ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಿಕೆ ಲೋಕಾಯುಕ್ತಕ್ಕೆ ದೂರು

ಬೆಂಗಳೂರಿನ ಕೊಡಿಗೇಹಳ್ಳಿಯಲ್ಲಿ ರಾಷ್ಟ್ರಪತಿಗಳ ಹೆಸರಿನಲ್ಲಿದ್ದ₹100 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ಕೇಂದ್ರ ಇಂಧನ ಸಚಿವಾಲಯದ ಜಾಗವನ್ನು ಸಚಿವ ಕೃಷ್ಣಭೈರೇಗೌಡರ ಆಪ್ತ ಎನ್ನಲಾದ ಕೆ.ಎಂ. ಚೇತನ್ ಕಬಳಿಸಿದ್ದಾರೆ ಎಂದು ಆರೋಪಿಸಿ ಲೋಕಾಯುಕ್ತಕ್ಕೆ ದೂರು ನೀಡಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್‌ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ ಎಂದು ಬಿಜೆಪಿ ಮುಖಂಡ ಎನ್.ಆರ್. ರಮೇಶ್ ಗಂಭೀರ ಆರೋಪ ಮಾಡಿದ್ದಾರೆ.

ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ಜಾಗ ಕಬಳಸಿದ್ರಾ ಸಚಿವರ ಆಪ್ತ?
ಬಿಜೆಪಿ ಮುಖಂಡ ಎನ್.ಆರ್. ರಮೇಶ್​​ರಿಂದ ಗಂಭೀರ ಆರೋಪ
ಕೆ.ಎಂ. ಚೇತನ್​​ ಎಂಬವರ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆ
ಸಚಿವ ಕೃಷ್ಣ ಭೈರೇಗೌಡರ ಆಪ್ತ ಎನ್ನಲಾಗಿರುವ ಕೆ.ಎಂ. ಚೇತನ್​​ ಎಂಬವರ ವಿರುದ್ಧ ಭಾರತದ‌ ರಾಷ್ಟ್ರಪತಿಗಳ‌ ಹೆಸರಿನಲ್ಲಿರುವ ನೂರಾರು ಕೋಟಿ ಮೌಲ್ಯದ ಸರ್ಕಾರಿ ಸ್ವತ್ತು ಕಬಳಿಸಿರುವ ಗಂಭೀರ ಆರೋಪ ಕೇಳಿಬಂದಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಜಾಗ ಕಬಳಿಸಲಾಗಿದೆ ಎಂದು ಆರೋಪಿಸಿ 2015-2020ರ ಅವಧಿಯಲ್ಲಿ ಬ್ಯಾಟರಾಯನಪುರದ ಕೊಡಿಗೇಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯರಾಗಿದ್ದ ಚೇತನ್​​ ವಿರುದ್ಧ ಲೋಕಾಯುಕ್ತಕ್ಕೆ ಬಿಜೆಪಿ ಮುಖಂಡ ಎನ್.ಆರ್. ರಮೇಶ್ ದೂರು ಸಲ್ಲಿಸಿದ್ದಾರೆ.

