ಯಶಸ್ವಿ ನಿರೂಪಕಿಯಾಗಿ 3 ದಶಕಗಳ ವರೆಗೆ ಕನ್ನಡ ಸೇವೆ ಸಲ್ಲಿಸಿದ ಅಪರ್ಣಾ, 2014 ರಲ್ಲಿ ಬೆಂಗಳೂರಿನ ʻನಮ್ಮ ಮೆಟ್ರೋʼದಲ್ಲಿ ಘೋಷಣೆಯಾಗುವ `ಪ್ರಯಾಣಿಕರು ಹತ್ತುವ, ಮತ್ತು ಇಳಿಯುವ ಸೂಚನೆʼಗೆ ಧ್ವನಿ ಗೂಡಿಸಿದ್ದರು.

ಆಂಗ್ಲ ಭಾಷೆ ಬಳಸದೇ ಅಚ್ಚ ಕನ್ನಡದಲ್ಲಿ ನಿರೂಪಣೆ ಮಾಡ್ತಾ.. ಅಚ್ಚ ಕನ್ನಡದಲ್ಲೇ ಮಾತನಾಡುತ್ತಾ ಭಾಷಾಭಿಮಾನ ಮೆರೆಯುತ್ತಾ.. ಮಜಾ ಟಾಕೀಸ್ನಲ್ಲಿ ನಕ್ಕು ನಗಿಸಿ.. ಬಿಗ್ ಬಾಸ್ನಲ್ಲಿ ಭಾಗಿಯಾಗಿ ಜನರನ್ನ ಮನರಂಜಿಸಿ.. ಚಂದನವನದ ಚಂದದ ಮಾತುಗಾರ್ತಿ.. ಕನ್ನಡ ದೂರದರ್ಶನದಲ್ಲಿ ಮಿಂಚಿ.. ರೇಡಿಯೋ ಜಾಕಿಯಾಗಿಯೂ ಕೆಲಸ ಮಾಡಿದ್ದ ಕನ್ನಡನಾಡು ಕಂಡ ಅಪರೂಪದ ನಿರೂಪಕಿ, ನಟಿ ಅಪರ್ಣಾ ವಿಧಿವಶರಾಗಿದ್ದಾರೆ.





