ಬಿಗ್ ಬಾಸ್ Archives - Good News 24x7 https://www.goodnews24x7.com/category/bigg-boss/ Kannada Wed, 26 Nov 2025 06:36:44 +0000 en-US hourly 1 https://wordpress.org/?v=6.9.4 https://www.goodnews24x7.com/wp-content/uploads/2024/06/cropped-GoodNews24x7_Logo-32x32.jpg ಬಿಗ್ ಬಾಸ್ Archives - Good News 24x7 https://www.goodnews24x7.com/category/bigg-boss/ 32 32 ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು https://www.goodnews24x7.com/bigg-boss-guests-say-ghilli-doesnt-have-10-percent-of-hanumans-game/ Wed, 26 Nov 2025 06:36:44 +0000 https://www.goodnews24x7.com/?p=8265 ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿ ಅತಿಥಿಗಳೊಂದಿಗೆ ಹಾಸ್ಯ ಮಾಡಿದರು,…

The post ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು appeared first on Good News 24x7.

]]>

ಬಿಗ್ ಬಾಸ್ ಮನೆಗೆ ಆಗಮಿಸಿದ ಅತಿಥಿಗಳು ಗಿಲ್ಲಿಯ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹನುಮಂತನ ಶಾಂತ ಸ್ವಭಾವಕ್ಕೆ ಗಿಲ್ಲಿಯನ್ನು ಹೋಲಿಸಿದ ಅತಿಥಿಗಳು, ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಕೂಡ ಇಲ್ಲ ಎಂದು ನೇರವಾಗಿ ಹೇಳಿದ್ದಾರೆ. ಗಿಲ್ಲಿ ಅತಿಥಿಗಳೊಂದಿಗೆ ಹಾಸ್ಯ ಮಾಡಿದರು, ಆದರೆ ಅತಿಥಿಗಳು ಅದನ್ನು ಗಂಭೀರವಾಗಿ ತೆಗೆದುಕೊಂಡರು.

 

ಕಳೆದ ಸೀಸನ್​ನಲ್ಲಿ ಹನುಮಂತ ಅವರು ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಇಡೀ ಶೋ ದಿಕ್ಕನ್ನು ಬದಲಿಸಿದ್ದರು. ಹಲವು ತಿಂಗಳ ಕಾಲ ಅವರು ಭರ್ಜರಿ ಮನರಂಜನೆ ನೀಡಿದ್ದರು. ಯಾರೇ ನಾಮಿನೇಷನ್ ಮಾಡಿದರೂ ಅವರು ಹೆಚ್ಚು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಆ ಬಳಿಕ ಕೋಟಿ ಮತಗಳ ಅಂತರದಲ್ಲಿ ಅವರು ಗೆಲುವು ಕಂಡರು. ಈ ಸೀಸನ್​ ಅಲ್ಲಿ ಗಿಲ್ಲಿ ಕೂಡ ರೇಸ್​ನಲ್ಲಿ ಮುಂದಿದ್ದಾರೆ. ಆದರೆ, ಹನುಮಂತನ 10 ಪರ್ಸೆಂಟ್ ಕೂಡ ಗಿಲ್ಲಿ ಇಲ್ಲ ಎಂದು ಬಿಗ್ ಬಾಸ್ (Bigg Boss)​ ಮನೆಗೆ ಬಂದ ಅತಿಥಿಗಳು ಹೇಳಿಕೆ ನೀಡಿದ್ದಾರೆ. ಬಿಗ್ ಬಾಸ್​ ಈಗ ಬಿಬಿ ಪ್ಯಾಲೇಸ್ ಆಗಿ ಬದಲಾಗಿದೆ. ಉಗ್ರಂ ಮಂಜು ಅವರು ಬ್ಯಾಚುಲರ್ ಪಾರ್ಟಿ ಮಾಡೋದಕ್ಕೆ ಆಗಮಿಸಿದ್ದಾರೆ. ಅವರ ಜೊತೆ ಮೋಕ್ಷಿತಾ ಪೈ, ರಜತ್, ಚೈತ್ರಾ ಕುಂದಾಪುರ, ತ್ರಿವಿಕ್ರಮ್ ಕೂಡ ಜೊತೆಗಿದ್ದಾರೆ. ಅವರು ಸಖತ್ ಮನರಂಜನೆ ನೀಡುತ್ತಿದ್ದಾರೆ. ಈ ವೇಳೆ ಗಿಲ್ಲಿಯನ್ನು ಅವರು ಹನುಮಂತನ ಜೊತೆ ಹೋಲಿಕೆ ಮಾಡಿ ನೋಡಿದ್ದಾರೆ.

ಅತಿಥಿಗಳ ಆತಿಥ್ಯವನ್ನು ಒಳ್ಳೆಯ ರೀತಿಯಲ್ಲಿ ಮಾಡಬೇಕು ಎಂಬುದು ಬಿಗ್ ಬಾಸ್ ಆದೇಶ ಆಗಿತ್ತು. ಆದರೆ, ಇದನ್ನು ಗಿಲ್ಲಿ ಅವರು ಗಂಭೀರವಾಗಿ ಸ್ವೀಕರಿಸಿಲ್ಲ. ಅತಿಥಿಗಳ ಕಾಲೆಳೆಯುವ ಪ್ರಯತ್ನವನ್ನು ಗಿಲ್ಲಿ ಮಾಡಿದ್ದಾರೆ. ಇದು ಅತಿಥಿಗಳ ಕೋಪಕ್ಕೆ ಕಾರಣ ಆಗಿದೆ. ರಜತ್ ಹಾಗೂ ಮಂಜು ಕರೆದು ಅನೇಕ ಬಾರಿ ವಾರ್ನ್ ಮಾಡಿದ್ದಾರೆ. ಆದರೆ, ಈ ವಾರ್ನಿಂಗ್​​ಗೆ ಎಲ್ಲ ಗಿಲ್ಲಿ ಜಗ್ಗುವವರೇ ಅಲ್ಲ. ಅವರು ತಮ್ಮ ಕೀಟಲೆ ಮುಂದುವರಿಸಿದ್ದಾರೆ. ಎಲ್ಲ ಸಂದರ್ಭದಲ್ಲೂ ಹಾಸ್ಯ ಮನಸ್ಥಿತಿಯಲ್ಲೇ ನಡೆದುಕೊಂಡಿದ್ದಾರೆ. ಈ ವಿಚಾರದ ಬಗ್ಗೆ ರಜತ್, ತ್ರಿವಿಕ್ರಂ ಮಂಜು ಮೊದಲಾದವರು ಚರ್ಚೆ ಮಾಡಿದ್ದಾರೆ. ‘ಇವನು ನಮ್ಮವನ (ಹನುಮಂತ) ರೀತಿಯೇ. ನಮ್ಮವನು ಶಾಂತವಾಗಿ ಇರ್ತಿದ್ದ. ಎಲ್ಲಿ ಮಾತನಾಡಬೇಕೋ ಅಲ್ಲಿ ಮಾತ್ರ ಮಾತನಾಡುತ್ತಿದ್ದ. ಇವನು ಬಾಯಿಗೆ ಬಂದಂತೆಲ್ಲ ಮಾತನಾಡುತ್ತಿದ್ದಾನೆ’ ಎಂದು ರಜತ್ ಹೇಳಿದರು. ‘ಅವನ 10 ಪರ್ಸೆಂಟ್ ಕೂಡ ಇವನಿಲ್ಲ ಬಿಡಿ’ ಎಂದು ತ್ರಿವಿಕ್ರಂ ಅವರು ಹೇಳಿದರು.

The post ಗಿಲ್ಲಿ ಆಟ ಹನುಮಂತನ 10 ಪರ್ಸೆಂಟ್ ಇಲ್ಲ ಎಂದ ಬಿಗ್ ಬಾಸ್ ಅತಿಥಿಗಳು appeared first on Good News 24x7.

]]>
ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ https://www.goodnews24x7.com/sudeep-gave-an-example-of-sangeeta-and-drone-to-ashwini-who-lost-the-task/ Sun, 23 Nov 2025 08:16:15 +0000 https://www.goodnews24x7.com/?p=8259 Bigg Boss: 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್…

The post ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ appeared first on Good News 24x7.

