ಮೈಸೂರಿನ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಉಪ ಲೋಕಾಯುಕ್ತರ ಭೇಟಿ.!

ಮೈಸೂರು : ಇಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಕೆಸರೆ ನೀರು ಸಂಸ್ಕರಣಾ ಘಟಕ ಹಾಗೂ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮೊದಲು ಕೆಸರೆ ನೀರು ಸಂಸ್ಕರಣಾ ಘಟಕಕ್ಕೆ ಭೇಟಿ ನೀಡಿದ ಉಪ ಲೋಕಾಯುಕ್ತ ಫಣೀಂದ್ರ ನೀರು ಸಂಸ್ಕರಣಾ ಘಟಕದಲ್ಲಿ ಅಳವಡಿಸಿಕೊಂಡಿರುವ ವಿಧಾನ ಹಾಗೂ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ನಂತರ ಇಲ್ಲಿರುವ ಪ್ರದೇಶದಲ್ಲಿ ಗಿಡ ಗಂಟೆಗಳನ್ನು ತೆರವುಗೊಳಿಸಿ ಹೂವಿನ ಹಾಗೂ ಉತ್ತಮ ಗಿಡಗಳನ್ನು ಹಾಕಿ ನಿರ್ವಹಣೆ ಮಾಡುವಂತೆ ಅಧಿಕಾರಿಗಳಿಗೆ ತಿಳಿಸಿದರು.

ಪ್ರತಿ ಹಳ್ಳಿಗಳ ಕಡೆ ಸ್ವಚ್ಚತೆ ಆದ್ಯತೆ ನೀಡಬೇಕು.

ಸ್ವಚ್ಚತೆಯ ಬಗ್ಗೆ ಜನರಲ್ಲಿಯೂ ಜಾಗೃತಿ ಮೂಡಿಸಬೇಕು. ಒಳ ಕಸ ಹಾಗೂ ಹಸಿ ಕಸದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿ ಅದರಂತೆ ಸ್ವಚ್ಚತೆಗೆ ಸಾರ್ವಜನಿಕರಿಂದಲೂ ಅಗತ್ಯ ಸಹಕಾರ ನೀಡಬೇಕು ಎಂದು ತಿಳಿಸಿದರು.

https://www.youtube.com/live/ANuWkKgAP5Y?si=TU8eCq_vAAfSy5U ಸೆಲೆಬ್ರಿಟಿಗಳು, ಗಣ್ಯರು, ರಾಜಕಾರಣಿಗಳಾ ತವರು ಮನೆಯಾದ ಗೌಡಗೆರೆ

ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿ ನಂತರ ಉಪ ಲೋಕಾಯುಕ್ತರು ಕೆಸರೆ ಘನ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮದ ಜನರು ಮನವಿಯ ಮೇರೆಗೆ ವೈಜ್ಞಾನಿಕ ರೀತಿಯಲ್ಲಿ ತಜ್ಞರಿಂದ ತಪಾಸಣೆ ಮಾಡಿಸಿ 5 ಕಿ.ಮೀ ಒಳಗೆ ಯಾವುದಾದರೂ ಮನೆಯಲ್ಲಿನ ಜನರಿಗೆ ಆರೋಗ್ಯ ಸಮಸ್ಯೆ ಹಾಗೂ ಹೋಟೆಲ್ ಗಳಿಗೆ ಜನರಿಗೆ ತೊಂದರೆ ಆಗಿದ್ರೆ ಜಿಲ್ಲಾಧಿಕಾರಿಗಳು ಪರಿಶೀಲನೆ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಘನ ತ್ಯಾಜ್ಯ ನಿರ್ವಹಣಾ ಘಟಕದಿಂದ 500 ಮೀ ಒಳಗೆ ನಿವೇಶನಗಳು ಇದ್ದರೆ ರದ್ದು ಪಡಿಸುವ ಕೆಲಸ ಮಾಡಲಾಗುವುದು. ಇದರಿಂದ ಮಕ್ಕಳಿಗೆ ಹಾಗೂ ಜನರಿಗೆ ವಾಸನೆಯಿಂದ ಆರೋಗ್ಯದಲ್ಲಿ ಸಮಸ್ಯೆ ಆಗುವ ಬಗ್ಗೆ ಪರಿಶೀಲನೆ ಮಾಡಿಸಿ.. ಮುನ್ನೇಚರಿಕೆ ಕ್ರಮವಾಗಿ ಜನರಿಗೆ ಘಟಕದಿಂದ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಾದ ಜಿ.ಲಕ್ಷ್ಮೀಕಾಂತ ರೆಡ್ಡಿ, ಜಿಪಂ ಸಿಇಒ ಎಸ್.ಯುಕೇಶ್ ಕುಮಾರ್, ಮಹಾನಗರ ಪಾಲಿಕೆ ಆಯುಕ್ತರಾದ ಶೇಕ್ ತನ್ವಿರ್ ಆಸಿಫ್, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಆಸಿಫ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!