ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ!

ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಹಿವರೆ ಬಜಾರ್ ಗ್ರಾಮ ವಿಶಿಷ್ಟವಾಗಿದೆ. ಇಲ್ಲಿ ಒಂದೇ ಒಂದು ಸೊಳ್ಳೆಯೂ ಇಲ್ಲ, ಸೊಳ್ಳೆ ಹಿಡಿದು ಕೊಟ್ಟರೆ 400 ರೂ. ಬಹುಮಾನ. ಹಿಂದೆ ಬಡತನದಿಂದ ಬಳಲುತ್ತಿದ್ದ ಈ ಗ್ರಾಮ, ಸಮುದಾಯದ ಪ್ರಯತ್ನದಿಂದ ನೀರು ನಿರ್ವಹಣೆ ಹಾಗೂ ಸ್ವಚ್ಛತೆಯಲ್ಲಿ ಮಾದರಿಯಾಗಿದೆ. ಇಂದು 80ಕ್ಕೂ ಹೆಚ್ಚು ಕೋಟ್ಯಧಿಪತಿಗಳಿರುವ ಈ ಹಳ್ಳಿಯ ಕಥೆ ದೇಶಕ್ಕೆ ಸ್ಪೂರ್ತಿದಾಯಕ.

ಪುಣೆ, ಜುಲೈ 06: ಭಾರತದಲ್ಲಿ ಪ್ರತಿ ವರ್ಷ ಸೊಳ್ಳೆಕಡಿತ ಮತ್ತು ಅದರಿಂದ ಬರುವ ರೋಗಗಳಿಂದ ಸಾವಿರಾರು ಜನರು ಪರದಾಡುತ್ತಾರೆ. ಆದರೆ, ನಮ್ಮ ದೇಶದಲ್ಲೇ ಒಂದೇ ಒಂದು ಸೊಳ್ಳೆಯೂ ಇಲ್ಲದ ವಿಚಿತ್ರ ಹಾಗೂ ಅದ್ಭುತ ಹಳ್ಳಿಯೊಂದಿದೆ. ಅಷ್ಟೇ ಅಲ್ಲ, ಈ ಗ್ರಾಮದಲ್ಲಿ ನೀವು ಎಲ್ಲಾದರೂ ಒಂದು ಸೊಳ್ಳೆಯನ್ನು ಹುಡುಕಿ ಹಿಡಿದು ಕೊಟ್ಟರೆ ನಿಮಗೆ 400 ರೂಪಾಯಿ ಬಹುಮಾನ ಕೂಡ ಕೊಡ್ತಾರೆ. ಹೌದು, ಇದು ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ‘ಹಿವರೆ ಬಜಾರ್’ ಎಂಬ ಹಳ್ಳಿಯ ಆಸಕ್ತಿದಾಯಕ ಕಥೆ.

ಶೇ.90 ಬಡವರಿದ್ದ ಹಳ್ಳಿಯಲ್ಲಿ ಈಗ 80 ಜನ ಕೋಟ್ಯಧಿಪತಿಗಳು ಇಂದು ಹಿವರೆ ಬಜಾರ್ ಗ್ರಾಮದಲ್ಲಿ ಒಟ್ಟು 305 ಕುಟುಂಬಗಳಿದ್ದು, ಇವರಲ್ಲಿ 80 ಕ್ಕೂ ಹೆಚ್ಚು ಜನ ಕೋಟ್ಯಧಿಪತಿಗಳಿದ್ದಾರೆ . ಆದರೆ, 1990 ರ ದಶಕದ ಮೊದಲು ಈ ಗ್ರಾಮದ ಪರಿಸ್ಥಿತಿ ಹೀಗಿರಲಿಲ್ಲ. ತೀವ್ರ ಬರಗಾಲದಿಂದ ಕಂಗೆಟ್ಟಿದ್ದ ಈ ಊರಿನ ಶೇ. 90 ರಷ್ಟು ಜನರು ಅತ್ಯಂತ ಬಡವರಾಗಿದ್ದರು. ಕುಡಿಯಲು ನೀರಿಲ್ಲದೆ ಗ್ರಾಮಸ್ಥರು ಊರು ಬಿಟ್ಟು ವಲಸೆ ಹೋಗುತ್ತಿದ್ದರು