]]>

Bigg Boss: 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

ಬಿಗ್ ಬಾಸ್ ಮನೆಯಲ್ಲಿ ಕೆಲವೊಮ್ಮೆ ಟಾಸ್ಕ್​ಗಳು ನಡೆಯುವಾಗ ಅದು ಯಾವ ಹಂತಕ್ಕೆ ಬೇಕಾದರೂ ಹೋಗಬಹುದು. ಆಟವನ್ನು ಗೆಲ್ಲಬೇಕು ಎಂಬ ಭರದಲ್ಲಿ ಸಾಕಷ್ಟು ತಪ್ಪುಗಳು ನಡೆದು ಹೋಗುತ್ತವೆ. ಈ ವಾರವೂ ಕೆಲವು ತಪ್ಪುಗಳು ನಡೆದವು. ಅದನ್ನು ಸುದೀಪ್ ತಿದ್ದಿದ್ದಾರೆ. ಇನ್ನು, ಆಟವನ್ನು ವೈಯಕ್ತಿಕವಾಗಿ ತೆಗೆದುಕೊಂಡ ಅಶ್ವಿನಿ ಗೌಡ ಅವರಿಗೆ ಸುದೀಪ್ ಪಾಠ ಮಾಡಿದರು. 10ನೇ ಸೀಸನ್​ನ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಉದಾಹರಣೆಯನ್ನು ನೀಡಿದರು.

ಬಿಗ್ ಬಾಸ್ ಕನ್ನಡದಲ್ಲಿ ಈ ವಾರ ಒಂದು ಟಾಸ್ಕ್ ನೀಡಲಾಗಿತ್ತು. ಕ್ಯಾಪ್ಟನ್ ರೇಸ್​ ಅಲ್ಲಿ ಕುಳಿತ ಅಶ್ವಿನಿ ಹಾಗೂ ಅಭಿಷೇಕ್ ಅವರನ್ನು ಡಿಸ್ಟ್ರಾಕ್ಟ್ ಮಾಡಬೇಕು. ಗಿಲ್ಲಿ ಅವರು ಅಶ್ವಿನಿ ಅವರ ವೈಯಕ್ತಿಕ ವಿಚಾರ ಇಟ್ಟುಕೊಂಡು ಅವರ ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸಿದರು. ಈ ಪ್ರಯತ್ನ ಯಶಸ್ಸು ಆಗಿದೆ ಎಂದೇ ಹೇಳಿದರೂ ತಪ್ಪಾಗಲಿಕ್ಕಿಲ್ಲ. ಏಕೆಂದರೆ ಗಿಲ್ಲಿ ಮಾತು ಕೇಳುತ್ತಾ ಕೇಳುತ್ತಾ ಅವರು ತಾವು 12 ನಿಮಿಷಕ್ಕೆ ಬೆಲ್ ಹೊಡೆಯಬೇಕು ಎಂಬುದನ್ನು ಮರೆತಿದ್ದರು. ತಮ್ಮ ಕೆಲಸವನ್ನು ಅವರು ಸಮರ್ಥಿಸಿಕೊಳ್ಳಲು ಬಂದರು. ‘ಗಿಲ್ಲಿ ಮನಸ್ಸಲ್ಲಿ ಎಷ್ಟು ಕೆಟ್ಟ ಅಂಶಗಳು ಇವೆ ಎಂಬುದನ್ನು ನೋಡಬೇಕಿತ್ತು’ ಎಂದು ಅಶ್ವಿನಿ ಹೇಳಿದರು. ಇದನ್ನು ಸುದೀಪ್ ಒಪ್ಪಲಿಲ್ಲ. ‘10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಟಾಸ್ಕ್ ಆಡುವಾಗ ಸಾಕಷ್ಟು ತೊಂದರೆ ಅನುಭವಿಸಿದರು. ಅವರು ಆಸ್ಪತ್ರೆಗೆ ಕೂಡ ಹೋಗಬೇಕಾಯಿತು. ಅಲ್ಲಿ ಆಟ ಆಡಿ ಗೆಲ್ಲೋದಷ್ಟೇ ಮುಖ್ಯ. ಹಾಗೆ ನೋಡಿದರೆ ಗಿಲ್ಲಿ-ಕಾವ್ಯಾ ಗೆದ್ದರು’ ಎಂದು ಹೇಳಿದರು.

‘ನೀವು ಟ್ರಿಗರ್ ಆಗದೆ 12 ನಿಮಿಷದ ಲೆಕ್ಕಾಚಾರಕ್ಕೆ ಬೆಲ್ ಹೊಡೆದಿದ್ದರೆ ಮೊದಲ ಮಹಿಳಾ ಕ್ಯಾಪ್ಟನ್ ಆಗುತ್ತಿದ್ದಿರಿ ಅಲ್ಲವೇ’ ಎಂದು ಸುದೀಪ್ ಪ್ರಶ್ನೆ ಮಾಡಿದರು. ಆದರೂ ಅಶ್ವಿನಿ ಅವರು ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳಲು ಬಂದರು. 10ನೇ ಸೀಸನ್​ನಲ್ಲಿ ಸಂಗೀತಾ ಹಾಗೂ ಪ್ರತಾಪ್ ಚೇರ್ ಮೇಲೆ ಕುಳಿತುಕೊಳ್ಳಯವ ಟಾಸ್ಕ್ ಇತ್ತು. ಅವರನ್ನು ಮುಟ್ಟದೆಯೇ ಮೇಲಕ್ಕೆ ಎಬ್ಬಿಸಬೇಕಿತ್ತು. ಈ ವೇಳೆ ಸೋಪಿನ ನೀರು ಎರಚಲಾಗಿತ್ತು ಮತ್ತು ಇದರಿಂದ ಅವರಿನ ಕಣ್ಣಿನ ದೃಷ್ಟಿಗೆ ತೊಂದರೆ ಆಗಿತ್ತು. ಇದನ್ನು ಸುದೀಪ್ ನೆನಪಿಸಿಕೊಂಡರು.

 

The post ಟಾಸ್ಕ್ ಸೋತ ಅಶ್ವಿನಿಗೆ ಸಂಗೀತಾ, ಡ್ರೋನ್ ಉದಾಹರಣೆ ಕೊಟ್ಟ ಸುದೀಪ್ appeared first on Good News 24x7.

]]>
ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ https://www.goodnews24x7.com/sudeep-asks-ashwini-directly-who-are-you-to-protect-her-honor/ Sun, 23 Nov 2025 06:43:44 +0000 https://www.goodnews24x7.com/?p=8250 Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು.…

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>

Bigg Boss Kannada 12: ಬಿಗ್​​ಬಾಸ್ ಮನೆಯಲ್ಲಿರುವ ಅಶ್ವಿನಿ ಅವರು ಹೊರಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಆಗಾಗ್ಗೆ ಮನೆಯಲ್ಲೂ ಹೋರಾಟಗಾರ್ತಿ ಆಗುತ್ತಿರುತ್ತಾರೆ. ಆದರೆ ಕೆಲವೊಮ್ಮೆ ಅವಶ್ಯಕತೆ ಇಲ್ಲದಾಗಲೂ ಹೋರಾಟ ಮಾಡಲು ಮುಂದಾಗುತ್ತಾರೆ. ಅದರಲ್ಲೂ ಹೆಣ್ಣಿಗೆ ಹಾಗೆ ಮಾಡಬೇಡ, ಹಾಗೆ ಅನ್ನಬೇಡ ಎನ್ನುವುದು ಹೆಚ್ಚು. ಇದೇ ವಿಷಯದ ಬಗ್ಗೆ ಸುದೀಪ್, ಅಶ್ವಿನಿ ಅವರಿಗೆ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಬಿಗ್​​ಬಾಸ್ (Bigg Boss) ಸ್ಪರ್ಧಿ ಅಶ್ವಿನಿ ಅವರ ನಟಿ ಆಗಿರುವ ಜೊತೆಗೆ ಕನ್ನಡಪರ ಹೋರಾಟಗಾರ್ತಿಯೂ ಹೌದು. ಸಮಾಜ ಸೇವೆಯಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕನ್ನಡಪರ ಸಂಘಟನೆಗಳ ಸಕ್ರಿಯ ಸದಸ್ಯೆ ಆಗಿರುವ ಅಶ್ವಿನಿ ಅವರು ಸಾಕಷ್ಟು ಹೋರಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಧ್ವನಿ ಇಲ್ಲದವರಿಗೆ ಧ್ವನಿ ಆಗುವ ಕಾರ್ಯವನ್ನು ಮಾಡಿದ್ದಾರಂತೆ. ಬಿಗ್​​ಬಾಸ್ ಮನೆಯಲ್ಲಿಯೂ ಸಹ ತಮ್ಮ ಹೋರಾಟದ ಮುಖವನ್ನು ಆಗಾಗ್ಗೆ ತೋರಿಸುತ್ತಲೇ ಇರುತ್ತಾರೆ. ಅದರಲ್ಲೂ ಕೆಲವೊಮ್ಮೆ ಅವಶ್ಯಕತೆ ಇಲ್ಲದ ಸಂದರ್ಭದಲ್ಲಿಯೂ ಅವರು ಬೇರೆಯವರ ಪರವಾಗಿ ದನಿ ಎತ್ತುವುದುಂಟು. ಆದರೆ ಇದೇ ಅವರಿಗೆ ಮುಳುವಾಗಿದೆ.

