ಮದುವೆಯಾಗಲು ವಧು ತೋರುವ ನೆಪದಲ್ಲಿ ಹನಿಟ್ರ್ಯಾಪ್, ಸುಲಿಗೆ.

ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಸುಲಿಗೆ ಮಾಡುತ್ತಿದ್ದ ಆರು ಆರೋಪಿಗಳನ್ನು ಬೆಂಗಳೂರಿನ ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ. ನಾಲ್ವರು ಮಹಿಳೆಯರು ಮತ್ತು ಇಬ್ಬರು ಪುರುಷರು ಈ ಕೃತ್ಯದಲ್ಲಿ ಭಾಗಿಯಾಗಿದ್ದರು. ಪೊಲೀಸರು ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಗಳೂರು, (ಫೆಬ್ರವರಿ 01) : ವಧು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ಮೂಲಕ ಖೆಡ್ಡಾಕ್ಕೆ ಕೆಡವಿಕೊಂಡು ಸುಲಿಗೆ ಮಾಡುತ್ತಿದ್ದ ನಾಲ್ವರು ಮಹಿಳೆಯರು ಸೇರಿದಂತೆ ಆರು ಆರೋಪಿಗಳನ್ನು ಹೆಬ್ಬಾಳ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೀತಾ, ಮಂಜುಳಾ, ವಿಜಯಲಕ್ಷ್ಮಿ, ಲೀಲಾವತಿ, ಹರೀಶ್, ವೆಂಕಟೇಶ ಬಂಧಿತ ಆರೋಪಿಗಳು.

ಕೆಲ ದಿನಗಳ ಹಿಂದೆ ಸಂತ್ರಸ್ತ ಯುವಕನಿಗೆ ಆರೋಪಿ ಮಂಜುಳ ಪರಿಚಿತರಾಗಿದ್ದಳು. ಪರಸ್ಪರ ಮೊಬೈಲ್ ನಂಬರ್ ಬದಲಾಯಿಸಿಕೊಂಡಿದ್ದರು. ಸಂತ್ರಸ್ತ ಯುವಕ “ತಾನು ವಧು ಹುಡುಕುತ್ತಿದ್ದು ಕನ್ಯೆ ಇದ್ದರೆ ಹೇಳಿ” ಎಂದು ಮಂಜುಳಗೆ ಹೇಳಿದ್ದರು. ಸಂತ್ರಸ್ತ ಯುವಕ ಜನವರಿ 20 ರಂದು ಮಂಜುಳಾಗೆ ಕರೆ ಮಾಡಿ ವಿಚಾರಿಸಿದಾಗ, ಹೆಬ್ಬಾಳದ ತನ್ನ ಸ್ನೇಹಿತೆ ಮನೆಗೆ ಹೋದರೆ ಕನ್ಯೆ ತೋರಿಸುವುದಾಗಿ ಹೇಳಿದ್ದಳು.
ಅದರಂತೆ ಮಂಜುಳ ಸ್ನೇಹಿತೆ ವಿಜಯಲಕ್ಷ್ಮಿ ಮನೆಗೆ ಸಂತ್ರಸ್ತ ಯುವಕ ಹೋಗಿದ್ದನು. ಮನೆಯಲ್ಲಿ ಲೀಲಾವತಿ ಎಂಬ ಯುವತಿಯನ್ನು ಯುವಕನಿಗೆ ವಿಜಯಲಕ್ಷ್ಮಿ ಪರಿಚಯ ಮಾಡಿಸಿದ್ದಾಳೆ. “ಟೀ ತಯಾರಿಸುತ್ತಿರು ಬರುತ್ತೇನೆ” ಎಂದು ಹೇಳಿ, ಯುವಕನಿಂದ ಹಣ ಪಡೆದು ವಿಜಯಲಕ್ಷ್ಮಿ ಮನೆಯಿಂದ ತೆರಳಿದ್ದಾಳೆ.
ಮನೆಯಲ್ಲಿ ಒಂಟಿಯಾಗಿದ್ದ ಸಂತ್ರಸ್ತ ಯುವಕ ಮತ್ತು ಲೀಲಾವತಿ ಇಬ್ಬರೇ ಇದ್ದಾರೆ. ಈ ವೇಳೆ ಪೊಲೀಸರ ಸೋಗಿನಲ್ಲಿ ಗೀತಾ, ಹರೀಶ ಮತ್ತು ವೆಂಕಟೇಶ ಬಂದಿದ್ದಾರೆ. ಮನೆಯಲ್ಲಿ ವೈಶ್ಯಾವಾಟಿಕೆ ನಡೆಸುತ್ತಿದ್ದೀರಾ? ಇಬ್ಬರನ್ನೂ ಬಂಧಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇದರಿಂದ ಹೆದರಿದ ಸಂತ್ರಸ್ತ ಯುವಕ, ಆರೋಪಿಗಳಿಗೆ ಪೋನ್ ಪೇ ಮೂಲಕ 50 ಸಾವಿರ ಹಣ ಕಳುಹಿಸಿದ್ದಾನೆ.
ಬಳಿಕ, ತಾನು ಮೋಸ ಹೋಗಿದ್ದೇನೆ ಎಂದು ತಿಳಿದ ಸಂತ್ರಸ್ತ ಯುವ, ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿ, ಆರು ಜನ ಆರೋಪಿಗಳನ್ನ ಬಂಧಿಸಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!