ಕಾಡಿನಲ್ಲಿ ವಾಸಿಸುವ ಪ್ರಾಣಿಗಳ ಜೀವನ ಅಷ್ಟು ಸುಲಭವಲ್ಲ, ಯಾವಾಗ ಅಪಾಯ ಬಂದೊದಗುತ್ತದೆ ಎಂದು ಹೇಳಲಾಗದು. ಇದೀಗ ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆಯೊಂದು ತನ್ನನ್ನು ತಾನು ಹೇಗೆ ರಕ್ಷಿಸಿಕೊಂಡಿತು ಅಂತ ಈ ಸ್ಟೋರಿ ಓದಿ. ಜೀವ ಉಳಿಸಿಕೊಳ್ಳಲು ಹರಸಾಹಸ ಪಟ್ಟ ಈ ಆನೆಯೂ ಬದುಕಿ ಉಳಿದದ್ದು ಹೇಗೆ ಎನ್ನುವುದನ್ನು ನೀವಿಲ್ಲಿ ಓದಿ.
ಬದುಕು ಹಾಗೆ, ಯಾವಾಗ ಕಷ್ಟಗಳು ಬರುತ್ತದೆ ಎಂದು ಹೇಳಲಾಗದು. ಏನೇ ಬರಲಿ ಎದ್ದು ನಿಂತು ಮುನ್ನುಗ್ಗುವೆ ಎನ್ನುವ ಛಲವಿದ್ದರೆ ಸೋಲುವ ಮಾತೇ ಇಲ್ಲ. ಪ್ರವಾಹದ ನಡುವೆ ಸಿಲುಕಿಕೊಂಡ ಆನೆಯೊಂದು ತನ್ನನ್ನು ತಾನೇ ರಕ್ಷಿಸಿಕೊಂಡಿದೆ. ಹೌದು, ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡ ಆನೆಯೊಂದು ಅಪಾಯದಿಂದ ಪಾರಾಗಿದೆ. ಈ ಘಟನೆಯೂ ಛತ್ತೀಸ್ಗಢದ ಸುರ್ಗಜಾ ಜಿಲ್ಲೆಯಲ್ಲಿ ಈ ನಡೆದಿದೆ. ಎಡೆ ಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ನದಿಗಳು ಉಕ್ಕಿ ಹರಿಯುತ್ತಿದೆ. ಲುಂಡ್ರಾದ ಅಸ್ಕಲಾದ ಮಹೋರಾ ನದಿಯಲ್ಲಿ ಸಿಲುಕಿಕೊಂಡಿದ್ದ ಆನೆಯೂ ಕೊಚ್ಚಿಕೊಂಡು ಹೋಗುತ್ತಿರುವ ದೃಶ್ಯವೂ ವೈರಲ್ ಆಗಿದೆ. ಕೊನೆಗೆ ಛಲಬಿಡದೇ ಹೇಗೆ ಈ ಆನೆಯೂ ಅಪಾಯದಿಂದ ಪಾರಾಯಿತು ಎನ್ನುವುದಕ್ಕೆ ಈ ವಿಡಿಯೋನೇ ಸಾಕ್ಷಿ.
https://youtu.be/zwcpSZBq_cA?si=xjHqnCSCny9Q-khmIVF Pregnancy ಹೆಣ್ಣು ಮಕ್ಕಳಿಗೆ ದಾರಿದೀಪ! ನಟಿ ಭಾವನಾ ರಾಮಣ್ಣ ಪರ ಧ್ವನಿ ಎತ್ತಿದ ವಕೀಲೆ!
Suraj Vloger ಹೆಸರಿನ ಯೂಟ್ಯೂಬ್ ಖಾತೆಯಲ್ಲಿ ಶೇರ್ ಮಾಡಲಾದ ಈ ವಿಡಿಯೋದಲ್ಲಿ ಆನೆಯೊಂದು ಉಕ್ಕಿ ಹರಿಯುತ್ತಿರುವ ನದಿಯಲ್ಲಿ ಸಿಲುಕಿಕೊಂಡಿರುವುದನ್ನು ಕಾಣಬಹುದು. ನೋಡನೋಡುತ್ತಿದ್ದಂತೆ ಪ್ರವಾಹದಲ್ಲಿ ಆನೆಯೂ ಕೊಚ್ಚಿ ಹೋಗುತ್ತಿದೆ. ನೀರಿನ ತೀವ್ರತೆಯೂ ಆನೆಯನ್ನು ನದಿಯ ಮಧ್ಯ ಎಳೆಯಲ್ಪಟ್ಟಿದ್ದರೂ ಅಲ್ಲೇ ನಿಂತಿದ್ದ ಸ್ಥಳೀಯರು ಜೋರಾಗಿ ಸದ್ದು ಮಾಡುವ ಮೂಲಕ ಆನೆಯನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.
ಸ್ಥಳೀಯರು ಜೋರಾಗಿ ಕಿರುಚುವುದನ್ನು ಕಂಡ ಆನೆಯೂ ಭಯಗೊಂಡಿದೆ. ಕೊನೆಗೆ ಉಕ್ಕಿ ಹರಿಯುತ್ತಿರುವ ನೀರಿನ ಮಧ್ಯೆ ಸಿಲುಕಿದ್ದ ಆನೆಯೂ ಓಡಿ ಹೋಗುವ ಮೂಲಕ ಅಪಾಯದಿಂದ ಪಾರಾಗಿದೆ. ಜೀವವನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿರುವ ಆನೆಯನ್ನು ಕಣ್ಣಾರೆ ಕಂಡ ಸ್ಥಳೀಯ ನಿವಾಸಿಯೊಬ್ಬರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.
ಈ ವಿಡಿಯೋ ನೋಡಿದ ಬಳಕೆದಾರರು, ಜೀವ ಉಳಿಸಕೊಳ್ಳಬೇಕು ಎಂದು ಒದ್ದಾಡುತ್ತಿರುವುದನ್ನು ಕಂಡು ನಿಜಕ್ಕೂ ಬೇಸರವಾಯಿತು ಎಂದಿದ್ದಾರೆ. ಇನ್ನೊಬ್ಬರು, ಸ್ಥಳೀಯರು ಆನೆಯನ್ನು ಹೆದರಿಸುವ ಮೂಲಕ ಅದರ ಜೀವ ಉಳಿಸಲು ನೆರವಾಗಿದ್ದೀರಿ ಧನ್ಯವಾದಗಳು ಎಂದು ಹೇಳಿದ್ದಾರೆ.