ಅಶ್ವಿನಿ ಅವರು ಬಿಗ್​​ಬಾಸ್ ಮನೆಯಲ್ಲಿ ಮಹಿಳೆಯರ ಪರವಾಗಿ ಆಗಾಗ್ಗೆ ಮಾತನಾಡುತ್ತಿರುತ್ತಾರೆ. ಅದರಲ್ಲೂ ಗಿಲ್ಲಿ, ರಘು ಅವರೊಟ್ಟಿಗೆ ಜಗಳವಾದಾಗ ಮಹಿಳೆಗೆ ನೀನು ಹಾಗೆ ಮಾತನಾಡಬೇಡ, ಹೆಣ್ಣುಮಕ್ಕಳಿಗೆ ಎಂದಿಗೂ ಹಾಗೆ ಅನ್ನಬೇಡ, ಅವರ ಗೌರವಕ್ಕೆ ಧಕ್ಕೆ ತರಬೇಡ ಎಂದೆಲ್ಲ ಜಗಳದ ಮಧ್ಯೆ ವಾಕ್ಯಗಳನ್ನು ಬಳಸುತ್ತಿರುತ್ತಾರೆ. ಇಂದು ಸುದೀಪ್ ಅವರು ಈ ಬಗ್ಗೆ ಅಶ್ವಿನಿ ಅವರಿಗೆ ಸ್ಪಷ್ಟವಾಗಿ ಒಂದು ಕ್ಲಾಸ್ ತೆಗೆದುಕೊಂಡರು ಮತ್ತು ಬಿಗ್​​ಬಾಸ್ ಮನೆಯಲ್ಲಿ ಮಹಿಳಾ ಕಾರ್ಡ್ ಬಳಸುವಂತಿಲ್ಲ ಎಂದು ಸ್ಪಷ್ಟವಾಗಿ ಬಿಗ್​​ಬಾಸ್ ಮನೆಯ ಮಹಿಳೆಯರಿಗೆ ಎಚ್ಚರಿಕೆ ನೀಡಿದರು.

‘ಅಶ್ವಿನಿ ಅವರೇ ಬಿಗ್​​ಬಾಸ್ ಮನೆಯ ಮಹಿಳೆಯರ ಮಾನ, ಗೌರವ ಕಾಪಾಡುವ ನೀವು ಗುತ್ತಿಗೆ ನೀವು ಪಡೆದಿದ್ದೀರ? ಏಕೆ ಅವರ ಹಿತವನ್ನು ಅವರು ಕಾಪಾಡಿಕೊಳ್ಳುವಷ್ಟು ಧೈರ್ಯ, ಶಕ್ತಿ ಬಿಗ್​​ಬಾಸ್ ಮನೆಯಲ್ಲಿ ಬೇರೆ ಮಹಿಳೆಯರಿಗೆ ಇಲ್ಲವಾ? ಅಥವಾ ಅವರೇ ಅವರ ಗೌರವ, ಮರ್ಯಾದೆಗಳನ್ನು ಕಾಪಾಡುವಂತೆ ನಿಮ್ಮ ಬಳಿ ಕೇಳಿಕೊಂಡಿದ್ದಾರಾ?’ ಎಂದು ಪ್ರಶ್ನೆ ಮಾಡಿದರು. ಅದೇ ಪ್ರಶ್ನೆಯನ್ನು ಮನೆಯ ಇತರೆ ಮಹಿಳಾ ಸದಸ್ಯರಿಗೂ ಮಾಡಿದ ಸುದೀಪ್, ‘ನಿಮ್ಮ ಮರ್ಯಾದೆಗಳನ್ನು ನೀವುಗಳು ಕಾಪಾಡಿಕೊಳ್ಳದಷ್ಟು ದುರ್ಬಲರಾ ನೀವು? ಎಂದು ಕೇಳಿದರು.

ಮಾತೆತ್ತಿದರೆ ‘ಯಾವ ಹೆಣ್ಣಿಗೂ ಹೀಗೆ ಮಾಡಬೇಡಿ’, ‘ಹೆಣ್ಣಿಗೆ ಗೌರವ ಕೊಡಿ’ ಎನ್ನುತ್ತೀರಿ. ಹೆಣ್ಣಿಗೆ ಈ ಮನೆಯಲ್ಲಿ ಎಂದೂ ಗೌರವ ಕಡಿಮೆ ಆಗಿಲ್ಲ. ಹೆಣ್ಣುಮಕ್ಕಳಿಗೆ ಅವಮಾನ ಆಗದಂತೆ ನಾವು ಕಾವಲು ಕಾಯುತ್ತಿದ್ದೇವೆ. ಎಲ್ಲಿಯಾದರೂ ಸಣ್ಣ ತಪ್ಪು ನಡೆದರೂ ಸಹ ನಾವು ಅದಕ್ಕೆ ಶೀಘ್ರವೇ ಆಕ್ಷನ್ ತೆಗೆದುಕೊಳ್ಳುತ್ತೇವೆ. ಅಷ್ಟು ಮಾತ್ರವೇ ಅಲ್ಲ, ಯಾರಾದರೂ ಮಹಿಳೆಯರ ಬಗ್ಗೆ ಕೆಟ್ಟದಾಗಿ ವರ್ತಿಸಿದರೆ, ಕೆಟ್ಟ ಉದ್ದೇಶದಿಂದ ಮಾತನಾಡಿದರೆ, ಮುಟ್ಟಿದರೆ ಅದು ಮೊದಲಿಗೆ ಗೊತ್ತಾಗುವುದು ಆ ಮಹಿಳೆಗೆ. ಹಾಗೇನಾದರೂ ಆಗಿದ್ದರೆ ಕೂಡಲೇ ಹೇಳಿ, ಈಗಲೇ ಕ್ರಮ ಕೈಗೊಳ್ಳೋಣ. ನೀವುಗಳು ಹೀಗೆ ಮಾತನಾಡುವುದರಿಂದ ಮನೆಯಲ್ಲಿರುವ ಗಂಡಸರ ಬಗ್ಗೆ ಕೆಟ್ಟ ಅಭಿಪ್ರಾಯ ಮೂಡುತ್ತದೆ’ ಎಂದರು ಸುದೀಪ್.

‘ಈ ಮನೆಯಲ್ಲಿ ಯಾರೂ ವುಮೆನ್ ಕಾರ್ಡ್ ಪ್ಲೇ ಮಾಡಬೇಡಿ. ಅದು ಕೆಟ್ಟದಾಗಿ ಕಾಣುತ್ತದೆ. ಅಲ್ಲದೆ ನಿಮ್ಮ ಗೌರವ, ಮರ್ಯಾದೆಗಳನ್ನು ನೀವೇ ಕಾಪಾಡಿಕೊಳ್ಳಿ, ಅವುಗಳನ್ನು ಕಾಪಾಡುವ ಹೊಣೆಯನ್ನು ಬೇರೆ ಸ್ಪರ್ಧಿಗಳಿಗೆ ಕೊಡಬೇಡಿ. ಯಾಕೆ ನೀವು ಅಷ್ಟೋಂದು ವೀಕಾ? ನಿಮಗೆ ಶಕ್ತಿ, ಧೈರ್ಯ ಇಲ್ಲವಾ’ ಎಂದು ಸುದೀಪ್ ಮಹಿಳಾ ಸ್ಪರ್ಧಿಗಳನ್ನು ಪ್ರಶ್ನೆ ಮಾಡಿದರು.

