ಯುವ ರೈತರೇ ಇವರ ಟಾರ್ಗೆಟ್: ಉತ್ತರ ಕರ್ನಾಟಕದಲ್ಲಿ ಮದುವೆ ವಂಚನೆ.

ಬಾಗಲಕೋಟೆ : ಕನ್ಯೆ ಸಿಗದ ರೈತನಿಗೆ ಮೋಸದ ಮದುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಯುವ ರೈತನಿಗೆ ಮೋಸ ಮಾಡಿದವಳು ಎರಡು ಮದುವೆ, ಎರಡು ಹೆಣ್ಮಕ್ಕಳು, ಅಷ್ಟೇ ಅಲ್ಲ ಇಬ್ಬರು ಮೊಮ್ಮಕ್ಕಳು ಹೊಂದಿದ ಅಜ್ಜಿ ಎಂದು ಗೊತ್ತಾಗಿದೆ. ಮೇಲಾಗಿ ಮೋಸ ಹೋದ ರೈತನಿಗೆ 55 ಸಾವಿರ ರೂ. ಬೇಡಿಕೆ ಇಡುವುದರ ಮೂಲಕ ಮತ್ತೊಂದು ಮದುವೆ ಆಫರ್ ನೀಡಿದ್ದು ಬೆಳಕಿಗೆ ಬಂದಿದೆ.
ಜಿಲ್ಲೆಯ ಮುಧೋಳ ತಾಲ್ಲೂಕಿನ ಬಿದರಿ ಗ್ರಾಮದ ಸೋಮಶೇಖರ್ಗೆ ಕಳೆದ ಐದ ವರ್ಷದಿಂದ ಕನ್ಯೆ ಹುಡುಕುತ್ತಿದ್ದರು. ಆದರೆ ಸಿಕ್ಕರಲಿಲ್ಲ. ಇದನ್ನೆ ಅಸ್ತ್ರ ಮಾಡಿಕೊಂಡ ಆರೋಪಿಗಳಾದ ಸತ್ಯಪ್ಪ, ಸಂಜು ಸಿದ್ದಪ್ಪ, ರವಿ ಮದುವೆಯಾದ ಮಂಜುಳಾ, ಸಂಬಂಧಿಕರ ಸೋಗಿನಲ್ಲಿ ಬಂದ ಲಕ್ಷ್ಮಿ, ನಾಗವ್ವ ಸೇರಿ ಏಳು ಜನರು ವಂಚನೆ ಎಸಗಿದ್ದಾರೆ.
ಸೋಮಶೇಖರ್ ಕಡೆಯಿಂದ 4-5 ಸಾವಿರ ರೂ. ಹಣ ಪಡೆದು ವಂಚಿಸಿದ್ದಾರೆ. ಮದುವೆಯಾಗಿ ತಿಂಗಳ ನಂತರ ಮಂಜುಳಾ ಎರಡು ಮದುವೆಯಾಗಿದ್ದು, ಇಬ್ಬರು ಹೆಣ್ಮಕ್ಕಳು, ಇಬ್ಬರು ಮೊಮ್ಮಕ್ಕಳು ಹೊಂದಿದ್ದಾಳೆ ಎಂದು ಗೊತ್ತಾಗಿದೆ. ತನಗಾದ ಅನ್ಯಾಯ ವಂಚನೆ ಬಗ್ಗೆ ಎಳೆ ಎಳೆಯಾಗಿ ಸೋಮಶೇಖರ್ ಬಿಚ್ಚಿಟ್ಟಿದ್ದಾರೆ.
ಕನ್ಯೆ ಸಿಗದ ಯುವ ರೈತರಿಗೆ ವಂಚನೆ ಮಾಡುವ ವ್ಯವಸ್ಥಿತ ಜಾಲ ಉತ್ತರ ಕರ್ನಾಟಕದಲ್ಲಿ ಬೀಡುಬಿಟ್ಟಿದೆ ಎಂಬ ಸಂಶಯ ಶುರುವಾಗಿದೆ. ಯುವ ರೈತರಿಗೆ ವಂಚನೆ ಮಾಡುವ ಜಾಲ ಸದ್ದಿಲ್ಲದೆ ಬೀಡುಬಿಟ್ಟ ಲಕ್ಷಣಗಳು ಕಂಡುಬಂದಿವೆ. ಇವರು ಎಷ್ಟು ಭಂಡರೆಂದರೆ ಸೋಮಶೇಖರ್ಗೆ ಮಂಜುಳಾ ಕೈಕೊಟ್ಟ ಬೆನ್ನಲ್ಲೇ ಇನ್ನು 55 ಸಾವಿರ ರೂ. ಕೊಡು ಇನ್ನೊಬ್ಬಳ ಜೊತೆ ಮದುವೆ ಮಾಡಿಸುತ್ತೇವೆ ಎಂದು ಮತ್ತೊಬ್ಬ ಯುವತಿ ಕರೆತಂದು ನಿಲ್ಲಿಸಿದ್ದರಂತೆ.