1990 ರಲ್ಲಿ ಗ್ರಾಮಸ್ಥರೆಲ್ಲಾ ಒಟ್ಟಾಗಿ ‘ಜಂಟಿ ಅರಣ್ಯ ನಿರ್ವಹಣಾ ಸಮಿತಿ’ಯನ್ನು ರಚಿಸಿಕೊಂಡರು. ಊರಿನಲ್ಲೇ ಬಾವಿಗಳನ್ನು ಅಗೆಯಲು ಮತ್ತು ಲಕ್ಷಾಂತರ ಮರಗಳನ್ನು ನೆಡಲು ನಿರ್ಧರಿಸಿದರು.ಶ್ರಮದಾನ ಮತ್ತು ಸರ್ಕಾರದ ನೆರವು: ಗ್ರಾಮಸ್ಥರು ತಾವೇ ಖುದ್ದಾಗಿ ಉಚಿತವಾಗಿ ಶ್ರಮದಾನ ಮಾಡಿದರು. ಇದಕ್ಕೆ ಮಹಾರಾಷ್ಟ್ರ ಸರ್ಕಾರದ ಉದ್ಯೋಗ ಖಾತರಿ ಯೋಜನೆಯ ಬೆಂಬಲವೂ ಸಿಕ್ಕಿತು.ಈ ನಿರಂತರ ಪ್ರಯತ್ನದ ಫಲವಾಗಿ, ಒಂದು ಕಾಲದಲ್ಲಿ ನೀರಿಲ್ಲದಿದ್ದ ಈ ಗ್ರಾಮದಲ್ಲಿ ಇಂದು ಭೂಮಿಯ ಒಳಗಿನ ನೀರಿನ ಮಟ್ಟ ಕೇವಲ 30 ರಿಂದ 35 ಅಡಿಗೆ ತಲುಪಿದೆ.

ನೀರು ಉಳಿಸಲು ಬೆಳೆಗಳ ಬದಲಾವಣೆ ಗ್ರಾಮಸ್ಥರು ಕೇವಲ ನೀರನ್ನು ಸಂಗ್ರಹಿಸಲಿಲ್ಲ, ಅದನ್ನು ಜಾಣ್ಮೆಯಿಂದ ಬಳಸಲು ಕಲಿತರು. ಹೆಚ್ಚು ನೀರು ಬೇಡುವ ಭತ್ತ, ಕಬ್ಬು ಮತ್ತು ಜೋಳದಂತಹ ಬೆಳೆಗಳನ್ನು ಗ್ರಾಮದಲ್ಲಿ ಸಂಪೂರ್ಣವಾಗಿ ನಿಷೇಧಿಸಲಾಯಿತು. ಬದಲಾಗಿ ಕಡಿಮೆ ನೀರಿನಲ್ಲಿ ಬೆಳೆಯುವ, ಹೆಚ್ಚು ಲಾಭ ನೀಡುವ ಆಲೂಗಡ್ಡೆ ಮತ್ತು ಈರುಳ್ಳಿಗಳನ್ನು ಬೆಳೆಯಲು ಆರಂಭಿಸಿದರು.

ಇಂದು ಹಿವರೆ ಬಜಾರ್‌ನ ರೈತರು ಮಳೆಗಾಗಿ ಕಾಯುತ್ತಾ ಕೂರುವುದಿಲ್ಲ. ಸರಿಯಾದ ಜಲ ನಿರ್ವಹಣೆ ಹಾಗೂ ಸ್ವಚ್ಛತೆಯಿಂದಾಗಿ ಇಡೀ ಗ್ರಾಮ ಹಸಿರಾಗಿದೆ ಮತ್ತು ಸೊಳ್ಳೆ ಮುಕ್ತವಾಗಿದೆ. ಬಡತನದಿಂದ ಕೋಟ್ಯಧಿಪತಿಗಳ ಹಳ್ಳಿಯಾಗಿ ಬದಲಾಗಿರುವ ಹಿವರೆ ಬಜಾರ್ ಇಡೀ ದೇಶಕ್ಕೆ ಮಾದರಿಯಾಗಿದೆ.

Related Posts

ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್

ಸಿನಿಮಾದ ಚಿತ್ರೀಕರಣದ ವೇಳೆ ನಟಿಯರನ್ನು ಹೇಗೆ ನಡೆಸಿಕೊಳ್ಳಲಾಗುತ್ತದೆ ಎಂಬುದರ ಬಗ್ಗೆ ಕೃತಿ ಸನನ್ ಅವರು ಮಾತನಾಡಿದ್ದಾರೆ. ಹೀರೋ ಮತ್ತು ಹೀರೋಯಿನ್ ನಡುವೆ ಬಹಳ ತಾರತಮ್ಯ ಮಾಡಲಾಗುತ್ತದೆ ಎಂದು ಅವರು ಓಪನ್ ಆಗಿ ಹೇಳಿದ್ದಾರೆ. ಸೆಟ್‌ಗಳಲ್ಲಿನ ಈ ತಾರತಮ್ಯಗಳು ಸಂಪೂರ್ಣವಾಗಿ ತೊಲಗಬೇಕಿದೆ ಎಂದು…

ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು

ಥೈಲ್ಯಾಂಡ್‌ನ ಮುಕ್ದಹಾನ್‌ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 11 ವರ್ಷದ ಬಾಲಕನೊಬ್ಬ ಅಪ್ಪ ಅಮ್ಮನಿಗೆ ತಿಳಿಯದೆ ಕಾರು ಚಲಾಯಿಸಿ, ತೀರ್ಥಯಾತ್ರೆಗೆ ಹೊರಟಿದ್ದ 9 ಬೌದ್ಧ ಸನ್ಯಾಸಿಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಭೀಕರ ಅಪಘಾತದಲ್ಲಿ ಒಂಬತ್ತು ಸನ್ಯಾಸಿಗಳು ಮೃ*ತಪಟ್ಟಿದ್ದು, ಹಲವರು ಗಾಯಗೊಂಡಿದ್ದಾರೆ. ಈ ಘಟನೆ…

You Missed

ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ!

ಸೊಳ್ಳೆ ಹಿಡಿದು ಕೊಟ್ರೆ ಸಿಗುತ್ತೆ 400 ರೂ ಬಹುಮಾನ!

ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್

ಚಿತ್ರರಂಗದ ತಾರತಮ್ಯ ಬಿಚ್ಚಿಟ್ಟ ಕೃತಿ ಸನೋನ್

ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು

ಬೌದ್ಧ ಸನ್ಯಾಸಿಗಳ ಮೇಲೆ ಹರಿದ ಕಾರು, 9 ಮಂದಿ ಸಾ*ವು

ಈಗ’ ಚಿತ್ರಕ್ಕೆ ಸುದೀಪ್ ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

ಈಗ’ ಚಿತ್ರಕ್ಕೆ ಸುದೀಪ್  ಲಾಸ್ಟ್ ಚಾಯ್ಸ್ ಆಗಿತ್ತು; ರಾಜಮೌಳಿ

16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ

16 ದಾಖಲೆಗಳ ನೀಡಿದ್ರೂ ಸಿಗದ ಭಾರತೀಯ ಪೌರತ್ವ

ಕುಮಾರಸ್ವಾಮಿ ಗಂಭೀರ ಆರೋಪ, ಆಗಿದ್ದೇನು?

ಕುಮಾರಸ್ವಾಮಿ ಗಂಭೀರ ಆರೋಪ, ಆಗಿದ್ದೇನು?