The post ಅವರ ಮಾನ ಕಾಪಾಡಲು ನೀವ್ಯಾರು ಎಂದು ಅಶ್ವಿನಿಗೆ ಸುದೀಪ್ ನೇರ ಪ್ರಶ್ನೆ appeared first on Good News 24x7.

]]>
ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..! https://www.goodnews24x7.com/complaint-filed-against-sudeep-for-scolding-rakshita-shetty-for-saying-that-she-will-get-gall/ Fri, 21 Nov 2025 10:56:16 +0000 https://www.goodnews24x7.com/?p=8229 ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..!   ನಟ ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಾಗಿದೆ. ಬಿಗ್ ಬಾಸ್ ನಿರೂಪಣೆ ಮಾಡುವಾಗ ರಕ್ಷಿತಾ ಶೆಟ್ಟಿ ಮೇಲೆ…

The post ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..! appeared first on Good News 24x7.

]]>

ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..!

 

ನಟ ಕಿಚ್ಚ ಸುದೀಪ್ ವಿರುದ್ಧ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಾಗಿದೆ. ಬಿಗ್ ಬಾಸ್ ನಿರೂಪಣೆ ಮಾಡುವಾಗ ರಕ್ಷಿತಾ ಶೆಟ್ಟಿ ಮೇಲೆ ಸುದೀಪ್ ಗರಂ ಆಗಿದ್ದಕ್ಕೆ ದೂರು ನೀಡಲಾಗಿದೆ. ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಎಂಬುವವರು ದೂರು ನೀಡಿದ್ದಾರೆ.

‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ರಿಯಾಲಿಟಿ ಶೋನಲ್ಲಿ ಹತ್ತು ಹಲವು ಡ್ರಾಮಾಗಳು ನಡೆಯುತ್ತವೆ. ಆ ಶೋ ನೋಡಿದ ಬಳಿಕ ಬಿಗ್ ಬಾಸ್ ಮನೆಯ ಹೊರಗೂ ಒಂದಷ್ಟು ಡ್ರಾಮಾ ಹೆಚ್ಚಾಗಿವೆ. ಬಿಗ್ ಬಾಸ್ ಮನೆಯಲ್ಲಿ ಇರುವ ಸ್ಪರ್ಧಿಗಳ ನಡೆ-ನುಡಿ ಗಮನಿಸಿ ಟೀಕೆ ಮಾಡುವವರು ಹೆಚ್ಚಾಗಿದ್ದಾರೆ. ಅಲ್ಲದೇ ಪೊಲೀಸ್ ಠಾಣೆಯಲ್ಲಿ ದೂರುಗಳು ಕೂಡ ದಾಖಲಾಗುತ್ತಿವೆ. ಬಿಗ್ ಬಾಸ್ ಶೋ ನಿರೂಪಕ ಕಿಚ್ಚ ಸುದೀಪ್ (Kichcha Sudeep) ವಿರುದ್ಧವೂ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ! ಹೌದು, ರಕ್ಷಿತಾ ಶೆಟ್ಟಿ (Rakshitha Shetty) ಮೇಲೆ ಸುದೀಪ್ ಗರಂ ಆಗಿದ್ದಕ್ಕೆ ಬೆಂಗಳೂರು ದಕ್ಷಿಣ ಜಿಲ್ಲಾ ಎಸ್.ಪಿ. ಕಚೇರಿಯಲ್ಲಿ ದೂರು ದಾಖಲಿಸಲಾಗಿದೆ.

ಕಳೆದ 12 ಸೀಸನ್​​ಗಳಲ್ಲಿ ಕಿಚ್ಚ ಸುದೀಪ್ ಅವರೇ ಬಿಗ್ ಬಾಸ್ ಶೋ ನಿರೂಪಣೆ ಮಾಡಿದ್ದಾರೆ. ನೂರಾರು ಸ್ಪರ್ಧಿಗಳನ್ನು ಅವರು ನೋಡಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದಾಗ ಅವರು ಖಡಕ್ ಆಗಿ ಕ್ಲಾಸ್ ತೆಗೆದುಕೊಳ್ಳುತ್ತಾರೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಇತ್ತೀಚೆಗೆ ಅವರು ರಕ್ಷಿತಾ ಶೆಟ್ಟಿಗೆ ಕ್ಲಾಸ್ ತೆಗೆದುಕೊಂಡರು. ಆಗ ‘ಪಿತ್ತ ನೆತ್ತಿಗೆ ಏರುತ್ತದೆ’ ಎಂದು ಹೇಳಿದ್ದರು. ಆ ಮಾತಿಗೆ ಸಂಧ್ಯಾ ಎಂಬುವರಿಂದ ಆಕ್ಷೇಪ ವ್ಯಕ್ತವಾಗಿದೆ.

ಸಾಮಾಜಿಕ ಹೋರಾಟಗಾರ್ತಿ ಸಂಧ್ಯಾ ಅವರು ದೂರು ನೀಡಿದ್ದಾರೆ. ಡಿವೈಎಸ್​ಪಿಗೆ ದೂರು ಸಲ್ಲಿಕೆ ಮಾಡಲಾಗಿದೆ. ‘ಸ್ಪರ್ಧಿ ರಕ್ಷಿತಾಗೆ ಸುದೀಪ್ ನಿಂದಿಸಿದ್ದಾರೆ. ಸುದೀಪ್ ಜೊತೆಗೆ ಅಶ್ವಿನಿ ಗೌಡ ವಿರುದ್ಧವೂ ದೂರು ನೀಡಿದ್ದೇನೆ. ಸುದೀಪ್ ಅವರು ಪಿತ್ತ ನೆತ್ತಿಗೇರಲಿದೆ ಎಂಬ ಪದ ಬಳಕೆ ಮಾಡಿದ್ದು ಎಷ್ಟು ಸರಿ? ಇಂತಹ ಪದವನ್ನು ಬಳಕೆ ಮಾಡಿದ್ದು ಸರಿನಾ? ಜೊತೆಗೆ ಅಶ್ವಿನಿ ಗೌಡ ಎಸ್ ಹಾಗೂ ಸ್ಲಂ ಎಂದು ಬಳಸುತ್ತಾರೆ. ಹಾಗಾಗಿ ನಾನು ಈ ಬಗ್ಗೆ ದೂರು ಕೊಟ್ಟಿದ್ದೇನೆ’ ಎಂದು ಸಂಧ್ಯಾ ಹೇಳಿದ್ದಾರೆ. ರಿಷಾ ವಿರುದ್ಧವೂ ದೂರು ನೀಡಲಾಗಿದೆ.

ಗಿಲ್ಲಿ ಮೇಲೂ ದೂರು:
ಇತ್ತೀಚೆಗೆ ಗಿಲ್ಲಿ ನಟ ವಿರುದ್ಧವೂ ಮಹಿಳಾ ಆಯೋಗಕ್ಕೆ ದೂರು ನೀಡಲಾಯಿತು. ಬಿಗ್ ಬಾಸ್ ಮನೆಯಲ್ಲಿ ಹೆಣ್ಮಕ್ಕಳಿಗೆ ಗಿಲ್ಲಿ ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಸಿ ಕುಶಲಾ ಎಂಬುವವರು ದೂರು ನೀಡಿದರು. ಅದನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡು ವರದಿ ಸಲ್ಲಿಸುವಂತೆ ಮಹಿಳಾ ಆಯೋಗವು ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ. ಈ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ.

 

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ 50 ದಿನಗಳನ್ನು ಪೂರೈಸಿ ಮುನ್ನಡೆಯುತ್ತಿದೆ. ಈಗಾಗಲೇ ಮಲ್ಲಮ್ಮ, ಚಂದ್ರಪ್ರಭ, ಸತೀಶ್, ಮಂಜು ಭಾಷಿಣಿ, ಅಮಿತ್, ಕರಿಬಸಪ್ಪ, ಅಶ್ವಿನಿ ಎಸ್, ಕಾಕ್ರೋಚ್ ಸುಧಿ ಅವರು ಎಲಿಮಿನೇಟ್ ಆಗಿದ್ದಾರೆ. ಶೋ ಬಗ್ಗೆ ಹೊರಗಡೆ ಕೆಲವು ವಿವಾದಗಳು ಆಗುತ್ತಿವೆ. ಆ ಕುರಿತು ಕಿಚ್ಚ ಸುದೀಪ್ ಅವರು ವಾರಾಂತ್ಯದ ಸಂಚಿಕೆಯಲ್ಲಿ ಏನು ಮಾತನಾಡುತ್ತಾರೆ ಎಂಬ ಕುತೂಹಲ ವೀಕ್ಷಕರಿಗೆ ಇದೆ.