ಬೆಂಗಳೂರು ಉತ್ತರ ತಾಲೂಕಿನ ಯಲಹಂಕ ಹೋಬಳಿಯ ಕೊಡಿಗೇಹಳ್ಳಿ ಗ್ರಾಮದಲ್ಲಿನ ಚೇರ್‌ಮ್ಯಾನ್ ಕ್ಲಬ್ ಪಕ್ಕದಲ್ಲಿರುವ ಜಾಗವನ್ನು ಕಬಳಿಸಲಾಗಿದೆ. ಕೇಂದ್ರ ಇಂಧನ ಸಚಿವಾಲಯದ 32 ಗುಂಟೆ ವಿಸ್ತೀರ್ಣದ ಸ್ವತ್ತನ್ನೂ ಸೇರಿಸಿಕೊಂಡು ಚೇತನ್ ಕಾಂಪೌಂಡ್ ನಿರ್ಮಿಸಿಕೊಂಡಿದ್ದಾರೆ. ಈ ಜಾಗದ ಮೌಲ್ಯ ಸುಮಾರು 100 ಕೋಟಿ ರೂ.ಗಳಿಗೂ ಹೆಚ್ಚಾಗಿದೆ. ಸರ್ವೆ ನಂಬರ್ 14/1ರ 1 ಎಕರೆ 11 ಗುಂಟೆ ಜಾಗ ಮಾತ್ರ ಕ್ಲಬ್‌ಗೆ ಸೇರಿದೆ. ಅದಕ್ಕೆ ಹೊಂದಿಕೊಡಂತೆ ಪಶ್ಚಿಮ ಭಾಗದಲ್ಲಿ ರಾಷ್ಟ್ರಪತಿಗಳ ಹೆಸರಲ್ಲಿ ಇಂಧನ ಸಚಿವಾಲಯದ ಜಾಗ ಇದ್ದು, ಅಲ್ಲಿ ಇಂಧನ ಸಚಿವಾಲಯದ ಕ್ವಾಟ್ರಸ್‌ಗಳನ್ನ ನಿರ್ಮಿಸಲಾಗಿದೆ. ಅದರ ಹೊರತಾಗಿ ಖಾಲಿ ಇದ್ದ 32 ಗುಂಟೆ ಜಾಗಕ್ಕೆ ರಾತ್ರೋರಾತ್ರಿ ಬೇಲಿ ಹಾಕಿದ್ದಾರೆ. ತಪ್ಪು ಮಾಹಿತಿ ನೀಡಿ ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಮಾಡಿಕೊಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಬಗ್ಗೆಇಂಧನ ಸಚಿವಾಲಯ ದೂರು ದಾಖಲಿಸಿದ್ದು, ಉಚ್ಚ ನ್ಯಾಯಲಯದಲ್ಲಿ ವಿಚಾರಣೆ ಕೂಡ ನಡೆದಿದೆ. ಈ ವೇಳೆ ತಪ್ಪನ್ನು ಚೇತನ್​​ ಒಪ್ಪಿಕೊಂಡಿದ್ದಾರೆ. ಅದಾದ ಬಳಿಕ ಏಪ್ರಿಲ್‌ನಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಕೃಷ್ಣಭೈರೇಗೌಡರನ್ನ ಇಂಧನ ಸಚಿವಾಲಯದ ಅಧಿಕಾರಿಗಳು ಭೇಟಿ ಮಾಡುತ್ತಾರೆ. ಆದರೆ ಆ ವೇಳೆ ಅವರನ್ನ ದಬ್ಬಾಳಿಕೆ ಮಾಡಿ ಹೊರದಬ್ಬುವ ಕೆಲಸ ನಡೆದಿದೆ. ಜಾಗವನ್ನ ತಮ್ಮ ವಶಕ್ಕೆ ಪಡೆದುಕೊಳ್ಳಲು ಅಧಿಕಾರಿಗಳು ಹೋದಾಗ ಚೇತನ್, ಅವರ ತಂದೆ ಮಂಜುನಾಥ್, ಕೃಷ್ಣ ಭೈರೇಗೌಡರ ಬೆಂಬಲಿಗರು ಅವರನ್ನಯ ಹೆದರಿಸಿದ್ದಾರೆ. ಶಾಲಿನಿ ರಜನೀಶ್ ಅವರಿಗೂ ಕೂಡ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಆದರೆ ಅವರು ಕೂಡ ಪರೋಕ್ಷವಾಗಿ ಕೃಷ್ಣಭೈರೇಗೌಡರಿಗೆ ಸಹಕಾರ ನೀಡಿದ್ದಾರೆ. ಈ ವಿಚಾರವಾಗಿ ಲೋಕಾಯುಕ್ತಾಗೆ ದೂರು ನೀಡಿದ್ದು, ಮುಖ್ಯಮಂತ್ರಿಗಳಿಗೂ ಇದರ ದಾಖಲೆ ನೀಡಿ ಸಿಬಿಐ ತನಿಖೆ ಆಗ್ರಹಿಸುತ್ತೇನೆ ಎಂದು ಎನ್.ಆರ್. ರಮೇಶ್ ತಿಳಿಸಿದ್ದಾರೆ.

