
ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್ ವೈರಲ್ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್ ಪೋಸ್ಟ್ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್ ಖಾತೆಯಲ್ಲಿ ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬುವವರು, ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಹೀಗಿದೆ ನೋಡಿ: “ಕ್ಷಮಿಸಿ ಸರ್. ಸಸ್ಯಾಹಾರಿ ಕುಟುಂಬಗಳನ್ನು ಮಾತ್ರ ನೋಡುತ್ತಿದ್ದೇನೆ” ಎಂದು ಮನೆ ಮಾಲೀಕರ ಸಂದೇಶ ಹಾಕಿದ್ದಾರೆ. ಮಾಂಸಹಾರಿಗಳು ಚೆನ್ನೈನಲ್ಲಿ ಬಾಡಿಗೆಗೆ ಫ್ಲಾಟ್‌ಗಳನ್ನು ಹುಡುಕಲು ತುಂಬಾ ಕಷ್ಟ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೊಡ್ಡ, ದೊಡ್ಡ ನಗರಗಳಲ್ಲಿ ಆಹಾರ ಆಧಾರಿತವಾಗಿ ತಾರತಮ್ಯ ಮಾಡುವ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಅನೇಕ ಕಡೆಯಲ್ಲಿ ಇಂತಹ ಘಟನೆಗಳು ನಡೆದಿದೆ. ಇದೀಗ ಈ ಒಂದು ವಿಚಾರ ವೈರಲ್ ಆಗಿದೆ. ಇಂತಹ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ. ಕೆಲವು ಬಳಕೆದಾರರು ಈ ಪದ್ಧತಿಯನ್ನು ಖಂಡನೆ ಮಾಡಿದ್ದಾರೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವ ಜನರು ಕಡಿಮೆ. ಇನ್ನು ಇದರಲ್ಲಿ ನೀವು ಮುಸ್ಲಿಮರಾಗಿದ್ದರೆ, ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ ಎಂಬ ಘಟನೆಗಳು ಕೂಡ ನಡೆದಿದೆ ಎಂದು ಕಾಮೆಂಟ್ ಮಾಡಿದ್ದಾರೆ.





