ನಿಂಬೆ ಹಣ್ಣಿನ ಮೇಲೆ ಕಾರ್ ಹತ್ತಿಸಲು ಹೋಗಿ ಶೋ ರೂಮ್​​ನಿಂದ ಕಾರು ಸಮೇತ ಕೆಳಗೆ ಹಾರಿದ ಮಹಿಳೆ

ಸಾಮಾನ್ಯವಾಗಿ ಹೊಸ ವಾಹನ ಖರೀದಿಸಿದರೆ, ಗಾಡಿಗೆ ಯಾವುದೇ ದೃಷ್ಟಿಯಾಗದಿರಲಿ, ತನ್ನನ್ನು ಸದಾ ಸುರಕ್ಷಿತವಾಗಿಟ್ಟಿರಲಿ ಎಂದು ಪೂಜೆ ಮಾಡಿಸುವುದು ಸಹಜ. ಹಾಗೆಯೇ ಮಹಿಳೆಯೊಬ್ಬರು ಮಹಿಂದ್ರಾ ಅವರ ಥಾರ್​ ಗಾಡಿಯನ್ನು ಖರೀದಿಸಿದ್ದರು. ಶೋ ರೂಮ್​​ನ ಮೊದಲ ಮಹಡಿಯಲ್ಲಿ ನಿಂಬೆ ಹಣ್ಣಿನ ಮೇಲೆ ಗಾಡಿಯನ್ನು ಹತ್ತಿಸಲು ಹೋಗಿ, ಮೊದಲ ಮಹಡಿಯಿಂದ ಗಾಜು ಒಡೆದು ಗಾಡಿ ಸಮೇತ ಕೆಳಗೆ ಹಾರಿರುವ ಘಟನೆ ದೆಹಲಿಯಲ್ಲಿ ನಡೆದಿದೆ.

ಮಾನಿ ಪವಾರ್ ದೆಹಲಿಯ ನಿರ್ಮಾಣ್ ವಿಹಾರ್‌ನಲ್ಲಿರುವ ಮಹೀಂದ್ರಾ ಶೋರೂಮ್‌ಗೆ ಭೇಟಿ ನೀಡಿ, 27 ಲಕ್ಷ ರೂಪಾಯಿ ಮೌಲ್ಯದ ತಮ್ಮ ಹೊಸ ಥಾರ್ ಕಾರಿನ ಡೆಲಿವರಿ ಪಡೆದರು. ಶೋರೂಮ್‌ನಿಂದ ಕಾರನ್ನು ಹೊರಗೆ ಓಡಿಸುವ ಮೊದಲು ಪೂಜೆ ಮತ್ತು ಆಚರಣೆ ಮಾಡಲು ಪವಾರ್ ನಿರ್ಧರಿಸಿದರು. ಶೋರೂಮ್‌ನ ಮೊದಲ ಮಹಡಿಯಲ್ಲಿ ನಿಲ್ಲಿಸಲಾಗಿದ್ದ ಥಾರ್‌ನ ಚಕ್ರದ ಮುಂದೆ ನಿಂಬೆಹಣ್ಣನ್ನು ಇರಿಸಲಾಗಿತ್ತು.ಅದರ ಮೇಲೆ ನಿಧಾನವಾಗಿ ಕಾರನ್ನು ಚಲಾಯಿಸುವ ಬದಲು ಆಕ್ಸಿಲರೇಟರ್ ಒತ್ತಿದ ಪರಿಣಾಮ ನೇರವಾಗಿ ಮೊದಲ ಮಹಡಿಯಿಂದ ಕಾರು ಕೆಳಗೆ ಬಿದ್ದಿದೆ. ಪವಾರ್ ಮತ್ತು ಒಳಗೆ ಕುಳಿತಿದ್ದ ವಿಕಾಸ್ ಕಾರಿನ ಕಿಡಕಿ ಒಡೆದು ಕೆಳಗೆ ಜಂಪ್ ಮಾಡಿದ್ದ ಕಾರಣ ಅಷ್ಟಾಗಿ ಗಾಯಗಳಾಗಿಲ್ಲ. ಪ್ರಾಣಾಪಾಯದಿಂದ ಪಾರಾಗಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!