ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬಿಸಲು ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿಗೆ ಮೊಸ

ರಾಯಚೂರಿನ ಮಾನ್ವಿ ಪಟ್ಟಣದ ಮಹಾದೇವ್ ಮತ್ತು ಕಾಳಮ್ಮ ದಂಪತಿಗಳು ಸಾಮಾಜಿಕ ಜಾಲತಾಣದ ಜಾಹೀರಾತಿನಲ್ಲಿ ನೋಡಿದ ಸೀರೆಗಳನ್ನು ಆರ್ಡರ್ ಮಾಡಿದ್ದಾರೆ. 10,000 ರೂ. ಪಾವತಿಸಿ ಸೀರೆಗಳನ್ನು ಆರ್ಡರ್ ಮಾಡಿದ್ದ ಅವರಿಗೆ ಹರಿದ ಮತ್ತು ದುರ್ವಾಸನೆಯ ಸೀರೆಗಳು ಬಂದಿವೆ. ಪೊಲೀಸರು ದೂರು ದಾಖಲಿಸಲು ನಿರಾಕರಿಸಿದ್ದಾರೆ ಎಂದು ದಂಪತಿ ಆರೋಪಿಸಿದ್ದಾರೆ. ನ್ಯಾಯಕ್ಕಾಗಿ ಅವರು ಮನವಿ ಮಾಡುತ್ತಿದ್ದಾರೆ.ಸಾಮಾಜಿಕ ಜಾಲತಾಣದಲ್ಲಿನ ಜಾಹಿರಾತು ನಂಬಿ ಸೀರೆ ಆರ್ಡ್​ರ್ ಮಾಡಿದ್ದ ದಂಪತಿ ಮೊಸ ಹೋಗಿದ್ದಾರೆ. ಮನೆಯಲ್ಲೇ ಕುಳಿತು ಸೀರೆ ಬ್ಯುಸಿನೆಸ್ ಮಾಡಬೇಕು, ಗೌರಿ-ಗಣೇಶ ಹಬ್ಬಕ್ಕೆ ಹೊಸ ವ್ಯಾಪಾರ ಆರಂಭಿಸಬೇಕು ಎಂದು ರಾಯಚೂರಿನ ಮಾನ್ವಿ ಪಟ್ಟಣದ ನಿವಾಸಿ ಮಹಾದೇವ್ ಹಾಗೂ ಕಾಳಮ್ಮ ದಂಪತಿ ಕನಸು ಕಂಡಿದ್ದರು. ಹೀಗಿರುವಾಗ, ದಂಪತಿ ಸಾಮಾಜಿಕ ಜಾಲತಾಣದಲ್ಲಿ 100 ರೂ.ಗೆ 3 ಸಾರಿ ಎಂಬ ಜಾಹಿರಾತು ನೋಡಿದ್ದಾರೆ. ಜಾಹಿರಾತಿದಲ್ಲಿ ಇದ್ದ ಸೀರೆಗಳ ಬಣ್ಣ, ವೆರೈಟಿ ಡಿಸೈನ್​ಗಳನ್ನು ನೋಡಿ ಫಿದಾ ಆಗಿದ್ದಾರೆ.

ನಂತರ, ಜಾಹಿರಾತು ನೀಡಿದವರನ್ನು ಸಂಪರ್ಕಿಸಿ, 10 ಸಾವಿರ ರೂ. ಹಣವನ್ನು ಆನ್​ಲೈನ್​ ಮೂಲಕ ಪೇ ಮಾಡಿ 70 ಸೀರೆ ಆರ್ಡರ್ ಮಾಡಿದ್ದಾರೆ. ಒಂದು ವಾರದ ಬಳಿಕ ಮನೆಗೆ ಬಂದಿದ್ದ ಪಾರ್ಸಲ್ ನೋಡಿ ದಂಪತಿ ಕಕ್ಕಾಬಿಕ್ಕಿಯಾಗಿದ್ದಾರೆ. ಆರ್ಡರ್​ ಮಾಡಿದ್ದ ಅಷ್ಟೂ ಸೇರೆಗಳು ಹರಿದು ಹೋಗಿದ್ದವು. ಇದಷ್ಟೇ ಅಲ್ಲದೆ ಸೀರೆಗಳು ದುರ್ವಾಸನೆ ಬರುತ್ತಿದ್ದವು. ಇದರಿಂದ ಕಕ್ಕಾಬಿಕ್ಕಿಯಾದ ದಂಪತಿಗಳು ಆನ್​ಲೈನ್​ ಮಾರಾಟಗಾರನನ್ನು ಸಂಪರ್ಕಿಸಿದಾಗ ಮಾರಾಟಗಾರ ಬೇಕಾಬಿಟ್ಟಿಯಾಗಿ ಪ್ರತಿಕ್ರಿಯಿಸಿದ್ದಾನೆ. ತಾವು ಮೋಸ ಹೋದ ಬಗ್ಗೆ ದೂರು ನೀಡಲು ಹೋದರೂ ಮಾನ್ವಿ ಠಾಣೆ ಪೊಲೀಸರು ದೂರು ತೆಗೆದುಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪೊಲೀಸರು ನಮಗೆ ನ್ಯಾಯ ಕೊಡಿಸಬೇಕು ಅಂತ ಮಹದೇವ ದಂಪತಿ ಮನವಿ ಮಾಡಿದ್ದಾರೆ.

