ಕೇರಳದಲ್ಲಿ ಆಟ್ಟುಕಲ್ ಪೊಂಗಾಲ ಉತ್ಸವ – ಲಕ್ಷಾಂತರ ಮಹಿಳೆಯರು ಭಾಗಿ

ತಿರುವನಂತಪುರಂ: ಕೇರಳದ ಸ್ತ್ರೀಯರ ಶಬರಿಮಲೆ ಖ್ಯಾತಿಯ 2026ರ ಆಟ್ಟುಕಲ್ ಪೊಂಗಾಲ (Attukal Pongala) ಉತ್ಸವದಲ್ಲಿ ಲಕ್ಷಾಂತರ ಮಹಿಳೆಯರು ಭಾಗಿಯಾಗಿ ಪೊಂಗಲ್ ತಯಾರಿಸಿದರು.

`ಆಟ್ಟುಕಲ್ ಪೊಂಗಾಲ’ ಕೇರಳದ ತಿರುವನಂತಪುರಂದ ಆಟ್ಟುಕಲ್ ಭಗವತಿ ದೇವಸ್ಥಾನದಲ್ಲಿ ಫೆಬ್ರವರಿ-ಮಾರ್ಚ್ನ ಆಚರಿಸಲಾಗುವ 10 ದಿನಗಳ ಉತ್ಸವವಾಗಿದ್ದು, ಒಂಬತ್ತನೇ ದಿನ ಮಹಿಳಾ ಭಕ್ತರು ಬೃಹತ್ ಸಂಖ್ಯೆಯಲ್ಲಿ ಆಗಮಿಸಿ, ದೇವಸ್ಥಾನದಲ್ಲಿ ಅಕ್ಕಿ, ಬೆಲ್ಲ ಮತ್ತು ಬಾಳೆಹಣ್ಣಿನಿಂದ ಮಣ್ಣಿನ ಮಡಕೆಗಳಲ್ಲಿ ಪೊಂಗಲ್ ತಯಾರಿಸಿ, ಆಟ್ಟುಕಲ್ ಭಗವತಿಗೆ ಅರ್ಪಿಸುತ್ತಾರೆ.

ಈ ಆಟ್ಟುಕಲ್ ಭಗವತಿ ದೇವಸ್ಥಾನವು `ಸ್ತೀಯರ ಶಬರಿಮಲೆ’ ಎಂದು ಖ್ಯಾತಿ ಹೊಂದಿದ್ದು, ಪೊಂಗಲ್ ಹಬ್ಬಕ್ಕೆ ಹೆಸರುವಾಸಿಯಾಗಿದೆ. ಪೊಂಗಲ್ ಹಬ್ಬದ ಸಮಯದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಆಗಮಿಸುತ್ತಾರೆ. ಈ ವರ್ಷ ಪೊಂಗಲ್ ಆಚರಣೆಯಲ್ಲಿ 40 ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎನ್ನಲಾಗಿದೆ.

2009ರಲ್ಲಿ 2.5 ಮಿಲಿಯನ್ ಮಹಿಳಾ ಭಕ್ತರು ಭಾಗವಹಿಸಿ ಗಿನ್ನೀಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ನಲ್ಲಿ ಈ ಉತ್ಸವ ಸ್ಥಾನ ಪಡೆದುಕೊಂಡಿದೆ.

ಈ ಕುರಿತು ತಿರುವನಂತಪುರಂ ಮೇಯರ್ ವಿ.ವಿ ರಾಜೇಶ್ ಮಾತನಾಡಿ, ಹಬ್ಬದ ಸಮಯದಲ್ಲಿ ಲಕ್ಷಾಂತರ ಭಕ್ತರು ಸೇರುವುದರಿಂದ ಉತ್ಸವವನ್ನು ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ ವ್ಯವಸ್ಥೆಗಳನ್ನು ಮಾಡಲಾಗಿದೆ. ಅಗತ್ಯ ಸೌಲಭ್ಯಗಳ ಕುರಿತು ಯಾವುದೇ ಸಮಸ್ಯೆಗಳಿಲ್ಲ ಮತ್ತು ಯಾವುದೇ ಹೆಚ್ಚುವರಿ ಅವಶ್ಯಕತೆಗಳನ್ನು ಪೂರೈಸಲು ಅಧಿಕಾರಿಗಳು ಸಂಪೂರ್ಣವಾಗಿ ಸಿದ್ಧರಾಗಿದ್ದಾರೆ ಎಂದು ಹೇಳಿದರು.

ಎಲ್ಲಾ ವಾರ್ಡ್‌ಗಳಲ್ಲಿ 52 ಟ್ಯಾಂಕರ್‌ಗಳನ್ನು ಇರಿಸಿದ್ದೇವೆ, ಪ್ರತಿ ವಾರ್ಡ್‌ಗೆ ಒಂದು ಟ್ಯಾಂಕರ್, ಮತ್ತು ಆಟ್ಟುಕಲ್ ದೇವಾಲಯದ ಸುತ್ತಲೂ 8 ಟ್ಯಾಂಕರ್‌ಗಳಲ್ಲಿ ನೀರು ತುಂಬಿಸಲಾಗಿದೆ. ಯಾವುದೇ ಹೆಚ್ಚಿನ ಬೇಡಿಕೆಗಳನ್ನು ಅಗತ್ಯವಿರುವಂತೆ ಪರಿಹರಿಸಲಾಗುವುದು. ಸಾರಿಗೆ ವಿಷಯದಲ್ಲಿ, ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಭಕ್ತರ ಸಂಚಾರಕ್ಕೆ ಅನುಕೂಲವಾಗುವಂತೆ ಸಾಕಷ್ಟು ಬಸ್‌ಗಳ ವ್ಯವಸ್ಥೆ ಮಾಡಿದೆ. ಯಾವುದೇ ಸಮಸ್ಯೆ ಇಲ್ಲ ಎಂದರು.

 

 

 

Related Posts

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ನವದೆಹಲಿ: ಕೇಂದ್ರ ಲೋಕ ಸೇವಾ ಆಯೋಗ (UPSC) 2025ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶವನ್ನು ಪ್ರಕಟ ಪ್ರಕಟಿಸಿದೆ. ಈ ಮೂಲಕ ಅನುಜ್‌ ಅಗ್ನಿಹೋತ್ರಿಗೆ ದೇಶಕ್ಕೆ ಫಸ್ಟ್ ರ‍್ಯಾಂಕ್ ಪಡೆದುಕೊಂಡಿದ್ದಾರೆ. 2025ರ ಆಗಸ್ಟ್ ತಿಂಗಳಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗಳು ನಡೆದಿದ್ದವು. ಇದೀಗ…

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ, ರಾಜ್ಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 7 ಸಾವಿರ ಕೋಟಿ ಸರ್ಕಾರದ ಅನುದಾನವನ್ನು ಜಿಬಿಎ ಮೂಲಕ ಹಂಚಿಕೆ ಮಾಡಲು ಸೂಚನೆ, ಒಟ್ಟು 8 ಸಾವಿರ ಕೋಟಿ ಆಯವ್ಯಯಕ್ಕೆ ಜಿಬಿಎ ಅನುಮೋದನೆ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!