ಸರಗೂರು ತಾಲೂಕಿನಲ್ಲಿ ಇಂದು ನಡೆದಿರುವ ಹುಲಿಯ ದಾಳಿಯಿಂದ ಜನರು ರೊಚ್ಚಿಗೆದ್ದಿದ್ದಾರೆ. ಬಂಡಿಪುರ ರಾಷ್ಟ್ರೀಯ ಉದ್ಯಾನವನದ ಸಿಎಫ್ ಪ್ರಭಾಕರ್ ಎಂಬುವರನ್ನ ವರ್ಗಾವಣೆಗೊಳಿಸಿ ನೂತನ ಸಿಎಫ್ ಸಂಪತ್ ಕುಮಾರ್ ಎಂಬುವರನ್ನು ನಿಯೋಜನೆ ಮಾಡಿದ್ದಾರೆ.

ಹಳೆ ಹೆಗ್ಗುಡಿಲು ಗ್ರಾಮದ ದಂಡನಾಯಕ ಎಂಬ ರೈತನನ್ನು ಬಲಿ ಪಡೆದ ನರಭಕ್ಷಕ ವ್ಯಾಘ್ರವನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಅಗ್ರಹಿಸಿ ಸಾಕಷ್ಟು ಜನರ ತಂಡ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಮುಗಿಬಿದ್ದಿದ್ದಾರೆ ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ. ಮೊಳೆಯೂರು ಮತ್ತು ಸರಗೂರು ಭಾಗದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಮೃತ ಎಂಬ ಮಹಿಳಾ ಆರ್ ಎಫ್ ಓ ಗೆ ಛೀಮಾರಿ ಹಾಕಿ ವಾಗ್ದಾಳಿ ನಡೆಸಿ ತಳ್ಳಾಟ ನೂಕಾಟ ನಡೆಸಲಾಗಿದೆ. ಹುಲಿಯ ದಾಳಿಯಿಂದ ಮೃತಪಟ್ಟಿರುವ ರೈತ ದಂಡ ನಾಯಕ ಮತ್ತು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ದಂಡನಾಯಕನ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲು ಗ್ರಾಮಸ್ಥರು ಮತ್ತು ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ಬಂಡೀಪುರ ರಾಷ್ಟ್ರೀಯ ಉದ್ಯಾನವನದ ಗಡಿಭಾಗದ ತಾಲೂಕಾಗಿರುವ ನಂಜನಗೂಡು ಮತ್ತು ಸರಗೂರು ಭಾಗದ ರೈತರು ಆತಂಕದಲ್ಲೇ ದಿನದೊಡುತ್ತಿದ್ದಾರೆ.

ಹುಲಿಗಳ ಸಂತತಿ ಹೆಚ್ಚಾಗಿರುವ ಹಿನ್ನೆಲೆ ಯಾವ ವೇಳೆಯಲ್ಲಿ ಯಾರ ಮೇಲೆ ದಾಳಿ ಮಾಡುತ್ತದೆ? ಯಾರ ಜೀವ ಬಲಿ ತೆಗೆದುಕೊಳ್ಳುತ್ತದೆ ಎಂದು ರೈತರಲ್ಲಿ ಜೀವ ಭಯ ಎದುರಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಎಂದು ಹಳೆ ಹೆಗ್ಗುಡಿಲು ಗ್ರಾಮದಲ್ಲಿ ಸಾರ್ವಜನಿಕರು ಮತ್ತು ರೈತರು ಆಕ್ರೋಶ ವ್ಯಕ್ತಪಡಿಸಲು ಮುಂದಾಗಿದ್ದಾರೆ




