ಆರ್ಸಿಬಿ ವಿರುದ್ಧ ಪಂದ್ಯವನ್ನಾಡಲು ಸಿರಾಜ್ ಭಾವುಕ….

ನಿನ್ನೆ ಅಂದರೆ ಏಪ್ರಿಲ್ 2ರಂದು ನಡೆದ ರ್ಸಿಬಿ ಹಾಗೂ ಜಿಟಿ ನಡುವಿನ ಪಂದ್ಯಾವಳಿಯಲ್ಲಿ ಮಹಮ್ಮದ್ ಸಿರಾಜ್ ರವರು ಆರ್ಸಿಬಿ ತಂಡವನ್ನು ಬಿಟ್ಟು ಗುಜರಾತ್ ಟೈಟನ್ಸ್ ಪರ ಆಟವಾಡುತ್ತಿದ್ದು. ಚಿನ್ನಸ್ವಾಮಿ ಯಲ್ಲಿ ಅತ್ಯದ್ಭುತವಾದ ಪ್ರದರ್ಶನವನ್ನು ನೀಡಿದರು. ತಮ್ಮ ಕೋಟಾದ ನಾಲ್ಕು ಓವರ್ಗಳಲ್ಲಿ 4.80 ಎಕನಾಮಿಕ್ ರೇಟ್ನಲ್ಲಿ ಕೇವಲ 19 ರನ್ ನೀಡಿ, ಮೂರು ವಿಕೆಟ್ ಪಡೆದರು. ಪಂದ್ಯ ಮುಗಿದ ನಂತರ ವಿಶೇಷ ಗೌರವಕ್ಕೆ ಪಾತ್ರರಾದರು.

ಇದೇ ವೇಳೆ ಮಾತನಾಡಿರುವ ಸಿರಾಜ್, ಕಳೆದ ಏಳು ವರ್ಷಗಳಿಂದ ನಾನು ಆರ್ಸಿಬಿ ಪರ ಆಡುತ್ತಿದ್ದೆ. ಹಾಗಾಗಿ ಸಹಜವಾಗಿಯೇ ಭಾವುಕನಾದೆ. ಯಾವಾಗ ಗಿಲ್ ಅವರು ನನ್ನ ಕೈಗೆ ಬಾಲ್ ನೀಡಿದರೋ ಆಗ ಕಾಮನ್ ಆದೆ. ನಾನು ನಿರಂತರವಾಗಿ ಪಂದ್ಯಗಳನ್ನು ಆಡಿದೆ. ಆದ್ದರಿಂದ ಯಾವ ತಪ್ಪುಗಳನ್ನು ಮಾಡ್ತಿದ್ದೇನೆಂದು ಅರ್ಥವಾಗಲಿಲ್ಲ. ಬಿಡುವು ಸಿಕ್ಕಾಗ ಬೌಲಿಂಗ್ ಮತ್ತು ಫಿಟ್ನೆಸ್ನತ್ತ ಗಮನಹರಿಸಿದೆ.

ಗುಜರಾತ್ ಟೈಟಾನ್ಸ್ಗೆ ಸೇರಿದಾಗ ಆಶಿಶ್ ನೆಹ್ರಾ ಭಾಯ್ ಜೊತೆ ಮಾತನಾಡಿದೆ. ನಿಮ್ಮ ಆಟವನ್ನು ಆನಂದಿಸಿ, ಮಾಡಬೇಕಾದ ಕೆಲಸ ಮಾಡಿ ಎಂದರು. ನಾನು ತಂಡದಲ್ಲಿರುವ ಇತರ ಬೌಲರ್ಗಳಾದ ರಬಾಡ, ಇಶಾಂತ್ ಮತ್ತು ಇತರೆ ಬೌಲರ್ಗಳೊಂದಿಗೆ ಮಾತನಾಡುತ್ತೇನೆ. ಅವರಿಂದ ಪ್ರತಿಕ್ರಿಯೆಯನ್ನು ತೆಗೆದುಕೊಳ್ಳುತ್ತೇನೆ. ಅದು ನನಗೆ ನಿಜವಾಗಿಯೂ ಸಹಾಯಕ್ಕೆ ಬರುತ್ತಿದೆ. ಒಬ್ಬ ಬೌಲರ್ ಆಗಿ ಯಾವಾಗಲೂ ಆತ್ಮವಿಶ್ವಾಸ ಹೊಂದಲು ಬಯಸುತ್ತೇನೆ. ಇದು ಪ್ರಮುಖ ವಿಷಯ ಎಂದಿದ್ದಾರೆ. ಸಿರಾಜ್ ರವರು ಉತ್ತಮ ಬೌಲಿಂಗ್ ಪ್ರದರ್ಶನವನ್ನು ಮಾಡಿದ್ದು ಜಿಟಿ ಅಭಿಮಾನಿಗಳಿಗೆ ಸಂತಸವನ್ನು ತಂದಿದ್ದು, ಆರ್ಸಿಬಿ ಅಭಿಮಾನಿಗಳು ಅವರನ್ನು ಬೇರೆ ತಂಡದಲ್ಲಿ ನೋಡಿ ಮನನೊಂದು ಕೊಂಡಿದ್ದಾರೆ.

 

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!