ಪ್ರಕಾಶಂ ಜಿಲ್ಲೆಯ ಮಾರ್ಕಾಪುರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, ಮಹಿಳೆಯೊಬ್ಬರು 3ನೇ ಮಗುವಿಗೆ ಜನ್ಮ ನೀಡಿದರೆ ವಿಶೇಷ ಉಡುಗೊರೆ ನೀಡಲಾ ಗುವುದು. ಹೆಣ್ಣು ಮಗುವಿಗೆ ಜನ್ಮ ನೀಡಿದರೆ ನನ್ನ ಸ್ವಂತ ವೇತನದಲ್ಲಿ 50 ಸಾವಿರ ರೂ., ಗಂಡು ಮಗುವಿಗೆ ಜನ್ಮ ನೀಡಿದರೆ 1 ಹಸುವನ್ನು ಉಡುಗೊರೆಯಾಗಿ ಕೊಡ ಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಸಂಸದರು ಮಾತನಾಡಿರುವ ವಿಡಿಯೋ ಸಾಮಾ ಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.

ಜನಸಂಖ್ಯೆ ಬೆಳವಣಿಗೆಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಪ್ರಧಾನಿ ನರೇಂದ್ರ ಮೋದಿ ಮತ್ತು ಆಂಧ್ರದ ಮುಖ್ಯ |ಮಂತ್ರಿ ಚಂದ್ರಬಾಬು ನಾಯ್ಡು ಅವರ ಕರೆಗಳ ಮೇರೆಗೆ ಈ ವಿಶೇಷ ಉಡುಗೊರೆಗಳನ್ನು ಘೋಷಣೆ ಮಾಡಲಾಗಿದೆ. ಮಹಿಳೆಯರು ಹೆಚ್ಚು ಮಕ್ಕಳನ್ನು ‘ಹೊಂದಬೇಕೆಂದು ಹೇಳುತ್ತಿದ್ದೇವೆ. ಹೀಗಾಗಿ 3ನೇ ಮಗು ಜನಿಸಿದರೆ ಪ್ರೋತ್ಸಾಹ ಧನ ನೀಡಲು ಮುಂದಾಗಿದ್ದೇವೆ ಎಂದು ಸಂಸದ ಅಪ್ಪಲನಾಯ್ತು ತಿಳಿಸಿದ್ದಾರೆ.
ಕೆಲ ದಿನಗಳ ಹಿಂದೆ ಚಂದ್ರಬಾಬು ನಾಯ್ಡು ಅವರು, ಮಹಿಳೆಯರು ಸಂಖ್ಯೆಯನ್ನು ಲೆಕ್ಕಿಸದೇ ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳಿ. ಅದಕ್ಕಾಗಿ ಉದ್ಯೋಗಸ್ಥ ಮಹಿಳೆಯರಿಗೆ ವೇತನ ಸಹಿತ ಹೆರಿಗೆ ರಜೆ ನೀಡಲಾಗುವುದು ಎಂದು ಘೋಷಣೆ ಮಾಡಿದ್ದರು. ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಅವರು ಸಹ 2026ರ ಒಳಗೆ ಮಹಿಳೆಯರು ಹೆಚ್ಚೆಚ್ಚು ಮಕ್ಕಳನ್ನು ಮಾಡಿಕೊಳ್ಳುವಂತೆ ಕರೆ ನೀಡಿದ್ದರು. ಈ ರೀತಿಯಾಗಿ ಹೇಳಿಕೆ ನೀಡುವ ಮುಖಾಂತರ ಹೆಚ್ಚು ಮಕ್ಕಳನ್ನು ಒಂದುದವರಿಗೆ ಬಂಪರ್ ಆಫರನ್ನು ನೀಡಿದ್ದಾರೆ.





