ಈ ಬಾರಿ ಕಪ್ ಗೆಲ್ಲೋರು ಯಾರೆಂದು ಹೇಳಿದ ಡೇವಿಡ್ ವಾರ್ನರ್….

ಇಂಡಿಯನ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಜೂನ್ 3 ರಂದು ನಡೆಯಲಿರುವ ಅಂತಿಮ ಪಂದ್ಯಕ್ಕೆ ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟ್ರಿ ಕೊಟ್ಟಿದ್ದು, ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಅಥವಾ ಮುಂಬೈ ಇಂಡಿಯನ್ಸ್ ತಂಡವನ್ನು ಎದುರಿಸಲಿದೆ. ಅದರಂತೆ ಜೂನ್ 1 ರಂದು ನಡೆಯಲಿರುವ ದ್ವಿತೀಯ ಕ್ವಾಲಿಫೈಯರ್ ಪಂದ್ಯದಲ್ಲಿ ಗೆಲ್ಲುವ ತಂಡ ಫೈನಲ್ಗೇರಲಿದೆ. ಆದರೆ ದ್ವಿತೀಯ ಕ್ವಾಲಿಫೈಯರ್ ಪಂದ್ಯಕ್ಕೂ ಮುನ್ನವೇ ಐಪಿಎಲ್ನ ಮಾಜಿ ಆಟಗಾರ ಡೇವಿಡ್ ವಾರ್ನರ್, ಈ ಬಾರಿ ಕಪ್ ಗೆಲ್ಲುವ ತಂಡ ಯಾವುದೆಂದು ಹೆಸರಿಸಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಯೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡೇವಿಡ್ ವಾರ್ನರ್, ನನ್ನ ಪ್ರಕಾರ ಈ ಸಲ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟ್ರೋಫಿ ಎತ್ತಿ ಹಿಡಿಯಲಿದೆ ಎಂದಿದ್ದಾರೆ. ಅಲ್ಲದೆ ಫೈನಲ್ ಪಂದ್ಯದಲ್ಲಿ ಮಿಂಚುವ ಮೂಲಕ ಜೋಶ್ ಹೇಝಲ್ವುಡ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆಯಲಿದ್ದಾರೆ ಎಂದು ಸಹ ಭವಿಷ್ಯ ನುಡಿದಿದ್ದಾರೆ. ಕಳೆದ 17 ವರ್ಷಗಳಲ್ಲಿ ಮೂರು ಬಾರಿ ಕಪ್ ಗೆಲ್ಲುವ ಸನಿಹಕ್ಕೆ ಬಂದಿದ್ದ ಆರ್ಸಿಬಿ ತಂಡವು ಕೊನೆಯ ಹಂತದಲ್ಲಿ ಎಡವಿತ್ತು. ಇದೀಗ 9 ವರ್ಷಗಳ ಬಳಿಕ ಮತ್ತೊಮ್ಮೆ ಫೈನಲ್ಗೇರುವಲ್ಲಿ ಯಶಸ್ವಿಯಾಗಿದೆ. ಅದು ಕೂಡ ಭರ್ಜರಿ ಪ್ರದರ್ಶನ ನೀಡುವ ಮೂಲಕ. ಹೀಗಾಗಿಯೇ ಈ ಬಾರಿಯ ಐಪಿಎಲ್ನಲ್ಲಿ ಟ್ರೋಫಿ ಎತ್ತಿ ಹಿಡಿಯುವ ಫೇವರೇಟ್ ತಂಡವಾಗಿ ಆರ್ಸಿಬಿ ಗುರುತಿಸಿಕೊಂಡಿದೆ. ಅದರಂತೆ ಜೂನ್ 3 ರಂದು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿರುವ ಐಪಿಎಲ್ನ ಫೈನಲ್ ಪಂದ್ಯದಲ್ಲಿ ಭರ್ಜರಿ ಪ್ರದರ್ಶನ ನೀಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಲಿದೆಯಾ ಕಾದು ನೋಡಬೇಕಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!