ಮೈಸೂರು:- ರೌಡಿ ಶೀಟರ್ ದೊರೆಸ್ವಾಮಿ ಹತ್ಯೆ ಪ್ರಕರಣದಲ್ಲಿ ಈವರೆಗೆ 8 ಮಂದಿಯನ್ನು ಬಂಧಿಸಿರುವ ಪೊಲೀಸರು, ಘಟನೆ ವೇಳೆ ದೊರೆಸ್ವಾಮಿ ಜೊತೆಯಲ್ಲಿದ್ದ ಮಹಿಳೆಯ ವಿಚಾರಣೆ ನಡೆಸಿದ್ದಾರೆ.
ದೊರೆಸ್ವಾಮಿ ಕೊಲೆಯಾದ ವೇಳೆ ಜೊತೆಯಲ್ಲಿದ್ದ ಬೆಂಗಳೂರು ಮೂಲದ ಶ್ವೇತಾಳನ್ನು ಮಂಗಳವಾರ ವಶಕ್ಕೆ ಪಡೆದು, ವಿಚಾರಣೆ ನಡೆಸಲಾಗಿದೆ. ಆಕೆಯ ಮೊಬೈಲ್ ಇನ್ನಿತರ ವಸ್ತುಗಳನ್ನು ವಶಕ್ಕೆ ಪಡೆಯ ಲಾಗಿದ್ದು, ಬುಧವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಘಟನೆ ಸಂಬಂಧ ನಿನ್ನೆ ಮತ್ತು ಮೊನ್ನೆ ಒಟ್ಟು 8 ಜನ ಆರೋಪಿಗಳನ್ನು ಬಂಧಿಸಲಾಗಿದೆ.
ಮೈಸೂರು ತಾಲೂಕು, ಜಯಪುರ ಹೋಬಳಿ, ಅನಗನಹಳ್ಳಿ ಸಮೀಪದ ತೋಟದ ಮನೆಯಲ್ಲಿ ಕೆಲ ದಿನಗಳ ಹಿಂದೆ ದೊರೆಸ್ವಾಮಿಯನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿತ್ತು. ಆ ರಾತ್ರಿ ಆತನ ಜೊತೆಯಲ್ಲಿದ್ದ ಪ್ರೇಯಸಿ ಬೆಂಗ ಳೂರು ಮೂಲದ ಶ್ವೇತಾ ನಾಪತ್ತೆಯಾಗಿ ದ್ದಳು. ಆದ್ದರಿಂದ ಶ್ವೇತಾ ಮೇಲೆ ಅನುಮಾನ ವ್ಯಕ್ತವಾಗಿತ್ತು. ಆಕೆಯೇ ಕೊಲೆ ಮಾಡಿ, ತಲೆಮರೆಸಿಕೊಂಡಿರುವುದಾಗಿ ದೊರೆಸ್ವಾಮಿ ಪತ್ನಿಯ ಆರೋಪಿಸಿದ್ದರು. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೇಲಧಿಕಾರಿಗಳ ನಿರ್ದೇಶನದಂತೆ ವೃತ್ತ ನಿರೀಕ್ಷಕ ಶಿವನಂಜಶೆಟ್ಟಿ ನೇತೃತ್ವದಲ್ಲಿ ತನಿಖೆ ನಡೆಸಿದ ತಂಡ, ಹಳೇ ದ್ವೇಷಕ್ಕೆ ಹತ್ಯೆ ಮಾಡಲಾಗಿದೆ ಎಂಬುದನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸಿತ್ತು. ಇದೀಗ ಹತ್ಯೆ ನಡೆದ ವೇಳೆ ಜೊತೆಯಲ್ಲಿದ್ದರು ಎನ್ನಲಾದ ಶ್ವೇತಾಳ ವಿಚಾರಣೆ ನಡೆಸ ಲಾಗಿದ್ದು, ಈಕೆ ಭಾಗಿಯಾಗಿದ್ದಾಳೋ, ಇಲ್ಲವೋ ಎನ್ನುವುದು ಮುಂದಿನ ತನಿಖೆಯಲ್ಲಿ ತಿಳಿಯಲಿದೆ.





