ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟನ ಮೇಲೆ ಆರೋಪಗಳ ಸುರಿಮಳೆ!

ಬಿಗ್ ಬಾಸ್ ಮನೆಯಲ್ಲಿ ತಮ್ಮ ಹಾಸ್ಯದಿಂದ ಹವಾ ಸೃಷ್ಟಿಸಿದ್ದ ಗಿಲ್ಲಿ ನಟ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸ್ಪಂದನಾ, ಅಶ್ವಿನಿ, ಹಾಗೂ ಜೋಡಿ ಕಾವ್ಯಾ ಶೈವ ಸೇರಿದಂತೆ ಹಲವು ಸ್ಪರ್ಧಿಗಳು ಅವರ ವಿರುದ್ಧ ನಂಬಿಕೆ ದ್ರೋಹ ಮತ್ತು ಸ್ವಾರ್ಥದಂತಹ ಗಂಭೀರ ಆರೋಪಗಳನ್ನು ಮಾಡಿದ್ದಾರೆ.

 

ಗಿಲ್ಲಿ ಹವಾ
ಬಿಗ್​ಬಾಸ್​ (Bigg Boss)ನಲ್ಲಿ ಸದ್ಯ ಗಿಲ್ಲಿ ನಟನ ಹವಾ ಜೋರಾಗಿಯೇ ನಡೆಯುತ್ತಿದೆ. ಇವರೇ ಈ ಬಾರಿಯ ವಿನ್ನರ್​ ಎನ್ನುವಷ್ಟರ ಮಟ್ಟಿಗೆ ಇವರು ಹವಾ ಸೃಷ್ಟಿಸಿಕೊಂಡಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿಯೂ ಗಿಲ್ಲಿ ನಟನ ಬಗ್ಗೆ ದನಿ ಜೋರಾಗಿಯೇ ನಡೆಯುತ್ತಿದೆ.

ಹಾಸ್ಯದಿಂದ ತಿರುಗೇಟು
ತಮ್ಮ ಹಾಸ್ಯದಿಂದಲೇ ಎಲ್ಲರ ಮನಸ್ಸನ್ನು ಗೆದ್ದವರು ಗಿಲ್ಲಿ ನಟ. ಕಾವ್ಯಾ ಜೊತೆ ರೊಮಾನ್ಸ್, ತಮ್ಮನ್ನು ಟೀಕಿಸಲು ಬರುವ ಅಶ್ವಿನಿ ಗೌಡ ಅವರಿಗೂ ಹಾಸ್ಯದಿಂದಲೇ ತಿರುಗೇಟು ನೀಡುವಲ್ಲಿ ಗಿಲ್ಲಿ ನಿಸ್ಸೀಮರು.

ಟಾರ್ಗೆಟ್​ ಆದ ಗಿಲ್ಲಿ
ಇಂತಿಪ್ಪ ಗಿಲ್ಲಿಯನ್ನು ಈಗ ಎಲ್ಲರೂ ಟಾರ್ಗೆಟ್​ ಮಾಡಿದ್ದಾರೆ. ಇವರ ವಿರುದ್ಧ ಆರೋಪಗಳ ಸುರಿಮಳೆಯೇ ಆಗುತ್ತಿದೆ. ಇವರು ನನ್ನ ಟಾರ್ಗೆಟ್​ ಎಂದು ಯಾರು ಹೇಳುತ್ತೀರಿ ಎನ್ನುವ ಪ್ರಶ್ನೆಯನ್ನು ಸುದೀಪ್​ ಎದುರಿಗಿಟ್ಟಿದ್ದಾರೆ.

ನಂಬಿಕೆ ಇಟ್ಟು ಮೋಸ
ಆಗ ಗಿಲ್ಲಿ ವಿರುದ್ಧ ಕೆಲವರು ಆರೋಪ ಮಾಡಿದ್ದಾರೆ. ಗಿಲ್ಲಿ ನಂಬಿಕೆ ಇಟ್ಟು ಮೋಸ ಮಾಡ್ತಾರೆ. ಇದರಲ್ಲಿ ಅವರದ್ದು ಎತ್ತಿದ ಕೈ ಎಂದು ಎಂದು ಸ್ಪಂದನಾ ಸೋಮಣ್ಣ ಹೇಳಿದರು.

ಧನುಷ್​ ಏನಂದ್ರು?
ಅವನು ಕಾಮಿಡಿ ಮಾಡ್ತಾನೆ. ವಾಪಸ್​ ನಾವು ಮಾಡಿದ್ರೆ ಸೀರಿಯಸ್​ ಆಗಿ ತೆಗೆದುಕೊಳ್ತಾನೆ ಎಂದು ಧನುಷ್​ ಅಭಿಪ್ರಾಯ ಪಟ್ಟರು.

ನಾನು ಪರ್ಸನಲ್​ ಆಗಿ ಟಾರ್ಗೆಟ್​
ಈ ಮನೆಗೆ ಕಾಲಿಟ್ಟಾಗಿನಿಂದಲೂ ಗಿಲ್ಲಿ ನನ್ನನ್ನು ಪರ್ಸನಲ್​ ಆಗಿ ಟಾರ್ಗೆಟ್​ ಮಾಡ್ತಾ ಇದ್ದಾರೆ ಎನ್ನಿಸ್ತಿದೆ, ಗೇಮ್​ ಅಂತ ಬಂದಾಗಲು ಕೂಡ ತುಂಬಾ ಸ್ವಾರ್ಥಿ ಎಂದು ಅಶ್ವಿನಿ ಗೌಡ ಕೋಪದಿಂದ ನುಡಿದರು.

ವಿಭಿನ್ನ ಪರ್ಸನ್ಯಾಲಿಟಿ
ಜಂಟಿಯಾಗಿ ಬಂದಾಗ ಎರಡು ವಿಭಿನ್ನ ಪರ್ಸನ್ಯಾಲಿಟಿ. ಅವರು ಸೂಪರ್​ ಆ್ಯಕ್ಟೀವ್​ ಇದ್ದಾರೆ, ಆದರೆ ನನ್ನ ಒಂದು ಸ್ಟ್ಯಾಂಡ್ ಕಾಣಿಸ್ತಾ ಇರಲಿಲ್ಲ, ಹಾಗಾಗಿ ನಾನು ಕೂಡ ಗಿಲ್ಲಿ ವಿರುದ್ಧ ಎಂದಿದ್ದಾರೆ ಕಾವ್ಯಾ ಶೈವ

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!