ಸೋನುಗೆ ಡಿ ಬಾಸ್ ಫ್ಯಾನ್ಸ್ ಕಾಟ ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​..

ದರ್ಶನ್ ಅಭಿಮಾನಿಗಳು ಸೋನು ಶೆಟ್ಟಿ ಅವರಿಗೆ ಅಶ್ಲೀಲ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದಾರೆ. ಸೋನು ಶೆಟ್ಟಿ ಅಭಿಮಾನಿಗಳ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ. ರಮ್ಯಾ ಅವರು ಈ ಬಗ್ಗೆ ಪೊಲೀಸ್ ದೂರು ದಾಖಲಿಸಿದ್ದು, ಕೆಲವರನ್ನು ಬಂಧಿಸಲಾಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ. ‘ದರ್ಶನ್ ರೌಡಿ ಆಗಬೇಕಿತ್ತು’ ಎಂದ ಕಂಟೆಂಟ್ ಕ್ರಿಯೇಟರ್​ ಸೋನುಗೆ ಡಿ

ನಟ ದರ್ಶನ್ ಅಭಿಮಾನಿಗಳಿಗೆ ಇತ್ತೀಚೆಗೆ ರಮ್ಯಾ  ಬಿಸಿ ಮುಟ್ಟಿಸಿದ್ದಾರೆ. ತಮಗೆ ಅಶ್ಲೀಲ ಸಂದೇಶ ಕಳುಹಿಸಿದ ಅನೇಕರ ಹೆಸರನ್ನು ಅವರು ಸೈಬರ್ ಕ್ರೈಮ್​ಗೆ ನೀಡಿದ್ದು, ಈ ಪೈಕಿ ಕೆಲವರ ಬಂಧನ ಆಗಿದೆ. ಆದಾಗ್ಯೂ ಅವರ ಅಭಿಮಾನಿಗಳು ತಮ್ಮ ಕಾಯಕ ಮುಂದುವರಿಸಿದ್ದಾರೆ. ‘ದರ್ಶನ್ ರೌಡಿ ಆಗಬೇಕಿತ್ತು, ಅಪ್ಪಿ ತಪ್ಪಿ ಹೀರೋ ಆಗಿದ್ದಾರೆ’ ಎಂದಿದ್ದ ಕಂಟೆಂಟ್ ಕ್ರಿಯೇಟರ್ ಸೋನು ಶೆಟ್ಟಿಗೆ ಡಿ ಬಾಸ್ ಫ್ಯಾನ್ಸ್ ಅಶ್ಲೀಲ ಪದ ಬಳಕೆ ಮಾಡಿ ಬೈದಿದ್ದಾರೆ.

‘ಡಿ ಬಾಸ್ ಹಾಗೂ ಅವರ ಫ್ಯಾನ್ಸ್ ಇಷ್ಟ ಆಗಲ್ಲ. ಅವರು ರೌಡಿ ಆಗಬೇಕಿತ್ತು. ಅಪ್ಪಿ-ತಪ್ಪಿ ಹೀರೋ ಆಗಿದ್ದಾರೆ. ಅದುವೇ ಪ್ರಾಬ್ಲಂ. ಅವರ ಫ್ಯಾನ್ಸ್ ಕೂಡ ಹಾಗೆಯೇ ಇದ್ದಾರೆ. ಅವರ ಫ್ಯಾನ್ಸ್​ಗೆ ಬುದ್ಧಿ ಕಲಿಸಬೇಕು’ ಎಂದು ವಾರಗಳ ಹಿಂದೆ ಸೋನು ಶೆಟ್ಟಿ ಪೋಸ್ಟ್ ಮಾಡಿದ್ದರು. ಇದಾದ ಬಳಿಕ ಅವರ ಕಮೆಂಟ್ ಬಾಕ್ಸ್ ಹಾಗೂ ಇನ್​ಸ್ಟಾಗ್ರಾಮ್ ಇನ್​​ಬಾಕ್ಸ್​​ನಲ್ಲಿ ದರ್ಶನ್ ಅಭಿಮಾನಿಗಳು ಅಶ್ಲೀಲ ಸಂದೇಶ ಹಾಗೂ ಬೆದರಿಕೆ ಒಡ್ಡುವ ಸಂದೇಶ ಕಳುಹಿಸುತ್ತಿದ್ದಾರೆ.

https://www.goodnews24x7.com/a-man-booked-a-taxi-for-exactly-%e2%82%b912000/ ಬಸ್‌ ಮುಷ್ಕರದ ಹಿನ್ನೆಲೆ ಬರೋಬ್ಬರಿ ₹12 ಸಾವಿರಕ್ಕೆ ಟ್ಯಾಕ್ಸಿ ಬುಕ್​ ಮಾಡಿದ ವ್ಯಕ್ತಿ.!

