ಹೂಕೋಸಿನಲ್ಲಿ ಮೂಡಿ ಬಂದ ರಾಮ, ಸೀತೆ, ಹನುಮಂತ;ಇದು ರೈತನ ವಿಭಿನ್ನ ರಾಮನವಮಿ ಸೆಲೆಬ್ರೇಶನ್

ಯುಗಾದಿ ನಂತರ ಬರುವ ಹಬ್ಬವೇ ರಾಮನವಮಿ. ಹಿಂದೂಗಳ ಪ್ರಮುಖ ಹಬ್ಬವಾದ ರಾಮನವಮಿಯನ್ನು ದೇಶದಾದ್ಯಂತ ಅದ್ದೂರಿಯಿಂದ ಆಚರಿಸಲಾಗಿದೆ. ಈ ಆದರೆ ಇಲ್ಲೊಬ್ಬ ಯುವ ರೈತ ವಿಭಿನ್ನವಾಗಿ ರಾಮನವಮಿ ಆಚರಿಸಿದ್ದಾನೆ. ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹಾಗೂ ಹನುಮಂತ ಚಿತ್ರ ಬಿಡಿಸಿ ಹಬ್ಬವನ್ನು ಸಂಭ್ರಮಿಸಿದ್ದಾನೆ, ಈ ಕುರಿತಾದ ಸ್ಟೋರಿ ಇಲ್ಲಿದೆ. ಮರ್ಯಾದಾ ಪುರುಷ, ಪುರುಷೋತ್ತಮ ಭಗವಾನ್ ಶ್ರೀ ರಾಮನ ಜನ್ಮದಿನವನ್ನು ದೇಶದೆಲ್ಲೆಡೆ ಶ್ರದ್ಧಾಭಕ್ರಿಯಿಂದ ಆಚರಿಸಲಾಗಿದೆ. ಹಿಂದೂಗಳಿಗೆ ಯುಗಾದಿ ವರುಷದ ಮೊದಲ ಹಬ್ಬವಾದರೆ, ತದನಂತರ ಬರುವುದೇ ಈ ರಾಮನವಮಿ. ಈ ಹಬ್ಬದಂದು ಕೋಟ್ಯಾಂತರ ಭಕ್ತರು ರಾಮನನ್ನು ಪೂಜಿಸಿ, ಆರಾಧಿಸುತ್ತಾರೆ. ಆದರೆ ಇಲ್ಲೊಬ್ಬ ರೈತನು ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ಸಂಭ್ರಮಿಸಿದ್ದಾನೆ. ಈ ಪೋಸ್ಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ಮೆಚ್ಚುಗೆಗೆ ಪಾತ್ರವಾಗಿದೆ.

ನಂದಿನಿ ವೆಂಕಟಾದ್ರಿ ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಯುವ ರೈತನೊಬ್ಬ ತಾನು ಬೆಳೆದ ಹೂಕೋಸಿನಲ್ಲಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿದ ರಾಮನವಮಿಯನ್ನು ವಿಭಿನ್ನವಾಗಿ ಆಚರಿಸುವುದನ್ನು ಕಾಣಬಹುದು. ಹೊಲದಲ್ಲಿ ಹೂಕೋಸಿನ ರಾಶಿಯನ್ನು ಕಾಣಬಹುದು. ಮೂವರು ಮಹಿಳೆಯರು ಕೆಲಸದಲ್ಲಿ ತೊಡಗಿಕೊಂಡಿದ್ದು, ಯುವ ರೈತನೊಬ್ಬ ಹೂಕೋಸನ್ನು ಜೋಡಿಸಿ ರಾಮ, ಸೀತೆ, ಹನುಮಂತನ ಚಿತ್ರ ಬಿಡಿಸಿ ಅದರ ಪಕ್ಕ ಕುಳಿತಿರುವುದನ್ನು ನೀವು ನೋಡಬಹುದು.

ಮಾರ್ಚ್ 27 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ ತೊಂಭತ್ತು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಮ್ಮ ಭಕ್ತಿಯ ಭಾವನೆಯನ್ನು ವ್ಯಕ್ತಪಡಿಸಲು ಹಲವಾರು ಮಾರ್ಗಗಳಿವೆ, ಆದ್ದರಿಂದ, ಇದು ನೈಸರ್ಗಿಕ ಹೂವಿನ ಗೌರವವಾದ ಹೂಕೋಸು ಮೂಲಕ ಭಕ್ತಿಯನ್ನು ವ್ಯಕ್ತಪಡಿಸುವ ಅತ್ಯಂತ ವಿಶಿಷ್ಟ ಮಾರ್ಗವಾಗಿದೆ ಎಂದಿದ್ದಾರೆ. ಇನ್ನೊಬ್ಬರು, ಇದು ತುಂಬಾ ಸುಂದರ ಹಾಗೂ ಹೃದಯ ಸ್ಪರ್ಶಿಯಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಜೈ ಶ್ರೀರಾಮ್ ಎಂದು ಹೇಳಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

  ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರ ಪತ್ನಿ ಚನ್ನಮ್ಮಅವರು ಉಸಿರಾಟದ ಸಮಸ್ಯೆಯಿಂದಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ರಾಜಕೀಯವಾಗಿ ಸದಾ ಬ್ಯುಸಿಯಾಗಿದ್ದ ದೇವೇಗೌಡರ ಸಂಸಾರದ ಬೆನ್ನೆಲುಬಾಗಿದ್ದ ಗಟ್ಟಿಗಿತ್ತಿ ಇಹಲೋಕ ತ್ಯಜಿಸಿದ್ದಾರೆ. ಕೆಲ ವರ್ಷಗಳಿಂದಲೂ ಉಸಿರಾಟ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರ ಆರೋಗ್ಯದಲ್ಲಿ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!