ಸಿಂಧೂ ನದಿಯ ಉಗಮ ಹಾಗೂ ಉದ್ದದ ಬಗ್ಗೆ ಇಲ್ಲಿದೆ ಮಾಹಿತಿ….

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನ ಬೈಸರನ್ ಕಣಿವೆಯಲ್ಲಿ ಪ್ರವಾಸಿಗರ ಮೇಲಿನ ಪಾಕ್ ಮೂಲದ ಉಗ್ರರ ದಾಳಿಯ ಪ್ರತಿಯಾಗಿ ಭಾರತವು 1960 ರ ಸಿಂಧು ಜಲ ಒಪ್ಪಂದವನ್ನು ತಡೆಹಿಡಿದಿದೆ., ಪಾಕಿಸ್ತಾನಕ್ಕೆ ಒಂದು ಹನಿ ನೀರನ್ನೂ ಹರಿ ಬಿಡದಿರುವ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಮತ್ತು ಪಾಕಿಸ್ತಾನದ ಮೂಲಕ ಹರಿದು ಹೋಗಿ ಅರಬ್ಬಿ ಸಮುದ್ರವನ್ನು ಸೇರುವ ಸಿಂಧೂ ನದಿಯನ್ನು ದಕ್ಷಿಣ ಏಷ್ಯಾದ ಜೀವನಾಡಿ ಎಂದೇ ಪರಿಗಣಿಸಲಾಗಿದೆ. ಹಾಗಿದ್ರೆ ಭಾರತ ಮತ್ತು ಪಾಕಿಸ್ತಾನದಲ್ಲಿ ಹರಿಯುವ ಈ ನದಿಯ ಉಗಮ ಎಲ್ಲಿ ಅಂತೀರಾ? ಈ ನದಿ ಎಷ್ಟು ಉದ್ದ ಇದೆ ಅನ್ನುವಂತಹ ಕುತೂಹಲ ನಿಮಗಿದ್ರೆ ಈ ಎಲ್ಲದರ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇಂಡಸ್ ರಿವರ್ ಅಂತಾನೂ ಕರೆಯುವ ಸಿಂಧೂ ನದಿಯ ಮೂಲವನ್ನು ನೋಡುವುದಾದರೆ, ಟಿಬೆಟ್ನ ಮಾನಸ ಸರೋವರದ ಬಳಿಯ ಸಿನ್-ಕಾ-ಬಾಬ್ ಹೊಳೆಯಲ್ಲಿ ಸಮುದ್ರ ಮಟ್ಟದಿಂದ ಸುಮಾರು 5,182 ಮೀಟರ್ ಎತ್ತರದಲ್ಲಿ ಹುಟ್ಟುವ ಸಿಂಧೂ ನದಿ ಕಾಶ್ಮೀರ ಮತ್ತು ಪಾಕಿಸ್ತಾನದಿಂದ ಹರಿದು ಹೋಗಿ ಪಾಕಿಸ್ತಾನದ ಕರಾಚಿ ನದಿ ಬಳಿ ಅರಬ್ಬಿ ಸಮುದ್ರವನ್ನು ಸೇರುತ್ತದೆ.ಏಷ್ಯಾದ ಅತಿ ಉದ್ದದ ನದಿಗಳಲ್ಲಿ ಒಂದಾದ ಸಿಂಧೂ ನದಿ ಪ್ರದೇಶವು ಚೀನಾ, ಭಾರತ, ಪಾಕಿಸ್ತಾನ ಮತ್ತು ಅಫ್ಗಾನಿಸ್ತಾನಗಳೊಂದಿಗೆ ಹಂಚಿಹೋಗಿದೆ. ಅದರಲ್ಲೂ ಶೇ. 60% ರಷ್ಟು ಈ ನದಿ ಪ್ರದೇಶ ಪಾಕಿಸ್ತಾನದಲ್ಲಿಯೇ ಇದ್ದು, ಇಲ್ಲಿನ ಹಲವು ಪ್ರಾಂತ್ಯಗಳ ಕೃಷಿ, ಕೈಗಾರಿಕೆ ಆರ್ಥಿಕ ಚಟುವಟಿಕೆಗಳಿಗೆ ಸಿಂಧೂ ನದಿಯೇ ಮೂಲವಾಗಿದೆ. ಪಾಕಿಸ್ತಾನದ ಆರ್ಥಿಕತೆಗೆ ಆಧಾರವಾಗಿರುವ ಏಕೈಕ ನದಿಯಾಗಿರುವ ಇದನ್ನು ಪಾಕಿಸ್ತಾನದ ಜೀವನಾಡಿ ಎಂದೇ ಕರೆಯಲಾಗುತ್ತದೆ.

