ರೊನಾಲ್ಡೊವನ್ನು ದಾಖಲೆ ಮುರಿದು, ಹೊಸ ವಿಶ್ವ ದಾಖಲೆ ಬರೆದ ದೀಪಿಕಾ ಪಡುಕೋಣೆ.

ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ. ಅಂದಹಾಗೆ ದೀಪಿಕಾ ಪಡುಕೋಣೆ ಮಾಡಿರುವ ವಿಶ್ವ ದಾಖಲೆ ಏನು? ರೊನಾಲ್ಡೊ ಅನ್ನೂ ಸಹ ನಟಿ ದೀಪಿಕಾ ಹಿಂದಿಕ್ಕಿದ್ದು ಹೇಗೆ?

ದೀಪಿಕಾ ಪಡುಕೋಣೆ ಭಾರತದ ಸ್ಟಾರ್ ನಟಿ. ತಾಯ್ತನಕ್ಕಾಗಿ ಕೆಲ ಸಮಯ ಚಿತ್ರರಂಗದಿಂದ ಬಿಡುವು ಪಡೆದಿದ್ದ ಈ ನಟಿ ಇದೀಗ ಮತ್ತೆ ಚಿತ್ರರಂಗಕ್ಕೆ ರೀ ಎಂಟ್ರಿ ನೀಡುತ್ತಿದ್ದಾರೆ. ಪ್ರಸ್ತುತ ಅವರು ಶಾರುಖ್ ಖಾನ್ ಜೊತೆಗೆ ‘ಕಿಂಗ್’ ಸಿನಿಮಾನಲ್ಲಿ ಹಾಗು ಅದರ ಜೊತೆಗೆ ಅಟ್ಲಿ ನಿರ್ದೇಶಿಸಿ ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಹೊಸ ಸಿನಿಮಾನದಲ್ಲಿಯೂ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದೆಲ್ಲದರ ಜೊತೆಗೆ ದೀಪಿಕಾ ಪಡುಕೋಣೆ ಹೊಸ ವಿಶ್ವ ದಾಖಲೆಯನ್ನು ಸೃಷ್ಟಿಸಿದ್ದಾರೆ. ಆ ಮೂಲಕ ತಾವು ಭಾರತ ಮಾತ್ರವಲ್ಲ ವಿಶ್ವದ ಸ್ಟಾರ್ ನಟಿಯರಲ್ಲಿ ಒಬ್ಬರು ಎಂದು ಸಾಬೀತು ಮಾಡಿದ್ದಾರೆ.

https://youtu.be/S-u-vqsfrpQ?si=AoR6HzTymv1aU1Zuನಾನು ದರ್ಶನ್ ಸರ್ ಗೆ ಸಪೋರ್ಟ್ ಮಾಡೋದು!

ದೀಪಿಕಾ ಪಡುಕೋಣೆ ಸಾಮಾಜಿಕ ಜಾಲತಾಣದಲ್ಲಿ ಆಕ್ಟಿವ್ ಆಗಿದ್ದರೆ. ಇನ್​ಸ್ಟಾಗ್ರಾಂನಲ್ಲಿ ಸುಮಾರು ಎಂಟು ಕೋಟಿ ಫಾಲೋವರ್​ಗಳನ್ನು ದೀಪಿಕಾ ಪಡುಕೋಣೆ ಹೊಂದಿದ್ದಾರೆ. ತಮ್ಮ ಚಿತ್ರಗಳು, ಫೋಟೊಶೂಟ್, ಸಿನಿಮಾ ಮಾಹಿತಿ ಮತ್ತು ಜಾಹೀರಾತುಗಳನ್ನು ಸಹ ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ನಟಿ ದೀಪಿಕಾ ಪಡುಕೋಣೆ ಹಂಚಿಕೊಂಡಿದ್ದ ರೀಲ್ ಒಂದು ಈಗ ವಿಶ್ವದಲ್ಲೇ ಅತಿ ಹೆಚ್ಚು ವೀಕ್ಷಣೆಗೆ ಒಳಪಟ್ಟ ರೀಲ್ಸ್​ ಎನಿಸಿಕೊಂಡಿದೆ.

ಹಿಲ್ಟನ್ ಹೋಟೆಲಿನ ರಾಯಭಾರಿ ಆಗಿರುವ ದೀಪಿಕಾ ಪಡುಕೋಣೆ ಇತ್ತೀಚೆಗಷ್ಟೆ ‘ಹಿಲ್ಟನ್’ನ ಜಾಹೀರಾತಿನ ವಿಡಿಯೋ ಒಂದನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಜೂನ್ 9 ರಂದು ಜಾಹೀರಾತನ್ನು ದೀಪಿಕಾ ಪಡುಕೋಣೆ ಶೇರ್ ಮಾಡಿದ್ದರು. ಆ ವಿಡಿಯೋ ಇದೀಗ 1.9 ಬಿಲಿಯನ್ ವೀವ್ಸ್ ಕಂಡಿದೆ. ಅಂದರೆ ಬರೋಬ್ಬರಿ 190 ಕೋಟಿ. ಇನ್​ಸ್ಟಾಗ್ರಾಂನಲ್ಲಿ ಇಷ್ಟು ದೊಡ್ಡ ಸಂಖ್ಯೆಯಲ್ಲಿ ವೀಕ್ಷಣೆಗೆ ಒಳಪಟ್ಟ ವಿಡಿಯೋ ಇನ್ನೊಂದು ಇಲ್ಲ.

