ದೇಹ ಛೇದನವಿಲ್ಲದೇ ಮರಣೋತ್ತರ ಪರೀಕ್ಷೆ! ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ಇತಿಹಾಸ ಬರೆಯಲಿದೆ ವಿಕ್ಟೋರಿಯಾ ಆಸ್ಪತ್ರೆ.

ರಾಜ್ಯದ ಅತ್ಯಂತ ದೊಡ್ಡ ಸರಕಾರಿ ಆಸ್ಪತ್ರೆ ವಿಕ್ಟೋರಿಯಾದಲ್ಲಿ ಮೃತದೇಹವನ್ನು ಕತ್ತರಿಸದೇ ಶವ ಪರೀಕ್ಷೆ ಮಾಡುವ ಅತ್ಯಾಧುನಿಕ ವಿರ್ಟೋಪಿ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗುತ್ತಿದೆ.

ವೈದ್ಯಕೀಯ ಶಿಕ್ಷಣ ಇಲಾಖೆಯು ವರ್ಚುವಲ್ ಶವ ಪರೀಕ್ಷೆಯನ್ನು ಪರಿಚಯಿಸುತ್ತಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕೂಡ ಕರೆಯಲಾಗಿದ್ದು, ಮುಂದಿನ ಕೆಲವೇ ತಿಂಗಳಲ್ಲಿ ವಿರ್ಟೋಪಿ ಆರಂಭವಾಗಲಿದೆ. ಈ ಮೂಲಕ ಈ ತಂತ್ರಜ್ಞಾನವನ್ನು ಅಳವಡಿಸಿಕೊಂಡ ದಕ್ಷಿಣ ಭಾರತದ ಮೊದಲ ಸರಕಾರಿ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಇದು ಪಾತ್ರವಾಗಲಿದೆ.

ವರ್ಚುವಲ್ ಶವಪರೀಕ್ಷೆ ಅಥವಾ ವಿರ್ಟೋಪ್ಪಿ ಎಂದರೆ ದೇಹವನ್ನು ಕತ್ತರಿಸದೆ ತಂತ್ರಜ್ಞಾನದ ಸ್ಕ್ಯಾನ್ ಮೂಲಕ ಮಾಡುವುದಾಗಿದೆ. ವಿರ್ಟೋಪ್ಪಿ (Virtopsy) ಎಂದರೆ ‘ವರ್ಚುವಲ್’ ಮತ್ತು ‘ಶವಪರೀಕ್ಷೆ’ ಸಂಯೋಜಿಸುವ ಪದ. ವಿರ್ಟೋಪ್ಪಿ ಯಂತ್ರವು ಕಂಪ್ಯೂಟೆಡ್ ಟೋಮೊಗ್ರಫಿ (ಸಿಟಿ ಸ್ಕ್ಯಾ ನ್), ಮ್ಯಾಗ್ನೆಟಿಕ್ ರೆಸೋನೆನ್ಸ್ ಇಮೇಜಿಂಗ್ (ಎಂಆರ್ಐ) ಮುಂತಾದ ಕ್ಲಿನಿಕಲ್
ಮೆಡಿಸಿನ್ನಲ್ಲಿ ಬಳಸಲಾಗುವ ಚಿತ್ರಣ ವಿಧಾನಗಳನ್ನು ಬಳಸಿಕೊಳ್ಳುತ್ತದೆ. ಇಲ್ಲಿ ಸೆರೆಯಾದ ಚಿತ್ರಗಳನ್ನು 3ಡಿ ಚಿತ್ರವನ್ನಾಗಿ ಬದಲಾಯಿಸಲಾಗುತ್ತದೆ. ಇದರ ನಿರ್ಮಾಣಕ್ಕೆ 2 ರಿಂದ 3 ಕೋಟಿ ರೂ. ವೆಚ್ಚವಾಗಲಿದೆ.

ಮೂರು ಕಡೆ ಅಳವಡಿಕೆ: ಬರಿಗಣ್ಣಿನಲ್ಲಿ ಮಾಡುವ ಶವಪರೀಕ್ಷೆಗಳಲ್ಲಿ ಸಣ್ಣ ಮೂಳೆ ಮುರಿತ ಮತ್ತು ಗಾಯ ಗುರುತಿಸುವುದು ಕಷ್ಟ, ಆದರೆ, ವಿಕಿರಣಶಾಸ್ತ್ರದ ಪರೀಕ್ಷೆಯು ಬರಿಗಣ್ಣಿಗೆ ಕಾಣದ ಮುರಿತ ಮತ್ತು ರಕ್ತ ಹೆಪ್ಪುಗಟ್ಟುವಿಕೆಯನ್ನು ಪತ್ತೆ ಮಾಡುತ್ತದೆ. ಅಲ್ಲದೆ, ಮೂಳೆಗಳಲ್ಲಿನ ಕೂದಲ ಗಳನ್ನೂ ಪತ್ತೆ ಹಚ್ಚಲು ಸಹಾಯ ಮಾಡುತ್ತದೆ.

