ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಸಿದ್ಧತೆ!

 

ಕುಕ್ಕರಹಳ್ಳಿ ಕೆರೆ ಬಳಿ ರೈಲ್ವೆ ಅಂಡರ್ ಪಾಸ್ ನಿರ್ಮಾಣಕ್ಕೆ ಡಿಪಿಆರ್ ಸಿದ್ಧವಾಗಿದೆ. ಕಾಮಗಾರಿಗೆ ಪರಿಸರವಾದಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.
ಪಾರಂಪರಿಕ ನಗರಿಯ ಜಲಮೂಲ ಹಾಗೂ ನಗರ ಸೌಂದರ್ಯದ ಮುಕುಟದಂತಿರುವ ಕುಕ್ಕರಹಳ್ಳಿ ಕೆರೆ ಬಳಿಯ ರೈಲ್ವೆ ಗೇಟಿನ ಕೆಳಭಾಗದಲ್ಲಿ ಕೆಳ ಸೇತುವೆ ಮಾಡಲು ಯೋಜನೆ ಸಿದ್ಧಪಡಿಸಲಾಗಿದೆ. ಇದಕ್ಕೆ ಪರಿಸರವಾದಿಗಳು ವಿರೋಧ ವ್ಯಕಪಡಿಸಿದರೆ, ಇನ್ನೊಂದೆಡೆ ಪರಿಸರಕ್ಕೆ ಯಾವುದೇ ಧಕ್ಕೆಯಾಗದಂತೆ ಕೆಳ ಸೇತುವೆ ನಿರ್ಮಾಣ ಮಾಡುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.

ಅಶೋಕ್ ಪುರಂ ರೈಲ್ವೆ ನಿಲ್ದಾಣ ಮೇಲ್ದರ್ಜೆಗೇರಿಸಿದ ಬಳಿಕ ಕುಕ್ಕರಹಳ್ಳಿ ಬಳಿಯ ರೈಲ್ವೆ ಗೇಟ್ ಮೂಲಕ ಪ್ರತಿನಿತ್ಯ ಸುಮಾರು 20 ರೈಲುಗಳು ಅಶೋಕ್ ಪುರಂ ರೈಲ್ವೆ ನಿಲ್ದಾಣ ಹಾಗೂ ಚಾಮರಾಜನಗರಕ್ಕೆ ಓಡಾಡುತ್ತವೆ. ಅದರ ಜೊತೆಗೆ ಈ ರೈಲ್ವೆ ಹಳಿಗಳ ಮೇಲೆ ಬೋಗಾದಿ ಕಡೆ ಓಡಾಡುವ ನೂರಾರು ವಾಹನಗಳಿಂದ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ರೈಲ್ವೆ ಕ್ರಾಸಿಂಗ್​ಗೆ ಅಂಡರ್ ಪಾಸ್ ನಿರ್ಮಾಣ ಮಾಡಲು ಈಗಾಗಲೇ ಡಿಪಿಆರ್ ತಯಾರಿಸಲಾಗಿದೆ. ಸಂಸದ ಯದುವೀರ್ ಒಡೆಯರ್ ಹಾಗೂ ಅಧಿಕಾರಿಗಳ ತಂಡ ಅಂಡರ್ ಪಾಸ್ ನಿರ್ಮಾಣದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದು, ಗುದ್ದಲಿ ಪೂಜೆಗೂ ಸಿದ್ಧತೆ ಮಾಡಿಕೊಳ್ಳಲಾಗಿದೆ.

