2025ರ ಮೈಸೂರು ದಸರಾ 11 ದಿನಗಳ ಕಾಲ ನಡೆಯಲಿದ್ದು, ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ. ಗಜಪಯಣ, ಜಂಬೂ ಸವಾರಿ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ.
ವಿಶ್ವ ವಿಖ್ಯಾತ ನಾಡಹಬ್ಬ ದಸರಾ ಹಿನ್ನಲೆ :
ಆನೆಗಳಿಗೆ ಮೊದಲ ಹಂತದ ಆನೆಗಳ ತೂಕ ಪರೀಕ್ಷೆ:
ನಾಡಹಬ್ಬ ದಸರಾದಲ್ಲಿ ಭಾಗವಹಿಸಲು ಆಗಮಿಸಿರುವ ಅಭಿಮನ್ಯು ನೇತೃತ್ವದ ಗಜಪಡೆಗೆ ಇಂದು ನಗರದ ಧನ್ವಂತರಿ ರಸ್ತೆಯಲ್ಲಿರುವ ತೂಕ ಕೇಂದ್ರದಲ್ಲಿ ತೂಕ ಪರೀಕ್ಷೆ ಮಾಡಲಾಯಿತು. ಅದರಲ್ಲಿ 25 ವರ್ಷದ ಭೀಮ ಅತೀ ಹೆಚ್ಚು ತೂಕ ಇರುವ ಆನೆಯಾಗಿದೆ. ಆನಂತರ ಜಂಬೂ ಸವಾರಿ ಕ್ಯಾಪ್ಟನ್ ಅಭಿಮನ್ಯು 2ನೇ ಸ್ಥಾನದಲ್ಲಿದೆ.ಇದು ಕಾಡಿನಿಂದ ನಾಡಿಗೆ ಬಂದ ನಂತರ ನಡೆದ ಮೊದಲ ತೂಕ ಪರೀಕ್ಷೆಯಾಗಿದೆ.

ದಸರಾ ಆನೆಗಳ ತೂಕದ ವಿವರ :
- ಅಭಿಮನ್ಯು – 5,360 kg
- ಭೀಮ – 5,460 kg
- ಪ್ರಶಾಂತ – 5,110 kg
- ಧನಂಜಯ್ – 5,310 kg
- ಮಹೇಂದ್ರ – 5,120 kg
- ಏಕಲವ್ಯ – 5,305 kg
- ಕಂಜನ್ – 4,880 kg
- ಲಕ್ಷಿ – 3,735 kg
- ಕಾವೇರಿ -3,010 kg





