ಮಡೆನೂರು ಮನು ಅವರು ಇತ್ತೀಚೆಗೆ ಸಾಕಷ್ಟು ಸುದ್ದಿ ಆಗಿದ್ದರು. ಇದಕ್ಕೆ ಕಾರಣ ಆಗಿದ್ದು ಅವರು ನಡೆದು ಕೊಂಡ ರೀತಿ. ಅವರು ಶಿವರಾಜ್ಕುಮಾರ್, ದರ್ಶನ್, ಧ್ರುವ ಸೇರಿದಂತೆ ಅನೇಕ ಸೆಲೆಬ್ರಿಟಿಗಳ ಬಗ್ಗೆ ತುಚ್ಚವಾಗಿ ಮಾತನಾಡಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಈ ಹೇಳಿಕೆ ಬೆನ್ನಲ್ಲೇ ಧ್ರುವ ಸರ್ಜಾ ಬಳಿ ತೆರಳಿ ಅವರು ಕ್ಷಮೆ ಕೇಳಿದ್ದರು. ಈಗ ಶಿವರಾಜ್ಕುಮಾರ್ ಕಾಲಿಗೆ ಬಿದ್ದು ಮನು ಕ್ಷಮೆ ಕೇಳಿದ್ದಾರೆ.





