ಸಸ್ಯಾಹಾರಿ ಕುಟುಂಬಗಳಿಗೆ ಮಾತ್ರ ಬಾಡಿಗೆ ನೀಡುವುದು ಎಂದ ಮನೆಯ ಮಾಲೀಕ….

ಬಾಡಿಗೆ ಮನೆ ನೀಡಲು ಈ ಮಾಲೀಕರು ಒಂದಲ್ಲ ಒಂದು ನಿಯಮಗಳನ್ನು ಮಾಡುತ್ತಾರೆ. ಬ್ಯಾಚುಲರ್​​​​ಗೆ ಬಾಡಿಗೆ ಮನೆ ನೀಡಲ್ಲ, ಒಳ್ಳೆಯ ಕೆಲಸದಲ್ಲಿ ಇದ್ರೆ ಮಾತ್ರ ಬಾಡಿಗೆ ಮನೆ , ಹೀಗೆ ಅನೇಕ ಕಾರಣಗಳು ಹಾಗೂ ನಿಯಮ, ಇದೀಗ ಮತ್ತೊಂದು ನಿಯಮ ಇದಕ್ಕೆ ಸೇರಿಕೊಂಡಿದೆ, ಮಾಂಸಹಾರಿಗಳಿಗೆ ಬಾಡಿಗೆ ಮನೆ ಇಲ್ಲ, ಸಸ್ಯಹಾರಿಗಳಿಗೆ ಮಾತ್ರ ಬಾಡಿಗೆ ನೀಡಲಾಗುವುದು ಎಂಬ ಸಂದೇಶ ವೈರಲ್​ ಆಗಿದೆ. ಚೆನ್ನೈನಲ್ಲಿ ಮನೆಗಳು ಬಾಡಿಗೆಗೆ ಸಿಗುವುದೇ ಕಷ್ಟ ಅದರಲ್ಲಿ ಈ ನಿಯಮ ಎಂದು ವ್ಯಕ್ತಿಯೊಬ್ಬರು ಎಕ್ಸ್​​ನಲ್ಲಿ ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ ಹಂಚಿಕೊಂಡಿದ್ದಾರೆ.