80 ಮರಗಳನ್ನು ಗುರುತು ಮಾಡಲಾಗಿದೆ: ಮೈಸೂರು ವಿಶ್ವವಿದ್ಯಾಲಯದ ಕ್ರಾಫರ್ಡ್ ಭವನದಿಂದ ಕುಕ್ಕರಹಳ್ಳಿ ಕೆರೆಯ ಮುಂಭಾಗದವರೆಗೆ ರೈಲ್ವೆ ಅಂಡರ್ ಪಾಸ್ 588 ಮೀಟರ್ ಉದ್ದ ಇರಲಿದೆ. ಇದಕ್ಕಾಗಿ ಕ್ರಾಫರ್ಡ್ ಭವನ ಕಾಂಪೌಂಡ್ ಹಾಗೂ ಪಕ್ಕದ ಮೈದಾನದ ಕಾಂಪೌಂಡ್ ತೆರವುಗೊಳಿಸಬೇಕು. ಕುಕ್ಕರಹಳ್ಳಿ ಕೆರೆ ಜಂಕ್ಷನ್​ನ ಎರಡು ಬದಿಯ ಸುಮಾರು 30ರಿಂದ 100 ವರ್ಷ ಹಳೆಯದಾದ ಆಲ, ಛತ್ರಿ, ಹೊಂಗೆ, ತೇಗ, ಅರಳಿ ಹಾಗೂ ಬೇವು ಸೇರಿದಂತೆ 80ಕ್ಕೂ ಹೆಚ್ಚು ಮರಗಳಿವೆ. ಈ ಮರಗಳನ್ನ ಕಡಿದರೆ ಮೈಸೂರು ನಗರದ ಜಲಮೂಲ ಹಾಗೂ ಸೌಂದರ್ಯಕ್ಕೆ ಧಕ್ಕೆಯಾಗಲಿದೆ. ಆದ್ದರಿಂದ ಇಲ್ಲಿ ನಿರ್ಮಿಸಲು ಉದ್ದೇಶಿಸಿರುವ ಅಂಡರ್ ಪಾಸ್ ರಸ್ತೆಯನ್ನ ಕೈ ಬಿಡಬೇಕೆಂಬುದು ಪರಿಸರವಾದಿಗಳ ಆಗ್ರಹ.

“ಸದಾ ವಾಹನ ದಟ್ಟಣೆಯಿಂದ ಕೂಡಿರುವ ಈ ರೈಲ್ವೆ ಕ್ರಾಸಿಂಗ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಬೇಡಿಕೆ ಇತ್ತು. ಆದ್ದರಿಂದ ಇಲ್ಲಿ ಅಂಡರ್ ಪಾಸ್ ನಿರ್ಮಾಣಕ್ಕೆ ಡಿಪಿಆರ್ ತಯಾರಿಸಲಾಗಿದ್ದು, ಸ್ಥಳ ಪರಿಶೀಲನೆ ಸಹ ನಡೆಸಲಾಗಿದೆ. ಕುಕ್ಕರಹಳ್ಳಿ ಕೆರೆಯ ಆವರಣದಲ್ಲಿರುವ ಕೆಲವು ಮರಗಳನ್ನ ಸ್ಥಳಾಂತರಿಸಲು ಚಿಂತನೆ ನಡೆಸಲಾಗಿದೆ. ಆದರೂ ಪರಿಸರವಾದಿಗಳಿಂದ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ನಡೆಸಿ ಸಾಧಕ-ಬಾಧಕಗಳ ಬಗ್ಗೆ ಚರ್ಚಿಸಲಾಗುವುದು. ಆನಂತರ ಮುಂದುವರೆಯಲಾಗುವುದು” ಎಂದು ಸಂಸದ ಯದುವೀರ್ ಒಡೆಯರ್ ತಿಳಿಸಿದರು.

ರಾಷ್ಟ್ರಕವಿ ಕುವೆಂಪು ಅವರ ವಾಕಿಂಗ್​ನ ನೆಚ್ಚಿನ ತಾಣ ಹಾಗೂ ಮೈಸೂರು ನಗರದ ಹೃದಯ ಭಾಗದಲ್ಲಿ ಇರುವ ಕುಕ್ಕರಹಳ್ಳಿ ಕೆರೆ ಇಂದಿಗೂ ಸಹ ಮೈಸೂರಿನ ನೆಚ್ಚಿನ ವಾಕಿಂಗ್ ಸ್ಥಳವಾಗಿದೆ. ಇಲ್ಲಿನ ಸುಂದರ ಪರಿಸರದಲ್ಲಿ ವಾಕಿಂಗ್ ಮಾಡಲು ಬೆಳಗ್ಗೆ ಮತ್ತು ಸಂಜೆ ಜನರು ಆಗಮಿಸುತ್ತಾರೆ. ಇಂತಹ ಪರಿಸರವನ್ನ ಹಾಳುಮಾಡಿ ರೈಲ್ವೆ ಅಂಡರ್ ಪಾಸ್ ನಿರ್ಮಾಣ ಬೇಡ ಹಾಗೂ ಈಗಾಗಲೇ ಪಕ್ಕದಲ್ಲೇ ಸರಸ್ವತಿ ಪುರಂ ಅಂಡರ್ ಪಾಸ್ ಇದೆ, ಜೊತೆಗೆ ಕಲಾಮಂದಿರ ರಸ್ತೆ ಇದೆ, ಮೈಸೂರು ಪಾರಂಪರಿಕ ನಗರವಾಗಿರಲು ಇಂತಹ ಕಾಮಗಾರಿಗಳು ಬೇಡ ಎನ್ನುತ್ತಾರೆ ಪರಿಸರವಾದಿಗಳು.