‘ದರ್ಶನ್ ಹೆಸರು ಬಳಸಿಕೊಂಡು ನೀವು ಪಬ್ಲಿಸಿಟಿ ಮಾಡಿಕೊಳ್ಳುತ್ತಿದ್ದೀರಾ ಎಂದು ಅನೇಕರು ಹೇಳುತ್ತಿದ್ದಾರೆ. ಆದರೆ, ನನಗೆ ಅವರ ಹೆಸರನ್ನು ತೆಗೆದುಕೊಂಡು ಪಬ್ಲಿಸಿಟಿ ಪಡೆದುಕೊಳ್ಳೋ ಅಗತ್ಯ ನನಗೆ ಇಲ್ಲ’ ಎಂದು ಸೋನು ಶೆಟ್ಟಿ ಹೇಳಿದ್ದಾರೆ. ಇದಾದ ಬಳಿಕ ಸೋನು ಶೆಟ್ಟಿ ಅವರು ಮತ್ತೊಂದು ವಿಡಿಯೋ ಹಂಚಿಕೊಂಡಿದ್ದು, ಇದರಲ್ಲಿ ದರ್ಶನ್ ಅಭಿಮಾನಿಗಳು ಮಾಡಿದ ಕೆಟ್ಟ ಕಮೆಂಟ್​ಗಳನ್ನು ತೋರಿಸಿದ್ದಾರೆ. ಸದ್ಯ ಅವರು ಕಮೆಂಟ್ ಬಾಕ್ಸ್ ಆಫ್ ಮಾಡಿದ್ದಾರೆ.

ರಮ್ಯಾ ಕೇಸ್
ರಮ್ಯಾ ಅವರು ‘ರೇಣುಕಾ ಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗುವ ನಿರೀಕ್ಷೆ ಇದೆ’ ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ದರ್ಶನ್ ಅಭಿಮಾನಿಗಳು ರಮ್ಯಾಗೆ ಅಶ್ಲೀಲ ಸಂದೇಶ ಕಳುಹಿಸಿದ್ದರು. ಕೆಲವರು ಬೆದರಿಕೆ ಹಾಕಿದ್ದರು. ಇದಕ್ಕೆ ರಮ್ಯಾ ಕೇಸ್ ಹಾಕಿದ್ದಾರೆ. ಈ ಪ್ರಕರಣದಲ್ಲಿ ಕೆಲವರ ಬಂಧನ ಆಗಿದೆ. ಇದಾದ ಬಳಿಕವೂ ಅವರು ಬುದ್ಧಿ ಕಲಿತಂತೆ ಕಾಣಿಸುತ್ತಿಲ್ಲ.

Related Posts

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ರಾಜ್ಯದಲ್ಲಿ ಈ ತಿಂಗಳಿನಿಂದ ಆರಂಭವಾಗಲಿರುವ ಎಸ್‌ಐಆರ್ (ಮತದಾರರ ಪಟ್ಟಿ ಪರಿಷ್ಕರಣೆ) ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ನಡೆಸುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ. ವಿಧಾನಸೌಧದಲ್ಲಿ ನಡೆದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, “ಕೇರಳದ ಮಾದರಿಯಲ್ಲಿ ನಮ್ಮಲ್ಲೂ ಈ…

ನಾನು ಸಿಎಂ ಆದ್ರೆ ಮಹಿಳೆಯರಿಗೆ 3,000 ರೂ. ಪುರುಷರಿಗೆ 2,000 ರೂ.: ಶಾಸಕ ಯತ್ನಾಳ್ !

  ಬಾಗಲಕೋಟೆ ಉಪಚುನಾವಣೆ ಅಖಾಡದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವೀರಣ್ಣ ಚರಂತಿಮಠ ಅವರ ಪರವಾಗಿ ಪ್ರಚಾರ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಹಿಂದೂ ಸಮಾಜದ ಐಕ್ಯತೆಯನ್ನು…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!