ಬೆಂಗಳೂರಲ್ಲಿ ಕಸ ಕೊಟ್ಟು ಕೆಲಸಕ್ಕೆ ಹೋಗಿ..!

ಮನೆ ಮನೆಗಳಿಂದ ಕಸ ಸಂಗ್ರಹ ಮಾಡುವ ಕಸದ ಆಟೋಗಳು ಇನ್ಮುಂದೆ ಮೊದಲಿಗಿಂತ ಬೇಗ ಮನೆಗಳ ಬಳಿ ಬರಲಿದೆ. ಇಷ್ಟು ದಿನ ಬೆಳಗ್ಗೆ 6 ಗಂಟೆಯಿಂದ 7.30ರವರೆಗೂ ಏರಿಯಾ ರೌಂಡ್ ಹೊಡಿಯುತ್ತಿತ್ತು. ಆದ್ರೆ ಇನ್ಮೇಲೆ ಬೆಳಗ್ಗೆ 5.30ವರೆಯಿಂದ 6.30ರವರೆಗೂ ಕಸ ಸಂಗ್ರಹಣೆ ಮಾಡಲಿದೆ. ಹಾಗಿದ್ರೆ ಈ ದಿಢೀರ್​ ಬದಲಾವಣೆಗೆ ಕಾರಣ ಏನು ಅನ್ನೋ ವಿವರ ಇಲ್ಲಿದೆ.

‘ಕಸ ಕೊಟ್ಟು ಹೋಗಿ’
ಕಸ ಸಂಗ್ರಹ ಆಟೋ ಲೇಟ್ ಆಗಿ ಬರುವುದರಿಂದ ಮುಂಜಾನೆ ಕೆಲಸಕ್ಕೆ ಹೋಗೋರು ಕಸ ವಿಲೇವಾರಿ ಮಾಡದೇ ಹೋಗ್ತಾರೆ. ಹೀಗೆ, ವಿಲೇವಾರಿ ಮಾಡದ ಕಸವನ್ನ ರಸ್ತೆಗಳ‌ ಪಕ್ಕ, ಅಥವಾ ಕಸದ ರಾಶಿಗಳಿರುವ ಕಡೆ ಹಾಕಿ ಹೋಗ್ತಾರೆ. ಹಾಗಾಗಿ, ಮುಂಜಾನೆ ಕೆಲಸಕ್ಕೆ ಹೋಗೋರು, ತಾವು ಕೆಲಸಕ್ಕೆ‌‌ ಹೋಗೋ ಮುಂಚೆ ಕಸ ಕೊಟ್ಟು ಹೋಗ್ಲಿ ಅನ್ನೋದು ಬದಲಾವಣೆಗೆ ಕಾರಣವಂತೆ.

ಬೆಂಗಳೂರು ಸ್ವಚ್ಚವಾಗಿರಬೇಕು, ಕಸ ಮುಕ್ತ ನಗರ ಮಾಡ್ಬೇಕು ಅನ್ನೋದಷ್ಟೇ ಇದರ ಉದ್ದೇಶವಾಗಿದ್ದು, ಇದರಿಂದಾದರೂ ರಸ್ತೆ ರಸ್ತೆಯಲ್ಲಿ ಕಸ ಸುರಿಯೋದಕ್ಕೆ ಕಡಿವಾಣ ಬೀಳುತ್ತೋ ಕಾದುನೋಡೋಣ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ನೈಸ್ ಯೋಜನೆಯ ವಿರುದ್ಧ ಜೆಡಿಎಸ್ ಸಮರ: ಸರ್ಕಾರದ ಮುಂದೆ 6 ಪ್ರಮುಖ ಬೇಡಿಕೆಗಳು

ವಿಧಾನಮಂಡಲ ಅಧಿವೇಶನದಲ್ಲಿ ನೈಸ್ (NICE) ಯೋಜನೆಯ ಅಕ್ರಮಗಳ ಕುರಿತು ಚರ್ಚಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ, ಜೆಡಿಎಸ್ ಮುಖಂಡರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರ ನೇತೃತ್ವದ ನಿಯೋಗವು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!