ಸಿಂಧೂ ನದಿಯ ಉದ್ದವನ್ನು ನೋಡುವುದಾದರೆ ಈ ನದಿಯ ವಿಸ್ತೀರ್ಣ ಸುಮಾರು 11,65,000 ಚದರ ಕಿಲೋಮೀಟರ್ಗಳಲ್ಲಿ ಹರಡಿದೆ. ಮತ್ತು ಈ ನದಿಯ ಒಟ್ಟು ಉದ್ದ 3,180 ಕಿ.ಮೀ. ಝೀಲಂ, ಚೀನಬ್, ರಾವಿ, ಬಿಯಾಸ್, ಸಟ್ಲೆಜ್ ಈ ಐದು ನದಿಗಳು ಸಿಂಧೂ ನದಿಯ ಪ್ರಮುಖ ಉಪನದಿಗಳಾಗಿದ್ದು, ಪಾಕಿಸ್ತಾನದ ಶೇ 92% ರಷ್ಟು ಭೂಮಿಗೆ ಶಾಶ್ವತ ನೀರಾವರಿ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಆರ್ಥಿಕತೆಗೆ ಸಿಂಧೂ ನದಿ ಏಕೈಕ ಆಧಾರವಾಗಿದೆ.ಸುಮಾರು 3,200 ಕಿಲೋಮೀಟರ್ ಸಿಂಧೂ ನದಿ, ಭಾರತದಲ್ಲಿ ಸುಮಾರು 800 ಕಿ.ಮೀ ಗಳಷ್ಟು ಮಾತ್ರ ಹರಿಯುತ್ತದೆ. ಈ ನದಿ ಜಮ್ಮು-ಕಾಶ್ಮೀರ ಮತ್ತು ಲಡಾಖ್ ಮೂಲಕ ಹಾದುಹೋಗುತ್ತದೆ. ಆದಾಗ್ಯೂ, ವಾಸ್ತವದಲ್ಲಿ ಈ ನದಿಯ ಒಂದು ಸಣ್ಣ ಭಾಗ ಮಾತ್ರ ಭಾರತದ ನಿಯಂತ್ರಣದ್ದು, ಈ ನದಿ ಪ್ರದೇಶ ಶೇ 60% ರಷ್ಟು ಪಾಕಿಸ್ತಾನದಲ್ಲಿದೆ.

ಸಿಂಧೂ ನದಿ ಮತ್ತು ಅದರ ಉಪನದಿಗಳ ಮೇಲೆ ಹಲವಾರು ಅಣೆಕಟ್ಟುಗಳನ್ನು ನಿರ್ಮಿಸಲಾಗಿದೆ. ಇದರಲ್ಲಿ ವಿದ್ಯುತ್ ಉತ್ಪಾದಿಸುವ ಹಲವಾರು ದೊಡ್ಡ ಯೋಜನೆಗಳು ಸೇರಿವೆ. ಭಾರತದಲ್ಲಿ ಸಟ್ಲೆಜ್ ನದಿಯ ಮೇಲಿನ ಭಾಕ್ರಾ ಅಣೆಕಟ್ಟು ಮತ್ತು ಬಿಯಾಸ್ ನದಿಯ ಮೇಲೆ ಪಾಂಡೋಹ್ ಅಣೆಕಟ್ಟು, ಚೆನಾಬ್ ನದಿಯ ಮೇಲೆ ಬಾಗ್ಲಿಹಾರ್ ಮತ್ತು ದುಲ್ಹಸ್ತಿ ಅಣೆಕಟ್ಟು, ಝೀಲಂ ನದಿಯ ಮೇಲೆ ಉರಿ ಮತ್ತು ಕಿಶನ್ಗಂಗಾ ಯೋಜನೆಯನ್ನು ನಿರ್ಮಿಸಲಾಗಿದೆ.ಪಾಕಿಸ್ತಾನದಲ್ಲಿ, ಸಿಂಧೂ ನದಿಯ ಮೇಲಿನ ತುರ್ಬೆಲಾ ಅಣೆಕಟ್ಟು, ಝೀಲಂ ನದಿಯಲ್ಲಿ ಮಂಗ್ಲಾ ಅಣೆಕಟ್ಟು ಮತ್ತು ನೀಲಂ-ಝೀಲಂ ಯೋಜನೆಯನ್ನು ಸ್ಥಾಪಿಸಲಾಗಿದೆ. ಈ ಎಲ್ಲಾ ಅಣೆಕಟ್ಟುಗಳು ಭಾರತ ಮತ್ತು ಪಾಕಿಸ್ತಾನದ ವಿದ್ಯುತ್ ಉತ್ಪಾದನೆ ಹಾಗೂ ನೀರಾವರಿ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಇದೀಗ ಸಿಂಧೂ ನದಿ ನೀರನ್ನು ಪಾಕಿಸ್ತಾನಕ್ಕೆ ಹರಿಯದಂತೆ ತಡೆ ಹಿಡಿಲು ಭಾರತ ಸರಕಾರ ಮುಂದಾಗಿದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!