ಕನ್ಯೆ ಸಿಗದ ಯುವರೈತರೇ ಇವರ ಟಾರ್ಗೆಟ್ ಆಗಿದ್ದಾರೆ. ಕನ್ಯೆ ಸಿಗದ ಯುವ ರೈತರ ಆಪ್ತರು, ಸಂಬಂಧಿಕರಿಗೆ ಆಮಿಷ ನೀಡಿ ಲಕ್ಷ ಲಕ್ಷ ರೂ. ಡೀಲ್ ಮಾಡ್ತಾರೆ. ಮೋಸ ಮಾಡೋದಕ್ಕೆ ಸೃಷ್ಟಿಯಾಗ್ತಾರೆ ವಧುವಿನ ನಕಲಿ ಸಂಬಂಧಿಕರು. ಇಲ್ಲಿ ನಕಲಿ ಚಿಕ್ಕಮ್ಮ, ದೊಡ್ಡಮ್ಮಂದಿರ ವೇಷದಲ್ಲಿ ಲಕ್ಷ್ಮಿ ಹಾಗೂ ನಾಗವ್ವ ಎಂಟ್ರಿ ಕೊಡ್ತಾರೆ. ಈ ಹಿಂದೆಯೂ ಇಂತಹದ್ದೇ ಪ್ರಕರಣದಲ್ಲಿ ಭಾಗಿಯಾಗಿರುವ ಮಾಹಿತಿ ಇದೆ.
ಲಕ್ಷ್ಮಿ ಹಾಗೂ ನಾಗವ್ವ ಹುಬ್ಬಳ್ಳಿ ಮೂಲದವರಾಗಿದ್ದು, ಉತ್ತರ ಕರ್ನಾಟಕದಲ್ಲಿ ಕನ್ಯೆ ಸಿಗದ ರೈತರಿಗೆ ಪಂಗನಾಮ ಹಾಕುವ ವ್ಯವಸ್ಥಿತ ಜಾಲದ ಸಂಶಯ ಇದೆ. ಇದು ವ್ಯವಸ್ಥಿತ ದಂದೆಯಾ? ಹೇಗೆ ಎಂಬುದರ ಬಗ್ಗೆ ಮುಧೋಳ ಪೊಲೀಸರು ಕೂಲಂಕುಷ ತನಿಖೆ ನಡೆಸುತ್ತಿದ್ದಾರೆ.
ಇನ್ನು ಸೋಮಶೇಖರ್ ತಂದೆ ಮಲ್ಲಪ್ಪ ಹೊಲ ಅಡವಿಟ್ಟು ಹಣ ಕೊಟ್ಟೆವು, ಹಣವೂ ಇಲ್ಲ ಮದುವೆಯೂ ಹಾಳಾಯ್ತು, ರೈತರಿಗೆ ಕನ್ಯೆ ಕೊಡದೆ ಇರೋದು ತಪ್ಪು. ಹೀಗೆ ಮುಂದುವರೆದರೆ ರೈತರ ಮಕ್ಕಳ ಗತಿ ಏನು ಎಂದು ಅಳಲು ತೋಡಿಕೊಂಡಿದ್ದಾರೆ. ನಮ್ಮ ಹಣ ನಮಗೆ ಕೊಡಿಸಿ ಮೋಸ ಮಾಡಿದವರಿಗೆ ತಕ್ಕ ಶಿಕ್ಷೆ ಕೊಡಿಸಿ ಎಂದು ಆಗ್ರಹಿಸಿದ್ದಾರೆ. ಇದೊಂದು ವ್ಯವಸ್ಥಿತ ಜಾಲ ಆಗಿದ್ದು, ಪೊಲೀಸರು ಈ ಬಗ್ಗೆ ನಿರ್ಲಕ್ಷ್ಯ ಮಾಡದೆ ಕಠಿಣ ಕ್ರಮ ಕೈಗೊಂಡು ವಂಚಕರ ಹೆಡೆಮುರಿ ಕಟ್ಟಬೇಕಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!