
ಸಂದರ್ಶನದಲ್ಲಿ ಶಿವಣ್ಣ ಮಾತನಾಡಿದರು. ಕ್ಯಾನ್ಸರ್ ಇರುವ ಬಗ್ಗೆ ಗೀತಾ ಅವರು ಶಿವಣ್ಣ ಅವರಿಂದ ಮುಚ್ಚಿಟ್ಟಿದ್ದರು. ಇದನ್ನು ಹೇಗೆ ಸ್ವೀಕರಿಸುತ್ತಾರೇನೋ ಎನ್ನುವ ಭಯ ಗೀತಾ ಅವರನ್ನು ಕಾಡಿತ್ತು ಅಂತೆ. ಕಿಮೋ ಥೆರಪಿ ಮಾಡಿಸಲೇಬೇಕಾದ ಅನಿವಾರ್ಯತೆ ಎದುರಾದಾಗ ಶಿವರಾಜ್ಕುಮಾರ್ಗೆ ಕ್ಯಾನ್ಸರ್ ಇರುವ ವಿಚಾರವನ್ನು ಹೇಳಲೇ ಬೇಕಾಯಿತು ಎಂದರು. ಇನ್ನು ಶಿವಣ್ಣ ಸಂದರ್ಶನವೊಂದರಲ್ಲಿ ಮಾತನಾಡಿದ್ದು ಹೀಗೆ, ಮನೆಯಲ್ಲಿ ನಂಗೆ ಎಲ್ಲರ ಸಫೊರ್ಟ್ ಸಿಕ್ಕಿತು. ನನ್ನ ಬಗ್ಗೆ ಎಲ್ಲರಿಗೂ ಒಂದು ಕನ್ಸರ್ನ್ ಇತ್ತು. ಇವತ್ತು ಇವರ ಸಪೋರ್ಟ್ ಇಲ್ಲ ಎಂದಿದ್ದರೆ ಕಷ್ಟ ಇತ್ತು. ನಂಗೆ ಗೀತಾ ಎಲ್ಲ ಸ್ಥಾನ ತುಂಬಿದಳು. ಗೀತಾ, ಪತ್ನಿಯಾಗಿ ಸಿಕ್ಕಿದ್ದು ನನ್ನ ಅದೃಷ್ಟ ಎಂದು ಶಿವಣ್ಣ ಹೇಳಿದ್ದಾರೆ. ನಮ್ಮಿಬ್ಬರ ಮಧ್ಯೆ ಏನೇ ಇರಬಹುದು ಆದರೆ, ನನ್ನನ್ನು ತನ್ನವನು ಎನ್ನುವಂತೆ ನೋಡಿದ್ದಾರೆ. ಅವರು ಹೆಂಡತಿಯಾಗಿ ಮಾತ್ರವಲ್ಲ ತಾಯಿಯಾಗಿ, ಗೆಳತಿಯಾಗಿ ನನ್ನನ್ನು ನೋಡಿದ್ದಾರೆ. ಅವರ ಪ್ರೀತಿಗೆ ನಾನು ಫಿಟ್ ಆಗಿದ್ದೇನಾ ಗೊತ್ತಿಲ್ಲ. ಸಾರಿ ಅಂತ ಆರಾಮಾಗಿ ನಾನು ಹೇಳಬಹುದು.ಆದರೆ ಆ ಬಗ್ಗೆ ಆಲೋಚನೆ ಮಾಡಿದಾಗ ಅರ್ಥ ಆಳವಾಗಿ ಹೋಗುತ್ತೆ ಎಂದು ಕಣ್ಣೀರಿಟ್ಟಿದ್ದಾರೆ. ಶಿವರಾಜ್ ಕುಮಾರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಣ್ಣೀರಿಡದಂತೆ ಶಿವಣ್ಣನಿಗೆ ಧೈರ್ಯ ಹೇಳಿದ್ದಾರೆ.

ಅಮೆರಿಕಾದಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳುವಾಗ ಶಿವಣ್ಣ ಅವರಿಗೆ ಸ್ಪೆಷಲ್ ವ್ಯಕ್ತಿಯೊಬ್ಬರು ಸಖತ್ ಕೇರ್ ಮಾಡಿದ್ದಾರೆ. ಅವರ ಬಗ್ಗೆ ಗೀತಾ ಅವರು ಗುಣಗಾನ ಮಾಡಿದ್ದಾರೆ. ಅದು ಬೇರೆ ಯಾರೂ ಅಲ್ಲ, ಶಾಸಕ ಭೀಮಣ್ಣ ನಾಯ್ಕ್. ಹೌದು ಗೀತಾ ಶಿವರಾಜ್ ಕುಮಾರ್ ಅವರ ಸೋದರ ಮಾವ ಭೀಮಣ್ಣ ನಾಯ್ಕ್. ಈಗ ಗೀತಾ ಶಿವರಾಜ್ಕುಮಾರ್ ಈ ಬಗ್ಗೆ ಪೋಸ್ಟ್ ಶೇರ್ ಮಾಡಿಕೊಂಡಿದ್ದಾರೆ. ಅಲ್ಲಿಯೂ ಸೈ ಇಲ್ಲಿಯೂ ಸೈ ನಿಮ್ಮೆಲ್ಲರ ಪ್ರೀತಿಯ ಭೀಮಣ್ಣ, ನನಗೆ ಭೀಮ್ ಮಾಮ. ಅಂದಿನಿಂದ ಇಲ್ಲಿಯವರೆಗೆ ಸ್ವಲ್ಪ ಕೂಡ ಬದಲಾಗದ ವ್ಯಕ್ತಿತ್ವ. ಮಾತು, ಕೋಪ ತುಂಬಾ ಕಡಿಮೆ, ಆದರೆ ಕೆಲಸ ಎಲ್ಲರಿಗಿಂತ ಜಾಸ್ತಿ. ಯಾವತ್ತು ಕಡಿಮೆ ಆಗದ ಪ್ರೀತಿ ವಿಶ್ವಾಸ. ಅವರಿಗೆ ಕುಟುಂಬದವರಾಗಲಿ, ಊರಿನ ಜನರಾಗಲಿ ಎಲ್ಲರು ಒಂದೇ.
ಮಾಮ ಅಮೆರಿಕಾದ ಮಿಯಾಮಿ ಅಲ್ಲಿ ಶಿವಣ್ಣ ಅವರ ಟ್ರೀಟ್ಮೆಂಟ್ ಸಮಯದಲ್ಲಿ ಎರಡು ವಾರ ನಮ್ಮ ಜೊತೆಗೆ ಇದ್ದರು. ನನ್ನ ಕೆಲಸಗಳಿಗೆ ಸಹಾಯ, ಶಿವಣ್ಣ ಜೊತೆಗೆ ವಾಕಿಂಗ್, ಕಾಫಿ, ಹಾಸ್ಪಿಟಲ್ ಭೇಟಿಗೆ ಜೊತೆಗೆ ಇರುತ್ತಿದ್ದರು. ನಮ್ಮ ಪ್ರೀತಿಯ ಭೀಮ್ ಮಾಮ, ನಿಮಗೆ ಶಾಸಕರು. ನಮ್ಮ ಕುಟುಂಬದ ಸುಖ ದುಃಖ ಎರಡರಲ್ಲೂ ಸದಾ ಜೊತೆಗೆ ನಿಂತವರು. ನಿಮ್ಮ ಶಾಸಕರಾಗಿ ಅವರು ಸದಾ ನಿಮ್ಮ ಜೊತೆಯಲ್ಲಿ ನಿಂತಿರಲಿ, ಹಾಗು ಅವರ ಮತ್ತು ನಿಮ್ಮ ಮುಗುಳ್ನಗೆ ಎಂದಿಗೂ ಮಾಸದಿರಲಿ ಎಂದು ಎಂದು ದೇವರಲ್ಲಿ ನಾನು ಹಾಗು ಶಿವ ರಾಜಕುಮಾರ್ ಅವರು ಕೇಳಿಕೊಳ್ಳುತೇವೆ. ಇಂತಿ, ಗೀತಾ ಶಿವರಾಜಕುಮಾರ್ ಹಾಗು ಶಿವರಾಜಕುಮಾರ್ ಎಂದು ಬರೆದುಕೊಂಡಿದ್ದರು.

ಸದ್ಯ ಶಿವಣ್ಣ ಆ್ಯಕ್ಟಿವ್ ಆಗಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುವ ಸರಿಗಮಪ ಕಾರ್ಯಕ್ರಮದ ಈ ವಾರದ ಸಂಚಿಕೆಯಲ್ಲಿ ಶಿವಣ್ಣ ಹಾಗೂ ಗೀತಕ್ಕ ವಿಶೇಷ ಅತಿಥಿಗಳಾಗಿ ಸರ್ಪ್ರೈಸ್ ಎಂಟ್ರಿ ಕೊಟ್ಟಿದ್ದಾರೆ ಸ್ಪರ್ಧಿಗಳು, ತೀರ್ಪುಗಾರರು, ಜ್ಯೂರಿ ಮೆಂಬರ್ಸ್, ನಿರೂಪಕಿ ಅನುಶ್ರೀ ಹಾಗೂ ಇತರ ಅತಿಥಿಗಳು ಶಾಕ್ ಆಗಿದ್ದು, ಶಿವಣ್ಣನನ್ನು ನೋಡಿ ಭಾವುಕರಾಗಿದ್ದಾರೆ.