ಈಗಾಗಲೇ ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್), ಬೆಂಗಳೂರಿನ ಸೇಂಟ್ ಜಾನ್ಸ್ ಆಸ್ಪತ್ರೆ ಹಾಗೂ ಮೇಘಾಲಯದ ನೀಗ್ರಿಮ್ಸ್ ನಲ್ಲಿ ಈ ತಂತ್ರಜ್ಞಾನ ಅಳವಡಿಸಿಕೊಡಿಸಿಕೊಳ್ಳಲಾಗಿದೆ.
ಮೂರು ಸಾವಿರ ಪರೀಕ್ಷೆ: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪ್ರತಿ ವರ್ಷ ಮೂರು ಸಾವಿರಕ್ಕೂ ಹೆಚ್ಚು ಮರಣೋತ್ತರ ಪರೀಕ್ಷೆ ನಡೆಸಲಾಗುತ್ತದೆ. ವರ್ಚುವಲ್ ಮೂಲಕ ತ್ವರಿತವಾಗಿ ಶವ ಪರೀಕ್ಷೆ ನಡೆಸಲು ಸಾಧ್ಯವಾಗಲಿದೆ. ಎಲ್ಲಾ ಶವಪರೀಕ್ಷೆ ಗಳನ್ನು ವರ್ಚುವಲ್ ಆಗಿ ಮಾಡಲು ಸಾಧ್ಯವಿಲ್ಲ. ಸದ್ಯಕ್ಕೆ ರಸ್ತೆ ಅಪಘಾತ ಮತ್ತೆ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಪ್ರಕರಣಗಳಲ್ಲಿ ಮಾತ್ರ ಈ ಶವಪರೀಕ್ಷೆ ಮಾಡಲು ಉದ್ದೇಶಿಸಲಾಗಿದೆ.

ಹೊಸ ತಂತ್ರಜ್ಞಾನ ಬಂದರೂ ಸಾಂಪ್ರದಾಯಿಕ ಶವಪರೀಕ್ಷೆಯನ್ನು ಸಂಪೂರ್ಣವಾಗಿ ಬದಲಾಯಿಸಲು ಸಾಧ್ಯವಿಲ್ಲ. ನೈಸರ್ಗಿಕ ಸಾವುಗಳು ಅಥವಾ ವಿಷಪೂರಿತ ಪ್ರಕರಣಗಳ ಸಂದರ್ಭದಲ್ಲಿ ಹಿಸ್ಟೋಪಾಥೋಲಾಜಿಕಲ್ ಪರೀಕ್ಷೆಗಾಗಿ ಅಂಗಾಂಶ ಹೊರತೆಗೆಯಬೇಕಾಗುತ್ತದೆ. ಹೃದಯಾಘಾತದ ಸಂದರ್ಭದಲ್ಲಿ ಮರಣೋತ್ತರ ಆಂಜಿಯೋಗ್ರಾಮ್ ಮಾಡಬೇಕಾಗುತ್ತದೆ. ಆದರೆ, ದೇಹದ ಭಾಗವನ್ನು ಕಡಿಮೆ ಪ್ರಮಾಣದಲ್ಲಿ ಕತ್ತರಿಸಿದರೆ ಸಾಕಾಗುತ್ತದೆ. ಕೊಲೆ, ಆತ್ಮಹತ್ಯೆ ಪ್ರಕರಣಗಳಲ್ಲಿ ಸಾಂಪ್ರದಾಯಿಕ ಶವ ಪರೀಕ್ಷೆಯ ವಿಧಾನದ ಅಗತ್ಯವಿರುತ್ತದೆ,” ಎನ್ನುತ್ತಾರೆ ವೈದ್ಯಕೀಯ ತಜ್ಞರು,

ವಿರ್ಟೋಪ್ಪಿ ಉಪಯೋಗವೇನು?

 ವರ್ಚುವಲ್ ಶವ ಪರೀಕ್ಷೆ ಎನ್ನುವುದು ಮರಣೋತ್ತರ ಪರೀಕ್ಷೆಯ ಹೊಸ ತಂತ್ರವಾಗಿದ್ದು, ಇದರಲ್ಲಿ ದೇಹವನ್ನು ಕತ್ತರಿಸುವುದಿಲ್ಲ.
 ಮರಣೋತ್ತರ ಪರೀಕ್ಷೆಯನ್ನು ಹೈಟೆಕ್ ಡಿಜಿಟಲ್ ಎಕ್ಸ್-ರೇ ಮತ್ತು ಸಿಟಿ ಸ್ಕ್ಯಾನ್ ಬಳಸಿ ಮಾಡಲಾಗುತ್ತದೆ.
 ಮರಣೋತ್ತರ ಪರೀಕ್ಷೆಯ ಸಾಂಪ್ರದಾಯಿಕ ವಿಧಾನಕ್ಕೆ ಹೋಲಿಸಿದರೆ ಈ ತಂತ್ರಕ್ಕೆ ಕಡಿಮೆ ಸಮಯ ಸಾಕು.
 ಈ ನವೀನ ವಿಧಾನದಿಂದ ಮೂಳೆಗಳಲ್ಲಿನ ಕೂದಲಿನಷ್ಟು ಸೂಕ್ಷ್ಮ ಮುರಿತ ಪತ್ತೆ ಹಚ್ಚಲು ಸಾಧ್ಯವಾಗುತ್ತದೆ.
 ವಿರ್ಟೋಪ್ಪಿ ಮಾಡಿದ ಸಂಶೋಧನೆಗಳನ್ನು ಎಕ್ಸ್-ರೇ ಫಿಲ್ಮಗಳ ರೂಪದಲ್ಲಿ ದಾಖಲಿಸಬಹುದು. ಅದನ್ನು ನ್ಯಾಯಾಲಯದಲ್ಲಿ ಸಾಕ್ಷ್ಯವಾಗಿ ಬಳಸಬಹುದು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!