ಕಳೆದ ವರ್ಷ ಜುಲೈನಲ್ಲಿ ನಿಧನ ಹೊಂದಿದ್ದ ನಿರೂಪಕಿ ಅಪರ್ಣಾ ಅನಾರೋಗ್ಯ ದಿಂದ ಬಳಲುತ್ತಿದ್ದರು . ಕ್ಯಾನ್ಸರ್ ಮಧ್ಯೆಯೂ ಅಪರ್ಣಾ ತಮ್ಮ ಧ್ವನಿ ನೀಡಿ ಕರ್ತವ್ಯ ಮೆರೆದಿದ್ದಾರೆ.
ಹಳದಿ ಬಣ್ಣದ ಮಾರ್ಗ ಭಾನುವಾರ (ಆಗಸ್ಟ್ 10) ಉದ್ಘಾಟನೆಗೊಂಡಿತು. ಪ್ರಧಾನಿ ನರೇಂದ್ರ ಮೋದಿ ಅವರು ಇದನ್ನು ಲೋಕಾರ್ಪಣೆ ಮಾಡಿದರು. ಆರ್ವಿ ರಸ್ತೆಯಿಂದ ಬೊಮ್ಮಸಂದ್ರದವರೆಗೆ ಈ ರೈಲು ಸಂಪರ್ಕ ಕಲ್ಪಿಸುತ್ತದೆ. ಒಟ್ಟೂ 16 ನಿಲ್ದಾಣಗಳನ್ನು ಈ ಮೆಟ್ರೋ ರೈಲು ಹಾದು ಹೋಗುತ್ತದೆ. ಈ ಮಾರ್ಗದಲ್ಲಿ ಅಪರ್ಣಾ ಧ್ವನಿ ಪ್ರತಿಧ್ವನಿಸಲಿದೆ.
ಅಪರ್ಣಾ ಧ್ವನಿ ತುಂಬಾನೇ ಸುಮಧುರವಾಗಿತ್ತು. ಅವರು ಆ್ಯಂಕರಿಂಗ್ಗೆ ನಿಂತರೆ ಬಾಯಿಯಿಂದ ಮುತ್ತುಗಳು ಉದುರುತ್ತಿವೆ ಎಂದನಿಸುತ್ತಿತ್ತು. ಹಸಿರು ಹಾಗೂ ಪರ್ಪಲ್ ಲೈನ್ ಮೆಟ್ರೋಗೆ ಅಪರ್ಣಾ ಅವರೇ ಧ್ವನಿ ನೀಡಿದ್ದರು. ಇದು ಮೆಟ್ರೋದ ಹೈಲೈಟ್ ಕೂಡ ಆಗಿತ್ತು. ಹಳದಿ ಬಣ್ಣದ ಮೆಟ್ರೋಗೂ ಅವರದ್ದೇ ಧ್ವನಿ ಇರಬೇಕು ಎಂಬುದು ಕನ್ನಡಿಗರ ಆಸೆ ಆಗಿತ್ತು. ‘ಹಳೆಯ ಮಾರ್ಗದಲ್ಲಿ ಅಪರ್ಣಾ ಧ್ವನಿ ಮುಂದುವರಿಸುತ್ತೇವೆ. ಹಳದಿ ಬಣ್ಣಕ್ಕೆ ಕಷ್ಟ’ ಎಂದು ಮೆಟ್ರೋ ಅಧಿಕಾರಿಗಳು ಈ ಮೊದಲು ಹೇಳಿದ್ದರು. ಆದರೆ , ಇದೀಗ ಹಳದಿ ಲೈನ್ ಮೆಟ್ರೋಗೂ ಅಪರ್ಣಾ ಅವರ ಧ್ವನಿ ಮುಂದುವರೆದಿರುವುದು ಕನ್ನಡಿಗರಲ್ಲಿ ಸಂತಸ ತಂದಿದೆ .

ಸದ್ಯ ಹಸಿರು ಬಣ್ಣದ ಲೈನ್ ನಾಗಸಂದ್ರದಿಂದ ಸಿಲ್ಕ್ ಇನ್ಸ್ಟಿಟ್ಯೂಟ್ವರೆಗೆ ಕಾರ್ಯ ನಿರ್ವಹಿಸುತ್ತಿದ್ದು, 32 ಮೆಟ್ರೋ ಸ್ಟೇಷನ್ಗಳು ಇವೆ. ಪರ್ಪಲ್ ಲೈನ್ ವೈಟ್ ಫೀಲ್ಡ್ನಿಂದ ಚೆಲ್ಲಘಟ್ಟದವರೆಗೆ ಕಾರ್ಯ ನಿರ್ವಹಿಸುತ್ತಿದ್ದು 37 ಮೆಟ್ರೋ ಸ್ಟೇಷನ್ಗಳು ಇವೆ. ಈಗ ಹಳದಿ ಮೆಟ್ರೋ ಸೇರಿದರೆ 85 ಸ್ಟೇಷನ್ಗಳಿದ್ದು , ಎಲ್ಲಾ ಸ್ಟೇಷನ್ ಗಳಲ್ಲೂ ಅಪರ್ಣಾ ಅವರದ್ದೇ ಧ್ವನಿ ಇರಲಿದೆ.