Related Posts

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕಾವೇರಿ ವನ್ಯಜೀವಿ ಧಾಮದ ಅರಣ್ಯ ಪ್ರದೇಶದಲ್ಲಿ ನಡೆದ ಶೂ*ಟೌಟ್‌ನಲ್ಲಿ ಮೂವರು ಮೃ*ತಪಟ್ಟಿರುವ ಘಟನೆಗೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ತೀವ್ರ ಗದ್ದಲ ಉಂಟಾಗಿದೆ. ಈ ಘಟನೆಗೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ಬಿಜೆಪಿ ಹಾಗೂ…

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ಅಗತ್ಯ ವಸ್ತುಗಳು ಹಾಗೂ ಇಂಧನ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಕರ್ನಾಟಕದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಂದು ಆರ್ಥಿಕ ಹೊರೆ ನೀಡಿದೆ. ವಾಹನಗಳ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ಪಡೆಯಲು ಪಾವತಿಸಬೇಕಾದ ಶುಲ್ಕವನ್ನು ಸಾರಿಗೆ ಇಲಾಖೆಯು ಪರಿಷ್ಕರಿಸಿದ್ದು, ತಕ್ಷಣದಿಂದಲೇ ಜಾರಿಗೆ ಬರುವಂತೆ…

You Missed

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ಚಾಮರಾಜನಗರ ಎನ್‌*ಕೌಂಟರ್ ಪ್ರಕರಣ: ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟನೆ .

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ವಾಹನ ಸವಾರರಿಗೆ ಬಿತ್ತು ಬೆಲೆ ಏರಿಕೆ ಬಿಸಿ: ಕರ್ನಾಟಕದಲ್ಲಿ PUC ಮಾಲಿನ್ಯ ತಪಾಸಣೆ ದರ ಹೆಚ್ಚಳ!

ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು?

ಭಾರತದಲ್ಲಿ ಮೊಬೈಲ್ ಸಂಖ್ಯೆಗಳು 10 ಅಂಕಿಗಳೇ ಏಕೆ ಇರುತ್ತವೆ? ಇದರ ಹಿಂದಿನ ಗಣಿತದ ಲೆಕ್ಕಾಚಾರವೇನು?

ಚಾಮರಾಜನಗರ ಶೂ*ಟೌಟ್ ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಮೃ*ತರ ಕುಟುಂಬಸ್ಥರ ಗಂಭೀರ ಆರೋಪ

ಚಾಮರಾಜನಗರ ಶೂ*ಟೌಟ್ ಪ್ರಕರಣ: ಅರಣ್ಯ ಇಲಾಖೆ ವಿರುದ್ಧ ಮೃ*ತರ ಕುಟುಂಬಸ್ಥರ ಗಂಭೀರ ಆರೋಪ

ಅಹಿಂದ ರಾಜಕೀಯದ ಪರಂಪರೆ ಕಾಯ್ದುಕೊಂಡ ಡಿಕೆಶಿ: ಮುಜರಾಯಿ ಖಾತೆಗೆ ದಲಿತ ಶಾಸಕರ ನೇಮಕ

ಅಹಿಂದ ರಾಜಕೀಯದ ಪರಂಪರೆ ಕಾಯ್ದುಕೊಂಡ ಡಿಕೆಶಿ: ಮುಜರಾಯಿ ಖಾತೆಗೆ ದಲಿತ ಶಾಸಕರ ನೇಮಕ

ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ !

ರಾಮಾಯಣ’ ಟ್ರೇಲರ್ ಉದ್ದಕ್ಕೂ ರಾವಣನದ್ದೇ ಅಬ್ಬರ !