ಪುಟ್ಟ ಕಂದಮ್ಮನನ್ನು ಪಕ್ಕದಲ್ಲಿ ಕೂರಿಸಿಕೊಂಡು ಆಟೋ ಓಡಿಸುವ ಮಹಿಳೆ!

 

ತಾಯಿಯ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಒಬ್ಬ ಮಹಿಳೆ ತಾಯಿ ಹಾಗೂ ತಂದೆ ಎರಡು ಆಗಿ ಮಕ್ಕಳಿಗೆ ಭದ್ರ ಭವಿಷ್ಯ ಕಟ್ಟಿಕೊಡುತ್ತಾಳೆ. ಈ ದೃಶ್ಯ ನೋಡಿದ್ರೆ ನಿಮಗೂ ಹಾಗೆಯೇ ಅನಿಸಬಹುದು. ಇದೀಗ ತನ್ನ ಪುಟ್ಟ ಪ್ರಪಂಚವಾಗಿರುವ ಮಗಳ ಭವಿಷ್ಯಕ್ಕಾಗಿ ಆಟೋ ಓಡಿಸುವ ಮಹಿಳೆಯ ವಿಡಿಯೋ ವೈರಲ್ ಆಗಿದೆ. ನೆಟ್ಟಿಗರು ಈ ದೃಶ್ಯ ನೋಡಿ ಈ ಮಹಿಳೆಯ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ತಾಯಿ ಅಂದ್ರೇನೆ ಹಾಗೆ, ತಮ್ಮ ಮಕ್ಕಳಿಗಾಗಿ ಇಡೀ ಜಗತ್ತನ್ನೇ ಎದುರು ಹಾಕಿಕೊಳ್ಳುತ್ತಾಳೆ. ಇದಕ್ಕೆ ಈ ವಿಡಿಯೋನೇ ಸಾಕ್ಷಿ. ಹೌದು ಇಲ್ಲೊಬ್ಬಳು ತಾಯಿ ಪುಟ್ಟ ಮಗುವನ್ನು ಮಡಿಲಲ್ಲಿ ಕೂರಿಸಿ ಆಟೋ ಓಡಿಸುತ್ತಾ ಬದುಕಿಗಾಗಿ ಹೋರಾಟ ನಡೆಸುತ್ತಿದ್ದಾಳೆ. ಈ ಆಟೋ ಚಾಲಕಿ ಹೆಸರು ಕೋಮಲ್ ಗಾಯಕ್ವಾಡ್ . ಪತಿ ಬಿಟ್ಟು ಹೋದ ಬಳಿಕ ಈ ಮಹಿಳೆಗೆ ಮಗಳೇ ಪ್ರಪಂಚವಾಗಿದ್ದಾಳೆ. ಈ ತಾಯಿಯೊಬ್ಬಳ ಹೋರಾಟದ ಬದುಕಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ದೃಶ್ಯ ನೋಡಿ ನೆಟ್ಟಿಗರು ಕಣ್ಣೀರು ಸುರಿಸಿದ್ದಾರೆ.

ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವಿಡಿಯೋದಲ್ಲಿಈ ಆಟೋ ಚಾಲಕಿ ತನ್ನ ಬದುಕಿನ ಕಥೆಯನ್ನು ತೆರೆದಿಟ್ಟಿದ್ದಾರೆ. ಈ ವಿಡಿಯೋದ ಶೀರ್ಷಿಕೆಯಲ್ಲಿ, ಮಕ್ಕಳು ಬೆಳಿಗ್ಗೆ 6.30ಕ್ಕೆ ಗಾಢ ನಿದ್ರೆಯಲ್ಲಿದ್ರೆ ತೇಜು ನನ್ನ ಜತೆಗೆ ಆಟೋ ಹತ್ತಿರ್ತಾಳೆ. ಇಡೀ ದಿನ ಆಟೋದಲ್ಲಿ ಕುಳಿತುಕೊಳ್ಳುತ್ತಾಳೆ. ತಿಂಡಿ, ಊಟ ನಿದ್ರೆ ಎಲ್ಲವೂ ಆಟೋದಲ್ಲೇ. ಪರ್ಭಾನಿಯಲ್ಲಿ ಜನಿಸಿದ ನಾನು ಆರ್ಥಿಕ ಸಮಸ್ಯೆ ಕಾರಣಕ್ಕೆ 10ನೇ ತರಗತಿ ಪೂರ್ಣಗೊಳಿಸಿ ಮನೆಯಲ್ಲೇ ಉಳಿದೆ. ಮನೆಯವರ ಮಾತಿನಂತೆ ಮದುವೆಯಾದೆ. ಮದುವೆ ಆದ್ಮೇಲೆ 2018ರಲ್ಲಿ ಕಲ್ಯಾಣ್ ಗೆ ಬಂದೆ. 2022ರಲ್ಲಿ ನಮ್ಮ ಮಡಿಲಿಗೆ ಮಗಳು ಬಂದಳು. ನಮ್ಮ ಪುಟ್ಟ ಪ್ರಪಂಚಕ್ಕೆ ತೇಜು ಎಂದು ಕೋಮಲ್ ನಾಮಕರಣ ಮಾಡಿದೆವು. ಮಗಳಿಗೆ 18 ತಿಂಗಳಾಗ್ತಿದ್ದಂತೆ ಎಲ್ಲ ಬದಲಾಗಿ ಹೋಯ್ತು.