The post ಸುದೀಪ್ ವಿರುದ್ಧ ದೂರು ದಾಖಲು, ಪಿತ್ತ ನೆತ್ತಿಗೇರುತ್ತೆ ಎಂದು ರಕ್ಷಿತಾ ಶೆಟ್ಟಿಗೆ ಕಿಚ್ಚ ಬೈಯ್ದಿದ್ದಕ್ಕೆ..! appeared first on Good News 24x7.

]]>
ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ, ‘ನಾನು ಬದುಕ್ತಾ ಇರೋದೇ ಮರ್ಯಾದೆಗೋಸ್ಕರ.’ https://www.goodnews24x7.com/gilli-brought-tears-to-ashwinis-eyes-i-am-alive-for-the-sake-of-honor/ Tue, 18 Nov 2025 11:02:04 +0000 https://www.goodnews24x7.com/?p=8219 ಬಿಗ್​ಬಾಸ್​​ನ ಇವತ್ತಿನ ಎಪಿಸೋಡ್​​ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ. ಇಬ್ಬರ ಮಧ್ಯೆ ಆಗಿದ್ದೇನು? ಇಂದು ರಾತ್ರಿ ಬಿಗ್​​ಬಾಸ್ ಮನೆಯಲ್ಲಿ ಏನು ಆಗಿದೆ ಅನ್ನೋದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಗಿಲ್ಲಿ…

The post ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ, ‘ನಾನು ಬದುಕ್ತಾ ಇರೋದೇ ಮರ್ಯಾದೆಗೋಸ್ಕರ.’ appeared first on Good News 24x7.

]]>

ಬಿಗ್​ಬಾಸ್​​ನ ಇವತ್ತಿನ ಎಪಿಸೋಡ್​​ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ.

ಇಬ್ಬರ ಮಧ್ಯೆ ಆಗಿದ್ದೇನು?
ಇಂದು ರಾತ್ರಿ ಬಿಗ್​​ಬಾಸ್ ಮನೆಯಲ್ಲಿ ಏನು ಆಗಿದೆ ಅನ್ನೋದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಗಿಲ್ಲಿ ಮತ್ತು ಅಶ್ವಿನಿ ಗೌಡ ಮಧ್ಯೆ ಗಲಾಟೆ ಆಗಿರೋದಂತೂ ಸತ್ಯ. ಕಲರ್ಸ್ ಕನ್ನಡ ಬೆಳಗ್ಗೆ ಪ್ರೊಮೋ ಶೇರ್ ಮಾಡಿದೆ. ಅದರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಗೇಮ್​ನ ಉಸ್ತುವಾರಿ ನೀಡಲಾಗಿದೆ. ಈ ವೇಳೆ ಸ್ಪರ್ಧಿಗಳ ನಡುವೆ ಗೇಮ್ ಆಡಿಸುವ ವಿಚಾರಕ್ಕೆ ಗಲಾಟೆ ಆಗಿದೆ. ಒಬ್ಬರಿಗೊಬ್ಬರು ಕರೆಕ್ಟ್ ಆಗಿ ಉಸ್ತುವಾರಿ ಮಾಡುವಂತೆ ಕಿರುಚಾಡಿದ್ದಾರೆ. ಆಗ ಗಿಲ್ಲಿ, ನೀನು ಕರೆಕ್ಟ್ ಆಗಿ ಮಾಡು ಎಂದಿದ್ದಾರೆ. ಅಷ್ಟಕ್ಕೆ ರೊಚ್ಚಿಗೇಳುವ ಅಶ್ವಿನಿ, ನೀನ್ಯಾರು ಅಂತಾ ಹೇಳೋಕೆ ನೀನ್ಯಾವನೋ ಎಂದು ಕೂಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಯುದ್ಧ ಜೋರಾಗಿ ನಡೆದಿದೆ. ಮಾತಿನ ಮಧ್ಯೆ ನೀನ್ಯಾವನೋ, ಯೋಗ್ಯತೆ ಎಂಬ ಪದಗಳೆಲ್ಲ ತೂರಿಕೊಂಡು ಬಂದಿವೆ. ಇದೇ ಗಲಾಟೆಯಲ್ಲಿ ಅಶ್ವಿನಿಗೆ ಗಿಲ್ಲಿ ನೋವು ತರುವ ರೀತಿಯಲ್ಲಿ ಮಾತನ್ನಾಡಿದಂತೆ ಕಾಣ್ತಿದೆ. ಗಲಾಟೆ ಮುಗಿದ ಬಳಿಕ ಧ್ರುವಂತ್, ಜಾಹ್ನವಿ ಹಾಗೂ ಧನುಷ್ ಜೊತೆ ಅಶ್ವಿನಿ ನೋವು ಹಂಚಿಕೊಂಡಿದ್ದಾರೆ. ಒಬ್ಬ ಕಾಮಿಡಿ ನಟ ಅಂದಮಾತ್ರಕ್ಕೆ ಏನು ಮಾತಾಡಿದರೂ ಓಕೆನಾ? ಒಬ್ಬರನ್ನ ತೇಜೋವಧೆ ಮಾಡೋದು ಎಷ್ಟು ಸರಿ? ಅದೆಲ್ಲ ಮಾತನ್ನಾಡೋಕೆ ಆತ ಯಾರು? ಎಂದು ಬೇಸರ ಹೊರ ಹಾಕಿದ್ದಾರೆ.ಗಿಲ್ಲಿ ಹೇಳಿದ್ದೇನು..?
ಗಾರ್ಡನ್ ಏರಿಯಾದಲ್ಲಿ ಅಶ್ವಿನಿ, ಜಾಹ್ನವಿ ಹಾಗೂ ಧ್ರುವಂತ್ ಮತ್ತು ರಾಶಿಕಾ ಒಂದು ಕಡೆ ಕೂತ್ಕೊಂಡು ಗಲಾಟೆ ವಿಚಾರವನ್ನು ಚರ್ಚೆ ಮಾಡ್ತಿರುತ್ತಾರೆ. ಅವರಿಗೆ ಕೇಳುವ ರೀತಿಯಲ್ಲಿ ಜೋರಾಗಿ.. ಎಲ್ಲರೂ ವೃದ್ಧಾಪ್ಯದವರೇ ಸೇರಿ ಹೋಗ್ತಾರೆ ಎಂದು ಕಷ್ಟಪಟ್ಟು ಕಳುಹಿಸುತ್ತ ಇದ್ದಾರೆ ಎಂದಿದ್ದಾರೆ. ವೃದ್ಧರು ಅಂತಾ ಹೇಳಿರೋದು ಅಶ್ವಿನಿಗೆ ಹರ್ಟ್ ಆದಂತೆ ಕಾಣ್ತಿದೆ.

 

The post ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ, ‘ನಾನು ಬದುಕ್ತಾ ಇರೋದೇ ಮರ್ಯಾದೆಗೋಸ್ಕರ.’ appeared first on Good News 24x7.

]]>
ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ https://www.goodnews24x7.com/gilli-actor-files-complaint-with-womens-commission-for-touching-rishas-clothes-gillis-joke-has-now-become-a-joke/ Tue, 18 Nov 2025 07:20:19 +0000 https://www.goodnews24x7.com/?p=8201 ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್…

