ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ ರವಿ ಸಂಕ್ರಾಂತಿ ದೂರವಾಯ್ತು, ದೀಪಾವಳಿ ಹಬ್ಬದೊಳಗೆ ಸರ್ಕಾರ ಪತನ ಖಚಿತ, ಹೊಸ ಸಿಎಂ ಹೊಸ ಸರ್ಕಾರದ ಬಗ್ಗೆ ಕಾಲವೇ ನಿರ್ಣಯ ಮಾಡಲಿದೆ. ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಮುಹೂರ್ತ ಫಿಕ್ಸ್ ಮಾಡಿದೆ . ದೀಪಾವಳಿ ಹಬ್ಬದೊಳಗೆ ಸರ್ಕಾರ ಪತನವಾಗಲಿದೆ.

ಸಿದ್ದರಾಮಯ್ಯ ಹುದ್ದೆಯಿಂದ ಕೆಳಗಿಳಿಯೋದು ಫಿಕ್ಸ್. ರಾಜ್ಯ ಸರ್ಕಾರದಲ್ಲಿ ಹಗರಣ ನಡೆದಿರೋದು ಸ್ಪಷ್ಟ. ಇದೊಂದು ಭ್ರಷ್ಟಾಚಾರ ತುಂಬಿರುವ ಸರ್ಕಾರ ಕಾಂಗ್ರೆಸ್ ಸರ್ಕಾರದಲ್ಲಿ ಹಗರಣಗಳದ್ದೇ ಸುದ್ದಿ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಭ್ರಷ್ಟಾಚಾರ ಮುಚ್ಚಿ ಹಾಕಲು ಸಾಧ್ಯವಿಲ್ಲ. ಭ್ರಷ್ಟರು ಬಹಳ ದಿನ ಅಧಿಕಾರದಲ್ಲಿರಬಾರದು ಎಂದು ಸಿಟಿ ರವಿ ತಿಳಿಸಿದ್ದಾರೆ.





