ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ರೇಡ್

ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಮನೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಬ್ಯಾಂಕ್ ವಂಚನೆ ಕೇಸ್ ಗೆ ಸಂಬಂಧಿಸಿದಂತೆ ರೇಡ್ ಮಾಡಲಾಗಿದೆ.
ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ಉದ್ಯಮಿ ಅನಿಲ್ ಅಂಬಾನಿ ಮನೆ ಮೇಲೆ ರೇಡ್ ಮಾಡಿದ್ದಾರೆ. ಮನೆಯಲ್ಲಿ ಇಡೀ ದಿನ ಸಿಬಿಐ ಅಧಿಕಾರಿಗಳು ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಅನಿಲ್ ಅಂಬಾನಿ ಮಾಲೀಕತ್ವದ ಕಂಪನಿಗಳ ಮೇಲೂ ದಾಳಿ ಮಾಡಿದ್ದಾರೆ. ಬ್ಯಾಂಕ್ ಗಳಿಗೆ ಬರೋಬ್ಬರಿ 2 ಸಾವಿರ ಕೋಟಿ ರೂಪಾಯಿಯನ್ನು ವಂಚಿಸಿದ ಆರೋಪ ಅನಿಲ್ ಅಂಬಾನಿ ಹಾಗೂ ಅವರ ಕಂಪನಿಗಳ ಮೇಲಿದೆ. ಮುಂಬೈನ ಕೂಫೆ ಪರೇಡ್ ಸೀ ವಿಂಡ್ ಕಾಂಪ್ಲೆಕ್ಸ್ ನಲ್ಲಿರುವ ಅನಿಲ್ ಅಂಬಾನಿ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಸಿಬಿಐ ದಾಳಿ ವೇಳೆ, ಅನಿಲ್ ಅಂಬಾನಿ ಮನೆಯಲ್ಲೇ ಇದ್ದರು ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ ಪಾರ್ಲಿಮೆಂಟ್ ನಲ್ಲಿ ಸ್ಟೇಟ್ ಆಫ್ ಇಂಡಿಯಾ , ಅನಿಲ್ ಅಂಬಾನಿ ಹಾಗೂ ಅವರ ಮಾಲೀಕತ್ವದ ರಿಲಯನ್ಸ್ ಕಮ್ಯೂನಿಕೇಷನ್ಸ್ ಲಿಮಿಟೆಡ್ ಕಂಪನಿಯನ್ನು ಫ್ರಾಡ್ ಎಂದು ವರ್ಗೀಕರಣ ಮಾಡಿರುವುದಾಗಿ ಕೇಂದ್ರದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ ಉತ್ತರ ನೀಡಿದ್ದಾರೆ.

20225ರ ಜೂನ್ 13 ರಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಮಾಸ್ಟರ್ ಡೈರೆಕ್ಷನ್ ಆನ್ ಫ್ರಾಡ್ ರಿಸ್ಕ್ ಮ್ಯಾನೇಜ್ ಮೆಂಟ್ ಮತ್ತು ಎಸ್‌ಬಿಐನ ಅಂತರಿಕ ನೀತಿಯಡಿ ಈ ವರ್ಗೀಕರಣ ಮಾಡಲಾಗಿದೆ ಎಂದು ಪಂಕಜ್ ಚೌಧರಿ ಹೇಳಿದ್ದಾರೆ.ಇನ್ನೂ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ, ರಿಲಯನ್ಸ್ ಕಮ್ಯೂನಿಕೇಷನ್ಸ್ ಗೆ ಒಟ್ಟಾರೆ 2,227 ಕೋಟಿ ರೂಪಾಯಿ ಹಣವನ್ನು ಸಾಲವಾಗಿ ನೀಡಿದೆ. ಇನ್ನೂ ನಾನ್ ಫಂಡ್ ಬ್ಯಾಂಕ್ ಗ್ಯಾರಂಟಿಯಾಗಿ 786 ಕೋಟಿ ರೂಪಾಯಿ ನೀಡಿದೆ. ಇನ್ನೂ ಇ.ಡಿ. ಕೂಡ ಅನಿಲ್ ಅಂಬಾನಿ ವಿರುದ್ಧ ಕೇಸ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದೆ. ಆಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಕೂಡ ಅನಿಲ್ ಅಂಬಾನಿ ಮೇಲಿದೆ. ಜೊತೆಗೆ ಬ್ಯಾಂಕ್ ನಿಂದ ಸಾಲ ಪಡೆಯಲು ಬ್ಯಾಂಕ್ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪವೂ ಅನಿಲ್ ಅಂಬಾನಿ ಹಾಗೂ ಅವರ ಮಾಲೀಕತ್ವದ ಕಂಪನಿಗಳ ಮೇಲಿದೆ.

Related Posts

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ ಮೈಸೂರು ಜಿಲ್ಲೆಯ ಕಣಗಾಲ್‌ ಗ್ರಾಮದಲ್ಲಿರುವ ನಿವಾಸವನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ಮನೆಯನ್ನು ಮ್ಯೂಸಿಯಂ ಆಗಿ ಪರಿವರ್ತಿಸುತ್ತಿರುವುದು ಇದೇ ಮೊದಲು. ಖ್ಯಾತ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಅವರ…

ರಜತ್ ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ಬೆಂಗಳೂರು: ಬಿಗ್ ಬಾಸ್ ಮಾಜಿ ಸ್ವರ್ಧಿ ರಜತ್ ವಿರುದ್ಧ ಮತ್ತೊಂದು ಎಫ್‌ಐಆರ್‌ದಾಖಲಾಗಿದೆ. ಬಿಗ್ ಬಾಸ್ ಮಾಜಿ ಸ್ಪರ್ಧಿ ಸತೀಶ್ ಅಲಿಯಾಸ್ ಡಾಗ್ ಸತೀಶ್‌ ಅವರು ದೂರು ನೀಡಿದ್ದು ಚಾಮರಾಜಪೇಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಬಿಎನ್‌ಎಸ್‌ ಸೆಕ್ಷನ್‌ 351 ,…

You Missed

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ರಜತ್ ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ರಜತ್  ವಿರುದ್ಧ ಮತ್ತೊಂದು ಕೇಸ್‌ – ಡಾಗ್‌ ಸತೀಶ್‌ಗೆ ಕೊಲೆ ಬೆದರಿಕೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

ಬೆಂಗಳೂರಿನಲ್ಲಿ ವಿದೇಶಿ ಪ್ರಜೆಗಳ ವಿರುದ್ಧ ಪೊಲೀಸರು ವ್ಯಾಪಕ ಕಾರ್ಯಾಚರಣೆ

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್