ಕನೌಜ್:ವಿಚಿತ್ರ ಘಟನೆ ಕನೌಜ್‌ನಿಂದ ವರದಿಯಾಗಿದೆ, ರಾಜ್ ಸಕ್ಸೇನಾ ಎಂಬ ವ್ಯಕ್ತಿ ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಬೆದರಿಕೆ ಹಾಕಿದ್ದಾನೆ. ಕಾರಣ – ಪತ್ನಿಯ ಇನ್ನೊಬ್ಬ ತಂಗಿಯನ್ನು ಮದುವೆ ಮಾಡಿಕೊಳ್ಳಬೇಕು ಎಂಬ ಅವನ ಬೇಡಿಕೆ.
ಘಟನೆ ಹೀಗಿದೆ: 2021ರಲ್ಲಿ ರಾಜ್ ಸಕ್ಸೇನಾ ತನ್ನ ಮೊದಲ ಪತ್ನಿಯನ್ನು ಮದುವೆಯಾಗಿದ್ದ. ಆದರೆ ಮದುವೆಯಾಗಿ ಒಂದು ವರ್ಷವಲ್ಲದೆ ಆಕೆ ಅನಾರೋಗ್ಯದಿಂದ ಸಾವನ್ನಪ್ಪಿದಳು. ಪತ್ನಿಯ ನಿಧನದ ನಂತರ, ಅವನು ಆಕೆಯ ತಂಗಿಯ ಜೊತೆ ಮದುವೆಯಾಗಿದನು. ಈ ದಂಪತಿಗೆ ಈಗ ಎರಡು ವರ್ಷ.
ಆದರೆ ಇತ್ತೀಚೆಗೆ ರಾಜ್ ತನ್ನ ಮುದ್ದಾದ ಪತ್ನಿಯ ಮತ್ತೊಬ್ಬ ತಂಗಿಯನ್ನು ಮದುವೆಯಾಗಬೇಕು ಎಂದು ಹೇಳಿದ್ದು, ಮನೆಯವರ ವಿರೋಧ ಎದುರಾಗಿದೆ. ಈ ಬೇಡಿಕೆಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ, ರಾಜ್ ಗುರುವಾರ ಬೆಳಿಗ್ಗೆ ಒಂದು ಕರೆಂಟ್ ಟವರ್ ಏರಿ ಆತ್ಮಹತ್ಯೆಗೆ ಧಮಕಿ ನೀಡಿದ್ದಾನೆ.
‘ನಾದಿನಿಯನ್ನು ಮದುವೆ ಮಾಡಿಸುತ್ತೀರಾ ಇಲ್ಲವೇ ನಾನು ಜಂಪ್ ಮಾಡ್ತೀನಿ’ ಎಂದು ಬೆದರಿಕೆ:
ಬಾಲಿವುಡ್ ಶೋಲೆ ಸಿನಿಮಾ ಶೈಲಿಯಲ್ಲಿ ರಾಜ್ ಟವರ್ ಮೇಲಿಂದಲೇ ಬೊಬ್ಬೆ ಹಾಕುತ್ತಾ “ನಾದಿನಿಯನ್ನು ನನ್ನಿಗೆ ಮದುವೆ ಮಾಡಿಸಿ” ಎಂದು ಕೂಗಿದ್ದಾನೆ. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸತತ 7 ಗಂಟೆಗಳ ಸಾಹಸ ನಂತರ ಅವನನ್ನು ಟವರ್‌ನಿಂದ ಕೆಳಗೆ ಇಳಿಸಲು ಯಶಸ್ವಿಯಾದರು. ಕೊನೆಗೆ ನಾದಿನಿಯೊಂದಿಗೆ ಮದುವೆ ಮಾಡಿಸುತ್ತೇವೆ ಎಂಬ ಭರವಸೆ ನೀಡಿದ ನಂತರ ಮಾತ್ರ ಆತ ಕೆಳಗಿಳಿದ.
ಪ್ರೀತಿಯ ನಾಟಕವೇ ಪಕ್ಕಾ ಸಾಂಡಲ್‌ವುಡ್ ಸೀನ್!
ಟವರ್ ಮೇಲಿನ ಈ ಹೈಡ್ರಾಮಾ ಸ್ಥಳೀಯ ಜನರ ಮೊಬೈಲ್ ಕ್ಯಾಮರಾದಲ್ಲಿ ಸೆರೆಹಿಡಿಯಲ್ಪಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ರಾಜ್ ಸಕ್ಸೇನಾ ತನ್ನ ಮೇಲಿಂದಲೇ ನಾದಿನಿಯೂ ಅವನನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಿದ್ದಾನೆ.