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>

‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ಗಿಲ್ಲಿ ನಟ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ. ರಿಷಾ ಅವರ ಬಟ್ಟೆಗಳನ್ನು ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಿಲಾಗಿದೆ. ಸದ್ಯ ಈ ಪ್ರಕರಣವನ್ನು ಮಹಿಳಾ ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ನಟ (Gilli Nata) ಅವರು ಎಲ್ಲರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಾ ಇದ್ದಾರೆ. ಆದರೆ ಅವರು ಮಾಡುವ ಕೆಲವು ತಮಾಷೆಯಿಂದ ತೊಂದರೆ ಕೂಡ ಉಂಟಾಗುತ್ತದೆ. ಅಚ್ಚರಿ ಎಂದರೆ, ಈಗ ಬಿಗ್ ಬಾಸ್ ಮನೆ ಒಳಗಿನ ವಿಷಯ ಮಹಿಳಾ ಆಯೋಗದ (Women Commission) ತನಕ ತಲುಪಿದೆ! ಹೌದು, ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ನೀಡಲಾಗಿದೆ. ಅಷ್ಟಕ್ಕೂ ಗಿಲ್ಲಿ ಮಾಡಿದ ತಪ್ಪು ಏನು? ಸಹ ಸ್ಪರ್ಧಿ ರಿಷಾ (Risha) ಅವರ ಬಟ್ಟೆಗಳನ್ನು ಮುಟ್ಟಿದ್ದು. ಈ ವಿಚಾರವನ್ನು ಇಟ್ಟುಕೊಂಡು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಬಿಗ್ ಬಾಸ್ ಮನೆಯಲ್ಲಿ ಒಂದು ದಿನ ರಿಷಾ ಅವರು ಗಿಲ್ಲಿ ನಟನ ತಾಳ್ಮೆ ಕೆಡುವಂತೆ ನಡೆದುಕೊಂಡಿದ್ದರು. ಬಾತ್ ರೂಮ್ ಒಳಗೆ ಹೋಗಿದ್ದ ರಿಷಾ ಅವರು ದೀರ್ಘ ಸಮಯ ತೆಗೆದುಕೊಂಡರು. ತಮಗೆ ನೀರು ಬೇಕು ಎಂದು ಗಿಲ್ಲಿ ನಟ ಮನವಿ ಮಾಡಿದರೂ ಕೂಡ ರಿಷಾ ಅದಕ್ಕೆ ಸ್ಪಂದಿಸಲಿಲ್ಲ. ಅದರಿಂದಾಗಿ ಗಿಲ್ಲಿಗೆ ಕೋಪ ಬಂತು. ಆಗ ಗಿಲ್ಲಿ ನಡೆದುಕೊಂಡ ರೀತಿಯಿಂದ ಎಲ್ಲರಿಗೂ ಅಚ್ಚರಿ ಆಯಿತು.

ಗಿಲ್ಲಿ ಅವರು ರಿಷಾ ಅವರ ಬಟ್ಟೆಗಳನ್ನೆಲ್ಲ ತಂದು ಬಾತ್​ ರೂಮ್​ ಮುಂದೆ ಸುರಿದರು. ಆ ಬಳಿಕ ಗಿಲ್ಲಿ ಮತ್ತು ರಿಷಾ ನಡುವೆ ದೊಡ್ಡ ಜಗಳ ಆಯಿತು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಈಗ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಬಂದಿದೆ. ಅಲ್ಲದೇ, ಗಿಲ್ಲಿ ನಟ ಅವರು ಮಹಿಳೆಯರ ಬಗ್ಗೆ ಅವಮಾನಕರ ರೀತಿಯಲ್ಲಿ ಮಾತನಾಡಿದ್ದಾರೆ ಎಂದು ಕೂಡ ಆರೋಪಿಸಲಾಗಿದೆ. ಈ ದೂರಿನ ಅನ್ವಯ ಮಹಿಳಾ ಆಯೋಗವು ವಿಡಿಯೋ ಫೂಟೇಜ್ ಪರಿಶೀಲನೆ ಮಾಡುತ್ತಿದೆ. ಆದರೆ ಬಿಗ್ ಬಾಸ್ ಆಯೋಜಕರು ಯಾವುದೇ ವಿಡಿಯೋ ಫೂಟೇಜ್ ನೀಡಿಲ್ಲ ಎನ್ನಲಾಗಿದೆ. ಹೀಗಾಗಿ ಮೇಲ್ನೋಟಕ್ಕೆ ಗಿಲ್ಲಿ ನಟ ತಪ್ಪಾಗಿ ನಡೆದುಕೊಂಡ ಬಗ್ಗೆ ಯಾವುದೇ ಸಾಕ್ಷಿ ಸಿಗದ ಕಾರಣಕ್ಕೆ ಈ ಪ್ರಕರಣವನ್ನು ಆಯೋಗದ ಲೀಗಲ್ ಟೀಮ್ ಅಭಿಪ್ರಾಯಕ್ಕೆ ಕಳಿಸಲಾಗಿದೆ.

ಜಗಳ ನಡೆದಾಗ ಗಿಲ್ಲಿ ಮೇಲೆ ರಿಷಾ ಅವರು ಕೈ ಮಾಡಿದ್ದರು. ಅದು ಬಿಗ್ ಬಾಸ್ ಮನೆಯ ಮೂಲ ನಿಯಮದ ಉಲ್ಲಂಘನೆ. ಆದರೂ ಕೂಡ ಇನ್ನುಳಿದ ಸ್ಪರ್ಧಿಗಳು ಕೇವಲ ವಾರ್ನಿಂಗ್ ನೀಡಿ ರಿಷಾ ಅವರನ್ನು ಉಳಿಸಿಕೊಂಡರು. ವಾರಾಂತ್ಯದ ಸಂಚಿಕೆಯಲ್ಲಿ ಈ ವಿಚಾರದ ಬಗ್ಗೆ ಸುದೀಪ್ ಕೂಡ ಮಾತನಾಡಿದ್ದರು. ಹೆಣ್ಮಕ್ಕಳ ಬಟ್ಟೆ, ಬ್ಯಾಗ್​​ಗಳಿಗೆ ಅನುಮತಿ ಇಲ್ಲದೇ ಕೈ ಹಾಕಬಾರದು ಎಂದು ಗಿಲ್ಲಿಗೆ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

The post ರಿಷಾ ಬಟ್ಟೆ ಮುಟ್ಟಿದ್ದಕ್ಕೆ ಗಿಲ್ಲಿ ನಟ ವಿರುದ್ಧ ಮಹಿಳಾ ಆಯೋಗಕ್ಕೆ ದೂರು, ಗಿಲ್ಲಿ ಮಾಡಿದ ಒಂದು ತಮಾಷೆಯೇ ಈಗ ಮುಳುವಾಗಿದೆ appeared first on Good News 24x7.

]]>
‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಎಂದು ಗಿಲ್ಲಿಗೆ ಅವಾಜ್ ಹಾಕಿದ ಅಶ್ವಿನಿ https://www.goodnews24x7.com/dont-leave-me-alone-you-deserve-it-ashwini-tells-gilli/ Tue, 18 Nov 2025 06:40:31 +0000 https://www.goodnews24x7.com/?p=8190 ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಜಗಳಗಳು ನಡೆಯುತ್ತಲೇ ಇರುತ್ತವೆ. ಈವಾರವೂ ಅದು ಮುಂದುವರಿದಿದೆ. ಟಾಸ್ಕ್ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಈ ಕಿರಿಕ್​ನಿಂದ ಮನೆಯಲ್ಲಿ ಅಶಾಂತಿ ಮೂಡಿದೆ. ವೀಕ್ಷಕರು ಕೂಡ ಗೇಮ್​ಗಿಂತ ಹೆಚ್ಚಾಗಿ ಫೈಟ್​ನೇ ನೋಡುವಂತೆ…

The post ‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಎಂದು ಗಿಲ್ಲಿಗೆ ಅವಾಜ್ ಹಾಕಿದ ಅಶ್ವಿನಿ appeared first on Good News 24x7.

]]>

ಅಶ್ವಿನಿ ಗೌಡ ಹಾಗೂ ಗಿಲ್ಲಿ ಮಧ್ಯೆ ಜಗಳಗಳು ನಡೆಯುತ್ತಲೇ ಇರುತ್ತವೆ. ಈವಾರವೂ ಅದು ಮುಂದುವರಿದಿದೆ. ಟಾಸ್ಕ್ ಉಸ್ತುವಾರಿ ವಿಚಾರಕ್ಕೆ ಸಂಬಂಧಿಸಿ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಈ ಕಿರಿಕ್​ನಿಂದ ಮನೆಯಲ್ಲಿ ಅಶಾಂತಿ ಮೂಡಿದೆ. ವೀಕ್ಷಕರು ಕೂಡ ಗೇಮ್​ಗಿಂತ ಹೆಚ್ಚಾಗಿ ಫೈಟ್​ನೇ ನೋಡುವಂತೆ ಆಗಿದೆ.

The post ‘ನನ್ನತ್ರ ಇಟ್ಕೋಬೇಡ, ನಿನ್ನ ಯೋಗ್ಯತೆಗಿಷ್ಟು’; ಎಂದು ಗಿಲ್ಲಿಗೆ ಅವಾಜ್ ಹಾಕಿದ ಅಶ್ವಿನಿ appeared first on Good News 24x7.

