ಬೆಂಗಳೂರು ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಉಗ್ರ ನಾಸೀರ್ ಮೂವರು ಶಂಕಿತ ಉಗ್ರರ ಬಂಧನ.

ಬೆಂಗಳೂರು: ಜೈಲಿನಿಂದಲೇ ಕರ್ನಾಟಕ ಸೇರಿ ದೇಶದ ವಿವಿಧೆಡೆ ಉಗ್ರ ಕೃತ್ಯಕ್ಕೆ ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ಮತ್ತು ಕೋಲಾರದ 5 ಕಡೆ ದಾಳಿ ನಡೆಸಿದ್ದ ರಾಷ್ಟ್ರೀಯ ತನಿಖಾ ದಳ ಪರಪ್ಪನ ಅಗ್ರಹಾರ ಜೈಲಿನ ಮನೋವೈದ್ಯ, ಸಿಎಆರ್ ಪೊಲೀಸ್ ಅಧಿಕಾರಿ ಸೇರಿ ಮೂವರು ಶಂಕಿತ ಉಗ್ರರರನ್ನ ಬಂಧಿಸಿದೆ.

ಶಂಕಿತ ಉಗ್ರರನ್ನು ಇಂದು ಕೋರ್ಟ್ಗೆ ಹಾಜರುಪಡಿಸಿರುವ ಎನ್ಐಎ ಅಧಿಕಾರಿಗಳ ತಂಡ, 14 ದಿನಗಳ ಕಾಲ ಕಸ್ಟಡಿಗೆ ಪಡೆಯಲು ಮುಂದಾಗಿದೆ. ಈ ಮಧ್ಯೆ ಉಗ್ರ ಟಿ.ನಾಸೀರ್ ಕುರಿತು ಹಲವು ಸ್ಫೋಟಕ ವಿಚಾರಗಳನ್ನು ಬಯಲಿಗೆಳೆದಿದೆ.

ಜೈಲಿನಲ್ಲಿದ್ದುಕೊಂಡೇ ಉಗ್ರ ಕೃತ್ಯಕ್ಕೆ ಸಂಚು

2023ರಲ್ಲಿ ಹೆಬ್ಬಾಳದ ಮನೆಯಲ್ಲಿ ಜೀವಂತ ಗ್ರೆನೇಡ್ಗಳು ಪತ್ತೆಯಾಗಿದ್ದವು. ಜೀವಂತ ಗ್ರೆನೇಡನ್ನು ತರಲು ಟಿ.ನಾಸೀರ್ ಸೂಚಿಸಿದ್ದ. ಜುನೈದ್ ಮೂಲಕ ಇದನ್ನು ತರಿಸಿದ್ದ. ಬಳಿಕ ನಾಸೀರ್ನನ್ನು ವಶಕ್ಕೆ ಪಡೆದು ಎನ್ಐಎ ವಿಚಾರಣೆ ನಡೆಸಿತ್ತು. ಈಗಾಗಲೇ ಬೆಂಗಳೂರು ಸ್ಫೋಟ ಪ್ರಕರಣದಲ್ಲಿ ನಾಸೀರ್ ಜೈಲಿನಲ್ಲಿದ್ದಾನೆ. ಭಯೋತ್ಪಾದನೆ ಬಗ್ಗೆ ಯುವಜನರ ಮೈಂಡ್ ವಾಶ್ ಮಾಡೋದ್ರಲ್ಲಿ ನಿಸ್ಸೀಮನಾಗಿದ್ದ ನಾಸೀರ್, ಹಲವು ಯುವಜನರನ್ನ ಉಗ್ರ ಚಟುವಟಿಕೆಗಳಿಗೆ ಬಳಸಿಕೊಂಡಿದ್ದಾನೆ ಎಂದೂ ಸಹ ಎನ್ಐಎ ತನಿಖೆ ವೇಳೆ ತಿಳಿದುಬಂದಿದೆ. ಇದನ್ನೂ ಓದಿ: ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿಗೆ ಆ್ಯಸಿಡ್ ಎರಚಿ ತಾನೂ ಬೆಂಕಿ ಹಚ್ಚಿಕೊಂಡ ಸೋದರ ಮಾವ ಅಲ್ಲದೇ ಜೈಲಿನಲ್ಲಿದ್ದುಕೊಂಡೇ ಉಗ್ರ ಚಟುವಟಿಕೆಗಳ ಬಗ್ಗೆ ಪ್ಲ್ಯಾನ್ ಮಾಡಿದ್ದ. 2008ರ ಸರಣಿ ಬಾಂಬ್ ಸ್ಫೋಟ, ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ, ಶಿವಮೊಗ್ಗದಲ್ಲಿ ಉಗ್ರ ಚಟುವಟಿಕೆ, ರಾಮೇಶ್ವರಂ ಕೆಫೆ ಬ್ಲಾಸ್ಟ್ ಸೇರಿ ಹಲವು ಪ್ರಕರಣಗಳಲ್ಲಿ ನಾಸೀರ್ ಕೈವಾಡ ಇದೆ. ಅಷ್ಟೇ ಅಲ್ಲ ಬೆಂಗಳೂರಿನಲ್ಲಿ ದೊಡ್ಡಮಟ್ಟದ ವಿಧ್ವಂಸಕ ಕೃತ್ಯಕ್ಕೆ ಪ್ಲ್ಯಾನ್ ಮಾಡಿದ್ದ ಅನ್ನೋದು ಎನ್ಐಎ ತನಿಖೆಯಲ್ಲಿ ಬಯಲಾಗಿದೆ.

