ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್. ಮೊದಲ ಬಾರಿಗೆ ಕಣ್ಣೀರು ಹಾಕಿದ ಕೋಚ್​ ಗಂಭೀರ್​ ​!

ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್​ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್​ನಲ್ಲಿದ್ದ ಹೆಡ್​ ಕೋಚ್​ ಗೌತಮ್ ಗಂಭೀರ್ ಅಗ್ರೆಸ್ಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು.

ಟೀಮ್ ಇಂಡಿಯಾದ ಹೆಡ್​ ಕೋಚ್​ ಗೌತಮ್ ಗಂಭೀರ್ ಯಾವಾಗಲೂ ನಗು ಮುಖದಿಂದ ಇರುವವರೇ ಅಲ್ಲ. ಯಾವಾಗಲೂ ಗಂಭೀರವಾದ ಮುಖ ಇಟ್ಟುಕೊಂಡು ತಂಡದಲ್ಲಿ ಕೋಚ್​ ಬೆರೆಯುತ್ತಿದ್ದರು. ಆದರೆ ನಿನ್ನೆ ಟೆಸ್ಟ್​ ಪಂದ್ಯವನ್ನು ಟೀಮ್ ಇಂಡಿಯಾ ಗೆಲ್ಲುತ್ತಿದ್ದಂತೆ ಗೌತಮ್ ಗಂಭೀರ್ ಅವರು ಸೆಲೆಬ್ರೆಷನ್ ಮಾಡಿರೋದು ಎಲ್ಲರಿಗೂ ಅಚ್ಚರಿ ಮೂಡಿಸಿದೆ. ಅವರಲ್ಲಿ ಅಷ್ಟೊಂದು ಖುಷಿಯನ್ನು ಇದೇ ಮೊದಲ ಬಾರಿಗೆ ಸಾಕಷ್ಟು ಕ್ರಿಕೆಟ್​ ಅಭಿಮಾನಿಗಳು ನೋಡಿದ್ದಾರೆ ಎನ್ನಬಹುದು.

https://www.goodnews24x7.com/kannada-veteran-actor-honnavalli-krishna-also-affected-by-the-transport-workers-strike-bus-bandh-is-hot/ ಕನ್ನಡ ಹಿರಿಯ ನಟ ಹೊನ್ನವಳ್ಳಿ ಕೃಷ್ಣಗೂ ತಟ್ಟಿದೆ ಸಾರಿಗೆ ನೌಕರರ ಮುಷ್ಕರದ ಬಸ್​ ಬಂದ್​ ಬಿಸಿ!

ಲಂಡನ್‌ನಲ್ಲಿರುವ ಕೆನ್ನಿಂಗ್ಟನ್‌ನ ಓವಲ್ ಸ್ಟೇಡಿಯಂನಲ್ಲಿ ನಡೆದ 5ನೇ ಟೆಸ್ಟ್​ ಪಂದ್ಯದ ಕೊನೆ ದಿನದಲ್ಲಿ ಟೀಮ್ ಇಂಡಿಯಾ ಕೇವಲ 6 ರನ್​ಗಳಿಂದ ಜಯಭೇರಿ ಬಾರಿಸಿತು. ಮೊಹಮ್ಮದ್ ಸಿರಾಜ್ ಕೊನೆ ವಿಕೆಟ್​ ಕಬಳಿಸುತ್ತಿದ್ದಂತೆ ಡ್ರೆಸಿಂಗ್ ರೂಮ್​ನಲ್ಲಿದ್ದ ಹೆಡ್​ ಕೋಚ್​ ಗೌತಮ್ ಗಂಭೀರ್ ಅಗ್ರೆಸ್ಸಿವ್​ ಆಗಿ ಸಂಭ್ರಮಾಚರಣೆ ಮಾಡಿದರು. ಈ ವಿಡಿಯೋವನ್ನು ಬಿಸಿಸಿಐ ತನ್ನ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದೆ.

