ಎಚ್ಚರ ಗ್ರಾಹಕರೇ eSIM ಹಗರಣ ಇದೀಗ ಜೋರು ..!

ಮೊಬೈಲ್ ಬಳಕೆದಾರರಿಗೆ eSIM ಹಗರದ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಭಾರತ ಸರ್ಕಾರ ಸೂಚಿಸಿದೆ. ಸೈಬರ್ ವಂಚನೆ ಎಷ್ಟು ಅಪಾಯಕಾರಿ ಎಂದರೆ ವಂಚಕರು OTP ಅಥವಾ ATM ವಿವರಗಳನ್ನು ನಮೂದಿಸದೆ ನಿಮ್ಮ ಬ್ಯಾಂಕ್ ಖಾತೆಯಿಂದ ಹಣ ಕದಿಯಬಹುದು ಎಂದು ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ಎಚ್ಚರಿಸಿದೆ.

I4C ಪ್ರಕಾರ.. ವಂಚಕರು ಮೊದಲು ಬಳಕೆದಾರರಿಗೆ ಕರೆ ಮಾಡ್ತಾರೆ. ನಂತರ ನಕಲಿ eSIM ಸಕ್ರಿಯಗೊಳಿಸುವ ಲಿಂಕ್ ಕಳುಹಿಸುತ್ತಾರೆ. ಆ ಲಿಂಕ್ ಕ್ಲಿಕ್ ಮಾಡಿದ ತಕ್ಷಣ, ಆ ಸಿಮ್ ಸ್ವಯಂಚಾಲಿತವಾಗಿ eSIM ಆಗಿ ಪರಿವರ್ತನೆಗೊಳ್ಳುತ್ತದೆ. ನಂತರ ಫೋನ್​ನಲ್ಲಿರುವ ಅಸಲಿ ಸಿಮ್ ಕಾರ್ಯ ನಿರ್ವಹಿಸೋದನ್ನು ನಿಲ್ಲಿಸುತ್ತದೆ. ನೆಟ್‌ವರ್ಕ್ ಸಿಗ್ನಲ್‌ಗಳು ಕೂಡ ಕಣ್ಮರೆಯಾಗುತ್ತವೆ.

ಬಳಿಕ ಆ ನಂಬರ್​​ಗೆ ಕರೆಗಳು ಮತ್ತು SMS ಬರೋದು ಸ್ಥಗಿತಗೊಳ್ಳುತ್ತದೆ. ಎಲ್ಲಾ ಸಂದೇಶಗಳು ಮತ್ತು ವಂಚಕರ ಬಳಿಯಿರುವ eSIM ಗೆ ಹೋಗಲು ಪ್ರಾರಂಭಿಸುತ್ತದೆ. ಆ ಮೂಲಕ ಸೈಬರ್ ವಂಚಕರು ನಿಮ್ಮ ಖಾತೆಯಿಂದ ಹಣ ದೋಚುತ್ತಾರೆ.

ಗೃಹ ಸಚಿವಾಲಯದ ಅಡಿಯಲ್ಲಿ ಜನವರಿ 2020 ರಲ್ಲಿ I4C ರಚಿಸಲಾಗಿದೆ. ಇದು ಸೈಬರ್ ಅಪರಾಧಗಳನ್ನು ನಿಗ್ರಹಿಸುವ ಗುರಿ ಹೊಂದಿದೆ. ನಿರಂತರವಾಗಿ ಹೆಚ್ಚುತ್ತಿರುವ ಡಿಜಿಟಲ್ ವಹಿವಾಟುಗಳು ಮತ್ತು ಸ್ಮಾರ್ಟ್‌ಫೋನ್ ಬಳಕೆದಾರರ ಸಂಖ್ಯೆಯೊಂದಿಗೆ ಅಂತಹ ವಂಚನೆಗಳ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಈ ಕಾರಣಕ್ಕಾಗಿ ಸರ್ಕಾರ eSIM ಹಗರಣದ ಬಗ್ಗೆ ಎಚ್ಚರಿಕೆ ನೀಡಿದೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!