ಇನ್ನೂ ಉಗ್ರ ಕೃತ್ಯಕ್ಕೆ ನಾಸೀರ್ ಜುನೈದ್, ಮೊಹಮ್ಮದ್ ಹರ್ಷದ್ ಖಾನ್, ಸುಹೈಲ್, ಫೈಜಲ್, ಜಾಹಿದ್ ತಬ್ರೇಜ್, ಮುದಾಸಿರ್ ಎಂಬ ಯುವಕರ ತಂಡವನ್ನೂ ರೆಡಿ ಮಾಡಿದ್ದ. ಆದ್ರೆ ಜೀವಂತ ಗ್ರೆನೇಡ್ಗಳು, ಪಿಸ್ತೂಲ್ಗಳು, ಸ್ಫೋಟಕ ವಸ್ತುಗಳ ಸಮೇತ ತಂಡ ಸಿಕ್ಕಿಬಿದ್ದಿತ್ತು. ಈ ಐವರನ್ನ ಸಿಸಿಬಿ ಪೊಲೀಸರು ಬಂಧಿಸಿದ್ದರು. ಬಳಿಕ ಎನ್ಐಎ ಈ ಪ್ರಕರಣದ ಹೊಣೆ ವಹಿಸಿಕೊಂಡಿತು. ಸದ್ಯ ಮೂವರನ್ನು ಬಂಧಿಸಿರುವ ಎನ್ಐಎ, ಬಂಧಿತರಿಂದ ಒಂದಷ್ಟು ಹಣ, ಸಂವಹನಕ್ಕೆ ಬಳಸುತ್ತಿದ್ದ ವಾಕಿಟಾಕಿ ಸೇರಿ ಹಲವು ವಸ್ತುಗಳು ವಶಕ್ಕೆ ಪಡೆದುಕೊಂಡಿದೆ. ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

ಏರ್ಟೆಲ್ ಮಾಜಿ ಉದ್ಯೋಗಿಗೆ ನೋಟಿಸ್
ಇನ್ನೂ ಮೂವರು ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ತಾಲ್ಲೂಕು ಭಟ್ರಹಳ್ಳಿ ಗ್ರಾಮದ ಸತೀಶ್ ಗೌಡ ಎಂಬಾತನಿಗೆ ಎನ್ಐಎ ನೋಟಿಸ್ ನೀಡಿದೆ. ಶಂಕಿತರಿಗೆ ಸಿಮ್ ಕಾರ್ಡ್ ನೀಡಿದ ಆರೋಪದ ಮೇಲೆ ಸತೀಶ್ ಗೌಡಗೆ ನೋಟಿಸ್ ನೀಡಲಾಗಿದೆ. ಸತೀಶ್ ಮನೆಯಲ್ಲಿ ಇಲ್ಲದ ಕಾರಣ ಕಾರಣ ಕುಟುಂಬಸ್ಥರಿಗೆ ನೋಟೀಸ್ ನೀಡಿದ್ದು, ಇಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದ್ದಾರೆ ಅಧಿಕಾರಿಗಳು. ಮೂರು ವರ್ಷಗಳ ಹಿಂದೆ ಸತೀಶ್ಗೌಡ ಏರ್ಟೆಲ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಈ ಕೆಲಸ ಮಾಡಿರುವುದಾಗಿ ಸಂಶಯ ವ್ಯಕ್ತವಾಗಿದೆ.

 

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!