Related Posts

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ನಡುವಿನ ಆತ್ಮೀಯ ಸ್ನೇಹ ಇಡೀ ವಿಶ್ವದ ಗಮನ ಸೆಳೆದಿದೆ. ಇವರಿಬ್ಬರ ರಾಜತಾಂತ್ರಿಕ ಒಡನಾಟವು ಭಾರತ ಮತ್ತು ಇಟಲಿ ನಡುವಿನ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ. ಪ್ರಸ್ತುತ ನಡೆಯುತ್ತಿರುವ ಜಿ7…

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

ಕನ್ನಡ ಚಿತ್ರರಂಗದ ಕ್ಲಾಸಿಕ್ ಸಿನಿಮಾ ಎಂಬ ಖ್ಯಾತಿ ‘ಹಳ್ಳಿ ಮೇಷ್ಟ್ರು’ ಚಿತ್ರಕ್ಕಿದೆ. ಈ ಸಿನಿಮಾ ಬಿಡುಗಡೆಯಾಗಿ 3 ದಶಕಗಳೇ ಕಳೆದಿವೆ. ಈ ಚಿತ್ರದ ಶೂಟಿಂಗ್ ಸಮಯದಲ್ಲಿ ನಡೆದಿದ್ದ ಒಂದು ವಿವಾದ ಮಾತ್ರ ನಟಿ ಬಿಂದಿಯಾ ಮತ್ತು ಕ್ರೇಜಿಸ್ಟಾರ್ ರವಿಚಂದ್ರನ್ ನಡುವೆ ದೊಡ್ಡ…

You Missed

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಮೆಲೋಡಿ ಡಿಪ್ಲೊಮಸಿ: “ನಾವು ಜಗದ್ವಿಖ್ಯಾತ ಜೋಡಿ” ಎಂದ ಇಟಲಿ ಪ್ರಧಾನಿ ಮೆಲೋನಿ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

ಮತದಾರರ ಪಟ್ಟಿ ಪರಿಷ್ಕರಣೆ (SIR): ಅಧಿಕಾರಿಗಳಿಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ಸೂಚನೆ

3 ದಶಕಗಳ ಬಳಿಕ ನಟಿ ಬಿಂದ್ಯಾ ಕ್ಷಮೆ ಕೇಳಿದ್ದೇಕೆ?

3 ದಶಕಗಳ ಬಳಿಕ  ನಟಿ ಬಿಂದ್ಯಾ  ಕ್ಷಮೆ ಕೇಳಿದ್ದೇಕೆ?

ಭೀಮಾ ನದಿ ತೀರದಲ್ಲಿ ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಭೀಮಾ ನದಿ ತೀರದಲ್ಲಿ  ಒಂದೇ ಕುಟುಂಬದ ಐವರು ಸೇರಿ 6 ಜನರ ಭೀಕರ ಕೊ*ಲೆ!

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಕರ್ನಾಟಕ ನೂತನ ಸಿಎಂ ಆಯ್ಕೆ: ಇಂದು ಸಂಜೆ ವಿಧಾನಸೌಧದಲ್ಲಿ ಮಹತ್ವದ ಸಿಎಲ್‌ಪಿ ಸಭೆ

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!

ಆತ್ಮನಿರ್ಭರ ಭಾರತಕ್ಕೆ ದೊಡ್ಡ ಬಲ: ಅತ್ಯಂತ ಬಲಿಷ್ಠ ‘ವೆಲ್ಡೆಡ್ ಪೈಪ್’ ಉತ್ಪಾದಿಸಿ ದಾಖಲೆ ಬರೆದ AM/NS ಇಂಡಿಯಾ!