]]>
ಬಿಗ್​ಬಾಸ್ ಮನೆಯಿಂದ ಹೊರ ಬಂದ ಕಾಕ್ರೋಚ್ ಸುಧೀ..! https://www.goodnews24x7.com/cockroach-sudhi-has-been-eliminated-from-the-bigg-boss-house/ Mon, 17 Nov 2025 05:32:36 +0000 https://www.goodnews24x7.com/?p=8185 ಬಿಗ್​​ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಅವರು ಹೊರ ಬಿದ್ದಿದ್ದಾರೆ. ಬರೋಬ್ಬರಿ 7 ವಾರಗಳ ಕಾಲ ದೊಡ್ಮನೆಯಲ್ಲಿದ್ದ ಸುಧಿ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು. ಬಿಗ್​​ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಅವರು ಹೊರ ಬಿದ್ದಿದ್ದಾರೆ. ಬರೋಬ್ಬರಿ 7 ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಸುಧಿ,…

The post ಬಿಗ್​ಬಾಸ್ ಮನೆಯಿಂದ ಹೊರ ಬಂದ ಕಾಕ್ರೋಚ್ ಸುಧೀ..! appeared first on Good News 24x7.

]]>

ಬಿಗ್​​ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಅವರು ಹೊರ ಬಿದ್ದಿದ್ದಾರೆ. ಬರೋಬ್ಬರಿ 7 ವಾರಗಳ ಕಾಲ ದೊಡ್ಮನೆಯಲ್ಲಿದ್ದ ಸುಧಿ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.
ಬಿಗ್​​ಬಾಸ್‌ ಮನೆಯಿಂದ ಕಾಕ್ರೋಚ್‌ ಸುಧಿ ಅವರು ಹೊರ ಬಿದ್ದಿದ್ದಾರೆ. ಬರೋಬ್ಬರಿ 7 ವಾರಗಳ ಕಾಲ ಬಿಗ್​ಬಾಸ್ ಮನೆಯಲ್ಲಿದ್ದ ಸುಧಿ, ವೀಕ್ಷಕರನ್ನು ರಂಜಿಸುವಲ್ಲಿ ಯಶಸ್ವಿಯಾಗಿದ್ದರು.

ಹೇಗೆ ಎಲಿಮಿನೇಟ್ ಮಾಡಲಾಯ್ತು..?
ನಿನ್ನೆ ಎಪಿಸೋಡ್​ನಲ್ಲಿ ಒಟ್ಟು 5 ಮಂದಿ ನಾಮಿನೇಟ್ ಆಗಿರುವ ಸ್ಪರ್ಧಿಗಳು ಉಳಿದುಕೊಂಡಿದ್ದರು. ಅವರಲ್ಲಿ ಧ್ರುವಂತ್ ಅವರನ್ನು ಕಿಚ್ಚ ಸುದೀಪ್ ಸೇಫ್ ಎಂದು ಘೋಷಿಸಿದರು. ಬಳಿಕ ರಘು, ರಿಷಾ, ಸುಧಿ ಮತ್ತು ಜಾಹ್ನವಿ ನಾಮಿನೇಷನ್‌ನಲ್ಲಿದ್ದರು. ಈ ನಾಲ್ಕು ಸ್ಪರ್ಧಿಗಳು ತಮ್ಮ ತಮ್ಮ ಸೂಟ್‌ಕೇಸ್‌ ತೆಗೆದುಕೊಂಡು ಮುಖ್ಯಧ್ವಾರದ ಬಳಿ ಬಂದಿದ್ದಾರೆ.

ಬಿಗ್​ಬಾಸ್ ಮನೆಯ ಬಾಗಿಲು ಓಪನ್‌ ಆದಾಗ ಎಲ್ಲರೂ ಆಚೆ ಕಡೆ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ನಿಂತಿರುತ್ತಾರೆ. ಮುಖ್ಯಧ್ವಾರ ಕ್ಲೋಸ್‌ ಆಗಿ ಮತ್ತೆ ಓಪನ್‌ ಆದಾಗ ಯಾರು ಇರಲ್ಲವೋ, ಅವರು ಮನೆಯಿಂದ ಔಟ್‌ ಎಂದು ಸುದೀಪ್‌ ತಿಳಿಸಿದ್ದರು. ಅಂತೆಯೇ ಕಾಕ್ರೋಚ್ ಸುಧೀ ಅವರು ಕಾಣಿಸಲಿಲ್ಲ. ಅದನ್ನು ನೋಡಿದ ಸುಧೀಪ್, ಸೇಫ್ ಆದ ರಘು, ಜಾಹ್ನವಿ ಹಾಗೂ ರಿಷಾ ಗೌಡಗೆ ಅಭಿನಂದನೆ ತಿಳಿಸಿದರು. ಹಿಂದಿನ ವಾರವೇ ಚಂದ್ರಪ್ರಭ ಜೊತೆಗೆ ಕಾಕ್ರೋಚ್‌ ಸುಧಿ ನಾಮಿನೇಷನ್‌ನಲ್ಲಿದ್ದರು. ಎಲಿಮಿನೇಷನ್‌ ಭೀತಿಯಲ್ಲಿದ್ದ ಕಾಕ್ರೋಚ್‌ ಸುಧಿ ತಮಗೆ ಸಿಕ್ಕಿರುವ ಸ್ಪೆಷಲ್‌ ಪವರ್‌ ಬಳಸಿಕೊಂಡು ಸೇವ್‌ ಆಗಿದ್ದರು. ಇದರಿಂದ ಚಂದ್ರಪ್ರಭ ಮನೆಯಿಂದ ಹೊರಬರಬೇಕಾಯಿತು.

The post ಬಿಗ್​ಬಾಸ್ ಮನೆಯಿಂದ ಹೊರ ಬಂದ ಕಾಕ್ರೋಚ್ ಸುಧೀ..! appeared first on Good News 24x7.

]]>
ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ https://www.goodnews24x7.com/kiccha-sudeep-takes-a-class-for-gilli-rakshita/ Sun, 16 Nov 2025 06:43:49 +0000 https://www.goodnews24x7.com/?p=8179 ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ…

The post ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ appeared first on Good News 24x7.

]]>

ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ. ಗಿಲ್ಲಿ ಹಾಗೂ ರಕ್ಷಿತಾ ಬಿಗ್‌ಬಾಸ್‌ ಮನೆಯಲ್ಲಿ ಏನೇ ಮಾಡಿದ್ರೂ ಅವರಿಗೆ ಏನೂ ಮಾಡಲ್ವಾ? ಅನ್ನೋ ಅಭಿಪ್ರಾಯವಿತ್ತು. ಸುದೀಪ್‌ ಈ ವಾರ ಅದನ್ನು ಸುಳ್ಳು ಮಾಡಿದ್ದಾರೆ. ರಕ್ಷಿತಾ ಹಾಗೂ ಗಿಲ್ಲಿಗೆ ಸುದೀಪ್‌ ಫುಲ್‌ ಕ್ಲಾಸ್‌ ತಗೊಂಡಿದ್ದಾರೆ.

ಗಿಲ್ಲಿ ಈ ವಾರದ ಟಾಸ್ಕ್‌ಗಳಲ್ಲಿ ಸೇಫ್‌ ಟೀಂನಲ್ಲಿದ್ದರೆ, ರಕ್ಷಿತಾ ನಾಮಿನೇಟೆಡ್‌ ಟೀಂನಲ್ಲಿದ್ದರು. ಆದರೆ ಯಾವಾಗ ನಾಮಿನೇಟೆಡ್‌ ಟೀಂ ವಿನ್‌ ಆಗಿ ತಮ್ಮ ಟೀಂನಿಂದ ಸೇಫ್‌ ಟೀಂಗೆ ಒಬ್ಬರನ್ನು ಕಳುಹಿಸಬೇಕು ಅಲ್ಲಿಂದ ಒಬ್ಬರನ್ನು ತಮ್ಮ ಟೀಂಗೆ ಕರೆಸಿಕೊಳ್ಳಬೇಕು ಎನ್ನುವ ಪ್ರಶ್ನೆ ಬಂದಿತ್ತೋ ಆಗ ರಕ್ಷಿತಾ ತಮ್ಮ ಟೀಂನ ನಿರ್ಧಾರದ ವಿರುದ್ಧವೇ ತಿರುಗಿ ಬಿದ್ದಿದ್ದರು. ಇದೇ ವೇಳೆ ಗಿಲ್ಲಿ ಕೂಡ ರಕ್ಷಿತಾ ತಮ್ಮ ವಂಶದ ಕುಡಿ ಹಾಗೆ ಸರಳವಾಗಿ ಸೋಲಲ್ಲ ಎಂದು ಹೇಳಿದ್ದರು.