ಈ ಹಿಂದೆ ಹಾರ್ದಿಕ್ ಪಾಂಡ್ಯಾರ ರೀಲ್ ಒಂದು 1.6 ಬಿಲಿಯನ್ ವೀಕ್ಷಣೆ ಕಂಡಿತ್ತು.ಹಾಗೆ ವಿಶ್ವ ವಿಖ್ಯಾತ ಫುಟ್​ಬಾಲ್ ಆಟಗಾರ ಕ್ರಿಸ್ಟಿಯಾನೊ ರೊನಾಲ್ಡೊ ಅವರ ರೀಲ್ಸ್​ ಒಂದು 1.5 ಬಿಲಿಯನ್​ ವೀಕ್ಷಣೆ ಕಂಡಿತ್ತು. ಆದರೆ ದೀಪಿಕಾ ಪಡುಕೋಣೆಯ ರೀಲ್ಸ್ ಎಲ್ಲ ದಾಖಲೆಗಳನ್ನು ಮುರಿದಿದೆ. ಆಗಸ್ಟ್ 4ಕ್ಕೆ ದೀಪಿಕಾ ಪಡುಕೋಣೆಯ ರೀಲ್ಸ್ 190 ಕೋಟಿ ವೀವ್ಸ್ ಪಡೆದುಕೊಂಡಿತ್ತು. ಸುಮಾರು 11 ಲಕ್ಷ ಲೈಕ್ಸ್​ಗಳನ್ನು ಸಹ ಈ ವಿಡಿಯೋ ಪಡೆದುಕೊಂಡಿದೆ.

Related Posts

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ ತತ್ತರಿಸಿರುವ ಸಾಮಾನ್ಯ ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್ ನೀಡಿವೆ. ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಯುದ್ಧದ ಬಿಸಿ ಇದೀಗ ನೇರವಾಗಿ ಭಾರತೀಯರ ಜೇಬಿಗೆ ತಟ್ಟಿದೆ. ನವದೆಹಲಿ: ಹಣದುಬ್ಬರ ಹಾಗೂ ಬೆಲೆ ಏರಿಕೆಯಿಂದ…

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

(ಕೆಎಂಶಿ)-ಉನ್ನತ ‘ಶಿಕ್ಷಣ ವಲಯದಲ್ಲಿ ಸಾಮಾಜಿಕ ನ್ಯಾಯ ಕಲ್ಪಿ ಸಲು, ರಾಜ್ಯದ ಎಲ್ಲ ಸರ್ಕಾರಿ, ಖಾಸಗಿ ಮತ್ತು ಡೀಮ್ಸ್ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರಿತ ದೌರ್ಜನ್ಯ ತಡೆಯಲು ರೋಹಿತ್ ವೇಮುಲ ಕಾಯಿದೆ ಜಾರಿಗೆ ತರಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ ನಾಯಕತ್ವ ಗುಣ…

You Missed

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಜನತೆಗೆ ತೈಲ ಕಂಪನಿಗಳು ಮತ್ತೊಂದು ಬಿಗ್ ಶಾಕ್!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ಸ್ಟೂಡೆಂಟ್ ಎಲೆಕ್ಷನ್ ಗೆ ಅಸ್ತು ಎಂದ ಸಿಎಂ!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ರಾಧಿಕಾ ಪಂಡಿತ್ ಜೊತೆ ಹೊಸ ಲುಕ್‌ನಲ್ಲಿ ‘ರಾಕಿಂಗ್’ ಸ್ಟಾರ್!

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಕನ್ನಡ ಚಿತ್ರರಂಗದ ವ್ಯಕ್ತಿಯೊಬ್ಬರ ನಿವಾಸ ಮ್ಯೂಸಿಯಂ ಆಗಲಿದೆ

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಸಚಿನ್ ತೆಂಡೂಲ್ಕರ್ ಸೊಸೆ ಎಷ್ಟು ಶ್ರೀಮಂತೆ ಗೊತ್ತಾ?

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!

ಬೆಂಗಳೂರಿನಲ್ಲಿ ಅಕ್ರಮ ವಲಸಿಗರ ಮೇಲೆ ಪೊಲೀಸ್ ಕಣ್ಣು!