ಪರ್ಭಾನಿಗೆ ಹೋಗಿ ಬರ್ತೇನೆ ಎಂದಿದ್ದ ನನ್ನ ಪತಿ, ತಿಂಗಳಾದ್ರೂ ಮನೆಗೆ ಬರಲಿಲ್ಲ. ನೆಪ ಹೇಳಿಕೊಂಡು ಮನೆಗೆ ಬರೋದನ್ನೇ ಬಿಟ್ಟ. ಹೀಗಾಗಿ ಮಗಳ ಜವಾಬ್ದಾರಿ ಹೆಗಲ ಮೇಲೆ ಬಿತ್ತು. ದುಡಿಯುವುದು ಅನಿವಾರ್ಯವಾಯ್ತು, ಹೀಗಾಗಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲ್ಸಕ್ಕೆ ಸೇರಿಕೊಂಡೆ. ಮಗಳನ್ನು ಮನೆಯಲ್ಲೇ ಬಿಟ್ಟು ಬರಬೇಕಾಗಿತ್ತು. ಆಗ ಆಟೋ ಓಡಿಸುವ ನಿರ್ಧಾರ ಮಾಡಿಕೊಂಡೆ. ದಿನಕ್ಕೆ 400- 500 ರೂಪಾಯಿ ಸಂಪಾದನೆ ಮಾಡುತ್ತೇನೆ. ತಿಂಗಳ ಬಾಡಿಗೆ, ದಿನಸಿಗೆ ದುಡಿದ ಹಣವೆಲ್ಲವು ಖರ್ಚು ಆಗ್ತಿದೆ . ಮಗಳಿಗೆ ಸುಂದರ ಭವಿಷ್ಯ ಕಟ್ಟುವ ಭರವಸೆಯಲ್ಲಿ ದಿನನಿತ್ಯ ಹೋರಾಟ ಎಂದು ಬರೆದುಕೊಂಡಿದ್ದಾರೆ.ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಆಟೋ ಓಡಿಸುತ್ತಿದ್ದರೆ ಪುಟ್ಟ ಕಂದಮ್ಮ ಆಟೋದ ಸೀಟ್‌ನ ಪಕ್ಕ ಮಗಳಿಗಾಗಿ ಸೀಟ್‌ ಮಾಡಿಕೊಟ್ಟಿದ್ದಾಳೆ. ಪುಟ್ಟ ಹುಡುಗಿಯೂ ಆಟೋದಲ್ಲಿ ತನ್ನ ತಾಯಿ ಪಕ್ಕ ಕುಳಿತುಕೊಂಡಿರುವುದನ್ನು ಕಾಣಬಹುದು. ಈ ಪುಟಾಣಿಗೆ ಅಮ್ಮ ಕೈ ತುತ್ತು, ಪ್ರೀತಿ ಎಲ್ಲವೂ ಈ ಆಟೋದಲ್ಲೇ ಸಿಗುವುದನ್ನು ನೋಡಬಹುದು.

Related Posts

45 ವರ್ಷದ ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

ಮಧ್ಯಪ್ರದೇಶ :- 45 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಕಳ್ಳತನ ಪ್ರಕರಣಕ್ಕೆ ಕೊನೆಗೂ ಅಂತ್ಯ ಸಿಕ್ಕಿದೆ, ಅಂತ್ಯ ಸಿಕ್ಕಿದ್ದು ವಿಧಿ -ವಿಜ್ಞಾನ, ಅಥವಾ ಸುಳಿವುಗಳಿಂದಲ್ಲ, ಬದಲಾಗಿ ಸಾಮಾಜಿಕ ಮಾಧ್ಯಮ ಪ್ರವೃತ್ತಿ ಮತ್ತು ಕೇವಲ ಮೋಜಿಗಾಗಿ ಬಳಸಲಾದ AI ಉಪಕರಣದಿಂದ! ಮಧ್ಯಪ್ರದೇಶದ ಉಜ್ಜಯಿನಿಯ ಆಭರಣ…

UPI ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ನವದೆಹಲಿ :- ಈಗಾಗಲೇ ಕೇಂದ್ರ ಸರ್ಕಾರ 2,000 ವರೆಗಿನ ಯುಪಿಐ ಹಾಗೂ ರೂಪೇ (RuPay) ಡೆಬಿಟ್ ಕಾರ್ಡ್ ವಹಿವಾಟುಗಳಿಗೆ ಯಾವುದೇ ಬ್ಯಾಂಕ್ ಅಥವಾ ಪಾವತಿ ಸಂಸ್ಥೆಗಳು ಶುಲ್ಕ ವಿಧಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ ಬ್ಯಾಂಕ್‌ಗಳು, ಸೇವಾ ಪೂರೈಕೆದಾರರು ಮತ್ತು ವಿವಿಧ ಸಂಘಟನೆಗಳ…

You Missed

45 ವರ್ಷದ ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

45 ವರ್ಷದ  ಕಳ್ಳತನ ಪ್ರಕರಣಕ್ಕೆ AI 80ರ ಟ್ರೆಂಡ್‌ನಿಂದ ಬಿಗ್ ಟ್ವಿಸ್ಟ್!

UPI ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

UPI  ಬಳಕೆ ದಾರರಿಗೆ ಕೇಂದ್ರ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ವಂದೇ ಮಾತರಂ’ ಚರಣ ಕಡಿತ: ರಾಜ್ಯ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ PIL

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

ಸೆಪ್ಟೆಂಬರ್ 11ರ ಚಿನ್ನದ ದರ: 10 ಗ್ರಾಂ ಚಿನ್ನದ ಬೆಲೆಯಲ್ಲಿ 2,400 ರೂ ಇಳಿಕೆ

lja5nqb73ba7bxod16

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು