. ಈ ಹಾನಿ ಕಾರಕ ಅಂಶದಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಆಗಿರುವುದು ಪತ್ತೆಯಾಗಿದೆ. ಮೊದಲು ಇಡ್ಲಿಯನ್ನು ಹತ್ತಿ ಬಟ್ಟೆ ಬಳಸಿ ಬೇಯಿಸುತ್ತಿದ್ದರು, ಆದರೆ, ನಂತರ ಸುಲಭ ವಿಧಾನ ಕಂಡುಕೊಂಡು ಹೋಟೆಲ್ ಉದ್ಯಮ ಪ್ಲಾಸ್ಟಿಕ್ ಬಳಕೆಗೆ ಮೊರೆ ಹೋಗಿದೆ.

ಜಿಟಿ ದೇವೇಗೌಡರ ಮುನಿಸಿಗೆ ಕಾರಣ ಏನು ?
ಇದು ಇಡ್ಲಿ ತಯಾರಿಕೆಗೆ ಮಾತ್ರ ಸೀಮಿತವಾಗಿಲ್ಲ, ಪ್ಲಾಸ್ಟಿಕ್ ಬಳಕೆಯಿಂದ ಆಹಾರ ಅಸುರಕ್ಷಿತ ಎಂಬುದು ಪ್ರಯೋ ಗಾಲದಿಂದ ದೃಢಪಟ್ಟಿದೆ. ಪ್ಲಾಸ್ಟಿಕ್ ಹಾಳೆ ಶಾಖಕ್ಕೆ ಒಡ್ಡಿಕೊಳ್ಳುವುದರಿಂದ ಹಾನಿಕಾರಕ ವಸ್ತು ಹೊರ ಸೂಸುತ್ತದೆ. ಇದು ಕ್ಯಾನ್ಸರ್ ರೋಗಕ್ಕೆ ಮೂಲ ಕಾರಣ ಎಂದು ತಜ್ಞರು ಹೇಳಿದ್ದಾರೆ. ತಜ್ಞರು ನೀಡಿರುವ ಶಿಫಾ ರಸಿನ ಮೇರೆಗೆ ಆಹಾರ ಪದಾರ್ಥಗಳ ಉತ್ಪಾ ದನಾ ಕೇಂದ್ರ ಹೋಟೆಲ್ ಹಾಗೂ ರೆಸ್ಟೋ ರೆಂಟ್ಗಳಲ್ಲಿ ಪ್ಲಾಸ್ಟಿಕ್ ನಿಷೇಧ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಗುಂಡೂರಾವ್ ತಿಳಿಸಿದರು. ಆದರೆ ದುರ ದೃಷ್ಟಕರ ಸಂಗತಿ ಎಂದರೆ, ಮೈಸೂರಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ನಿಷೇಧಿಸಿ ದ್ದರೂ ತಯಾರಕರು, ಮಾರಾಟಗಾರರು ಕೇರ್ ಮಾಡುತ್ತಿಲ್ಲ. ಪಾಲಿಕೆ ಅಧಿಕಾರಿ ಗಳು ಕಣ್ಣಾಮುಚ್ಚಾಲೆ ಆಡುತ್ತಿದ್ದಾರೆ.