Related Posts

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ರಾಜ್ಯದಲ್ಲಿ ಸೆಪ್ಟೆಂಬರ್ 21ರಿಂದ ಮೂರು ದಿನಗಳ ಕಾಲ ವಿಶೇಷ ವಿಧಾನಮಂಡಲ ಅಧಿವೇಶನ ನಡೆಸಲು ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸೆ. 21ರಿಂದ ಸೆ.…

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಗುಂಡ್ಲುಪೇಟೆ ಪಟ್ಟಣದ ಇಂದಿರಾ ಕ್ಯಾಂಟೀನ್‌ಗೆ ಸೋಮವಾರ ಬೆಳಿಗ್ಗೆ ಅಧಿಕಾರಿಗಳ ತಂಡ ದಿಢೀರ್ ಭೇಟಿ ನೀಡಿ ಆಹಾರದ ಶುಚಿತ್ವ, ಗುಣಮಟ್ಟ ಹಾಗೂ ಕುಡಿಯುವ ನೀರಿನ ಪೂರೈಕೆಯನ್ನು ಕೂಲಂಕಷವಾಗಿ ಪರಿಶೀಲಿಸಿತು. ಬಡವರು ಮತ್ತು ಶ್ರಮಿಕರಿಗೆ ಪೌಷ್ಟಿಕ ಹಾಗೂ ಶುಚಿ-ರುಚಿಯಾದ ಆಹಾರ ದೊರೆಯಬೇಕು ಎಂಬ ಶಾಸಕರ…

You Missed

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಅಭಿಮಾನಿಗಳ ಬೇಡಿಕೆಗೆ ಮಣಿದ ಸರ್ಕಾರ, ನಿಶಾನೆ ಆನೆಯಾಗಿ ಕಂಗೊಳಿಸಲಿರುವ ಅಭಿಮನ್ಯು

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಸೆ. 21ರಿಂದ ಮೂರು ದಿನಗಳ ಕಾಲ ರಾಜ್ಯ ವಿಧಾನಮಂಡಲದ ವಿಶೇಷ ಅಧಿವೇಶನ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಇಂದಿರಾ ಕ್ಯಾಂಟೀನ್‌ಗೆ ಅಧಿಕಾರಿಗಳ ಆಕಸ್ಮಿಕ ಭೇಟಿ: ಶುಚಿತ್ವ ಹಾಗೂ ಆಹಾರದ ಗುಣಮಟ್ಟ ಪರಿಶೀಲನೆ

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಬಿಗ್ ಬಾಸ್ ಕನ್ನಡ 13: ಈ ಭಾನುವಾರದಿಂದ ‘ಏವಿಯೇಷನ್’ ಥೀಮ್‌ನೊಂದಿಗೆ ಗ್ರ್ಯಾಂಡ್ ಟೇಕ್ ಆಫ್!

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

ಟಾಕ್ಸಿಕ್‌’ನಲ್ಲಿ ಯಶ್‌ ಅಭಿನಯಕ್ಕೆ ಕಿಚ್ಚನ ಪುತ್ರಿ ಫಿದಾ: ಪ್ರತಿಯೊಂದು ಫ್ರೇಮ್‌ನಲ್ಲೂ ಮ್ಯಾಜಿಕ್‌ ಎಂದ ಸಾನ್ವಿ ಸುದೀಪ್‌

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!

FSSAI ಅಸಮಾಧಾನ: ಎವರೆಸ್ಟ್ ಮತ್ತು LG ಇಂಗಿನ ಪುಡಿ ಮಾರಾಟಕ್ಕೆ ತಡೆ!