ಬೆಂಗಳೂರು, ಚೆನ್ನೈನಂತಹ ಮಹಾನಗರಗಳಲ್ಲಿ ಬಾಡಿಗೆಗೆ ಮನೆ ಸಿಗುವುದೇ ಕಷ್ಟ, ಅದರಲ್ಲೂ ಬ್ಯಾಚುಲರ್​​ಗೆ ಬಾಡಿಗೆ ಮನೆ ನೀಡಲು ಹಿಂದು-ಮುಂದು ನೋಡುತ್ತಾರೆ. ಆದರೆ ಇದೀಗ ಮತ್ತೊಂದು ವಿಚಾರಕ್ಕೆ ಬಾಡಿಗೆ ನೀಡುವವರು ಕಿರಿಕ್ ಮಾಡುತ್ತಿದ್ದಾರೆ ಎಂದು ಒಂದು ಪೋಸ್ಟ್​​​ ವೈರಲ್​​ ಆಗುತ್ತಿದೆ. ಹೌದು ಮಾಂಸಹಾರಿಗಳಿಗೆ ಬಾಡಿಗೆ ಮನೆ ನೀಡುತ್ತಿಲ್ಲ. ಇದರಿಂದ ಅದೆಷ್ಟು ಮಾಂಸಹಾರಿಗಳಿಗೆ ಬಾಡಿಗೆ ಮನೆ ಸಿಗದೇ ಕಷ್ಟಪಡುತ್ತಿದ್ದಾರೆ. 90%ದಷ್ಟು ಮನೆ ಬಾಡಿಗೆ ನೀಡುವವರು ಈ ವಿಚಾರವೊಂದು ಕೇಳಿ ಕೇಳುತ್ತಾರೆ ಎಂದು ಈ ವೈರಲ್​​ ಪೋಸ್ಟ್​​​ನಲ್ಲಿ ಹಂಚಿಕೊಂಡಿದ್ದಾರೆ. ಎಕ್ಸ್​​ ಖಾತೆಯಲ್ಲಿ ಚೆನ್ನೈ ನಿವಾಸಿ ಪ್ರಶಾಂತ್ ರಂಗಸ್ವಾಮಿ ಎಂಬುವವರು, ಮನೆ ಮಾಲೀಕರಿಂದ ಬಂದ ಸಂದೇಶದ ಸ್ಕ್ರೀನ್‌ಶಾಟ್‌ನ್ನು ಎಕ್ಸ್​​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್​​​ ಹೀಗಿದೆ ನೋಡಿ: “ಕ್ಷಮಿಸಿ ಸರ್. ಸಸ್ಯಾಹಾರಿ ಕುಟುಂಬಗಳನ್ನು ಮಾತ್ರ ನೋಡುತ್ತಿದ್ದೇನೆ” ಎಂದು ಮನೆ ಮಾಲೀಕರ ಸಂದೇಶ ಹಾಕಿದ್ದಾರೆ. ಮಾಂಸಹಾರಿಗಳು ಚೆನ್ನೈನಲ್ಲಿ ಬಾಡಿಗೆಗೆ ಫ್ಲಾಟ್‌ಗಳನ್ನು ಹುಡುಕಲು ತುಂಬಾ ಕಷ್ಟ ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್​​​ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಈ ದೊಡ್ಡ, ದೊಡ್ಡ ನಗರಗಳಲ್ಲಿ ಆಹಾರ ಆಧಾರಿತವಾಗಿ ತಾರತಮ್ಯ ಮಾಡುವ ಬಗ್ಗೆ ಅನೇಕರು ಬೇಸರ ವ್ಯಕ್ತಪಡಿಸಿದ್ದಾರೆ. ದೇಶದ ಅನೇಕ ಕಡೆಯಲ್ಲಿ ಇಂತಹ ಘಟನೆಗಳು ನಡೆದಿದೆ. ಇದೀಗ ಈ ಒಂದು ವಿಚಾರ ವೈರಲ್​ ಆಗಿದೆ. ಇಂತಹ ತಾರತಮ್ಯವನ್ನು ಮೊದಲು ನಿಲ್ಲಿಸಬೇಕು ಎಂದು ಸೋಶಿಯಲ್​​ ಮೀಡಿಯಾದಲ್ಲಿ ಒತ್ತಾಯ ಮಾಡಿದ್ದಾರೆ. ಕೆಲವು ಬಳಕೆದಾರರು ಈ ಪದ್ಧತಿಯನ್ನು ಖಂಡನೆ ಮಾಡಿದ್ದಾರೆ. ಜಾತಿ ಅಥವಾ ಧರ್ಮದ ಆಧಾರದ ಮೇಲೆ ಬಾಡಿಗೆದಾರರನ್ನು ತಿರಸ್ಕರಿಸುವ ಜನರು ಕಡಿಮೆ. ಇನ್ನು ಇದರಲ್ಲಿ ನೀವು ಮುಸ್ಲಿಮರಾಗಿದ್ದರೆ, ಕ್ಷಮಿಸಿ, ನಾವು ಮುಸ್ಲಿಮರಿಗೆ ಬಾಡಿಗೆಗೆ ನೀಡುವುದಿಲ್ಲ ಎಂಬ ಘಟನೆಗಳು ಕೂಡ ನಡೆದಿದೆ ಎಂದು ಕಾಮೆಂಟ್​​ ಮಾಡಿದ್ದಾರೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

  ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ ! ಆದಿಚುಂಚನಗಿರಿ ಮಠದ ಶಿಕ್ಷಣ ಟ್ರಸ್ಟ್‌ಗೆ ಸೇರಿದ 100 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆರು ಎಕರೆ ಭೂಮಿ ಕಬಳಿಸಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!