ಇದು ನಾಮಿನೇಟೆಡ್‌ ಟೀಂನವರ ಆಕ್ರೋಶಕ್ಕೆ ಕಾರಣವಾಗಿತ್ತು. ಅಲ್ಲದೆ ಇನ್ನೊಂದು ಟಾಸ್ಕ್‌ನ ಆರಂಭಕ್ಕೂ ಮೊದಲೇ ಗಿಲ್ಲಿ ರಕ್ಷಿತಾ ಕಿವಿಯಲ್ಲಿ ಏನೋ ಹೇಳಿದ್ದು ಕೂಡ ದೊಡ್ಡ ಗಲಾಟೆಗೆ ಕಾರಣವಾಗಿತ್ತು. ಇದನ್ನೇ ಇಟ್ಟುಕೊಂಡು ಸುದೀಪ್‌ ಶನಿವಾರದ ಎಪಿಸೋಡ್‌ನಲ್ಲಿ ಗಿಲ್ಲಿ ಹಾಗೂ ರಕ್ಷಿತಾಗೆ ಕ್ಲಾಸ್‌ ತಗೊಂಡಿದ್ದಾರೆ.

ಅವರ ನಡವಳಿಕೆಯನ್ನು ಸಮರ್ಥಿಸಿಕೊಳ್ಳೋಕೆ ಹೇಳಿದ್ದಾರೆ. ಅಲ್ಲದೇ ಇವರಿಬ್ಬರ ಈ ನಡವಳಿಕೆ ಒಂದು ಟೀಂ ಮೇಲೆ ಹೇಗೆ ಪರಿಣಾಮ ಬೀರುತ್ತೆ ಅನ್ನೋದನ್ನೂ ಹೇಳಿದ್ದಾರೆ. ಇಬ್ಬರಿಗೂ ಸರಿಯಾಗೇ ಕ್ಲಾಸ್‌ ತಗೊಂಡಿದ್ದು, ಇಲ್ಲಿವರೆಗೂ ಇನೋಸೆಂಟ್‌ ತರ ಕಾಣಿಸುತ್ತಿದ್ದ ರಕ್ಷಿತಾ ಮೊದಲ ಬಾರಿ ತಾವೇ ಮಾಡಿದ್ದ ಗುಂಡಿಗೆ ಬಿದ್ದ ಹಾಗೆ ಆಗಿದ್ದಾರೆ. ಇನ್ನಾದ್ರೂ ತಪ್ಪನ್ನು ಅರಿತುಕೊಂಡು ಇವರಿಬ್ಬರು ತಿದ್ದಿಕೊಳ್ತಾರಾ? ಮುಂದಿನ ದಿನಗಳಲ್ಲಿ ನೋಡಬೇಕಷ್ಟೆ.

 

The post ಗಿಲ್ಲಿ & ರಕ್ಷಿತಾಗೆ ಕ್ಲಾಸ್ ತಗೊಂಡ ಕಿಚ್ಚ ಸುದೀಪ್ appeared first on Good News 24x7.

]]>
ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. https://www.goodnews24x7.com/bigg-boss-former-contestant-ugram-manju-engaged/ Mon, 10 Nov 2025 05:37:12 +0000 https://www.goodnews24x7.com/?p=8082 ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು…

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>

ಬಿಗ್ ಬಾಸ್ ಮಾಜಿ ಸ್ಪರ್ಧಿ, ಮ್ಯಾಕ್ಸ್​ ಮಂಜು ನಿಶ್ಚಿತಾರ್ಥ.. ಹುಡುಗಿ ಯಾರು? ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಸ್ಯಾಂಡಲ್​ವುಡ್​ ನಟ ಹಾಗೂ ಬಿಗ್ ಬಾಸ್ ಸೀಸನ್​- 11ರ ಮಾಜಿ ಸ್ಪರ್ಧಿ ಮ್ಯಾಕ್ಸ್ ಮಂಜು ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಅಪ್ಪ ಹೇಳಿದಂತೆ ಮ್ಯಾಕ್ಸ್​ ಮಂಜು ಮದುವೆಗೆ ರೆಡಿಯಾಗಿದ್ದು ಸದ್ಯದಲ್ಲೇ ಈ ಬಗ್ಗೆ ಮಾಹಿತಿ ತಿಳಿಸಬಹುದು.ಮ್ಯಾಕ್ಸ್ ಮಂಜು ಅವರು ಸಂಧ್ಯಾ ಖುಷಿ ಎನ್ನುವರ ಜೊತೆ ಎಂಗೇಜ್​ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಬಂಧದ ಫೋಟೋಗಳನ್ನು ಇಬ್ಬರೂ ತಮ್ಮ ತಮ್ಮ ಇನ್​ಸ್ಟಾದಲ್ಲಿ ಶೇರ್ ಮಾಡಿದ್ದಾರೆ. ಅಲ್ಲದೇ ಬದುಕಿನ ಹೊಸ ಅಧ್ಯಾಯ ಆರಂಭವಾಗಿದೆ. ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ. ದೇವರ ಕೃಪೆಯಿಂದ, ಕುಟುಂಬದ ಆಶೀರ್ವಾದದಿಂದ ನಾವು ಜೀವನದ ಹೊಸ ಹಾದಿಗೆ ಕಾಲಿಟ್ಟಿದ್ದೇವೆ. ಹೊಸ ಬಂಧದ ಆರಂಭ ನಿಶ್ಚಿತಾರ್ಥದ ಸುಂದರ ಕ್ಷಣ ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ. ಮ್ಯಾಕ್ಸ್​ ಮಂಜು ಅವರು ಬಿಗ್ ಬಾಸ್ ಸೀಸನ್​ 11ರಲ್ಲಿ ಸ್ಪರ್ಧಿಯಾಗಿದ್ದರು. ಕೊನೆವರೆಗೂ ಪೈಪೋಟಿ ಕೊಟ್ಟಿದ್ದರು. ಬಿಗ್ ಬಾಸ್​ನಲ್ಲಿ ಮಗ ಮದುವೆ ಬಗ್ಗೆ ತಂದೆ ಪ್ರಸ್ತಾಪ ಮಾಡಿದ್ದರು. ಅದರಂತೆ ಮ್ಯಾಕ್ಸ್ ಮಂಜು ಅವರ ನಿಶ್ಚಿತಾರ್ಥ ಆಗಿದ್ದು ಇನ್ನೇನು ವಿವಾಹ ಸಂಭ್ರಮವೊಂದು ಬಾಕಿ ಇದೆ. ಇದನ್ನೂ ಸದ್ಯದಲ್ಲೇ ಅಪ್​ಡೇಟ್ ಕೊಡಬಹುದು. ಅಲ್ಲಿವರೆಗೆ ಕಾಯಬೇಕು ಅಷ್ಟೇ.

ಮ್ಯಾಕ್ಸ್ ಮಂಜು ಹುಡುಗಿ ಯಾರು?
ಉಗ್ರಂ ಮಂಜು ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಎನ್ನುವ ಪ್ರಶ್ನೆ ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಉಗ್ರಂ ಮಂಜು ಕೈ ಹಿಡಿಯುತ್ತಿರುವ ಹುಡುಗಿ ಸಂಧ್ಯಾ ಖುಷಿ. ಸ್ಪರ್ಶ್ ಆಸ್ಪತ್ರೆಯಲ್ಲಿ ಸಂಧ್ಯಾ ಅವರು ಅಡ್ಮಿನ್ ಡಿಪಾರ್ಟ್ಮೆಂಟ್‌ನಲ್ಲಿದ್ದಾರೆ. ಇನ್​ಸ್ಟಾದಲ್ಲಿ Transplant Coordinator ಎಂದು ಬರೆದುಕೊಂಡಿದ್ದಾರೆ.

 

 

The post ಬಿಗ್ ಬಾಸ್ ಮಾಜಿ ಸ್ಪರ್ಧಿ, ಉಗ್ರಂ ಮಂಜು ನಿಶ್ಚಿತಾರ್ಥ.. appeared first on Good News 24x7.

]]>