ಮೈದಾನದಲ್ಲಿ ಗಿಲ್ ಪಡೆ ಜಯ ಸಾಧಿಸುತ್ತಿದ್ದಂತೆ ಡ್ರೆಸ್ಸಿಂಗ್ ರೂಮ್​ನಲ್ಲಿ ಗೌತಮ್ ಗಂಭೀರ್ ಸೆಲೆಬ್ರೆಷನ್ ಮಾಡುತ್ತ ಮಾರ್ನ್​ ಮಾರ್ಕೆಲ್​ ಅವರ ಮೇಲೆ ಜಂಪ್ ಮಾಡಿ ಖುಷಿ ಪಟ್ಟರು. ಅಲ್ಲಿದ್ದ ಎಲ್ಲರನ್ನು ತಬ್ಬಿಕೊಂಡು, ಕೈಕುಲುಕಿ ಸಂತಸಪಟ್ಟರು. ಇದೇ ವೇಳೆ ಗೌತಮ್ ಗಂಭೀರ್ ಕಣ್ಣಿನಿಂದ ನೀರು ಕೂಡ ಬಂತು. ತುಂಬಾ ಭಾವನಾತ್ಮಕರಾಗಿದ್ದ ಗಂಭೀರ್ ಅತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಕೋಚ್​ ಈ ರೀತಿ ಕಣ್ಣೀರು ಹಾಕಿದ್ದು ಇದೇ ಮೊದಲ ಬಾರಿ ಆಗಿದೆ.

ಅಂತಿಮ ಟೆಸ್ಟ್​ನಲ್ಲಿ ಜಯಗಳಿಸಿದ ಬಳಿಕ ​​ಗೌತಮ್​ ಗಂಭೀರ್​, ಇಂಗ್ಲೆಂಡ್​ ಹೆಡ್​ಕೋಚ್​ ಬ್ರೆಂಡನ್​ ಮೆಕಲಮ್​ ಪರಸ್ಪರ ಅಭಿನಂದನೆ ಸಲ್ಲಿಸಿದ್ದಾರೆ. ಗೆಲುವಿನ ಬಳಿಕ ಡ್ರೆಸ್ಸಿಂಗ್​ರೂಮ್​ನಿಂದ ನೇರವಾಗಿ ಮೆಕಲಮ್​ ಬಳಿ ತೆರಳಿರೋ ಗಂಭೀರ್​ ಹಸ್ತಲಾಘವ ನೀಡಿದ್ದಾರೆ. ಆ ಬಳಿಕ ಇಬ್ಬರೂ ತಬ್ಬಿಕೊಂಡಿದ್ದಾರೆ. ಹೆಡ್​​ಕೋಚ್​ಗಳ ಸಮಾಗಮದ ವಿಡಿಯೋ ಇಂಟರ್​ನೆಟ್​ನಲ್ಲಿ ವೈರಲ್​ ಆಗಿದೆ.

Related Posts

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

  ಹೃದಯವೇದ್ರಾವಕ ಘಟನೆಯೊಂದು ಹುಣಸೂರಿನಲ್ಲಿ ನಡೆದಿದೆ ಪತ್ನಿ ಮಕ್ಕಳನ್ನು ಹತ್ಯೆಗೈದು ಪತಿ ನೇಣಿಗೆ ಶರಣಾಗಿರುವ ಪ್ರಕರಣ ಹುಣಸೂರು ನಗರದ ನ್ಯೂ ಮಾರುತಿ ಬಡಾವಣೆಯಲ್ಲಿ ಘಟನೆ ನ್ಯೂ ಮಾರುತಿ ಬಡಾವಣೆಯ ಹರೀಶ್ 49, ಪತ್ನಿ ನಿಶ್ಚಿತ 36 ಮಕ್ಕಳಾದ ನೆಕ್ಸಾ 13 ರಕ್ಷಾ…

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

  ಒಡಿಶಾದ ಶಿಕ್ಷಾ ಓ ಅನುಸಂಧಾನ ವಿಶ್ವವಿದ್ಯಾಲಯವು ಕರ್ನಾಟಕದ ಹೆಮ್ಮೆಯ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಸನ್ಮಾನಿಸಿದೆ. ನ್ಯಾಯಾಂಗ ಕ್ಷೇತ್ರದಲ್ಲಿ ಸಲ್ಲಿಸಿದ ವಿಶಿಷ್ಟ ಸೇವೆ, ನ್ಯಾಯದ ಪರವಾದ ಬದ್ಧತೆ, ವಿದ್ವತ್ತು ಹಾಗೂ ಮಾನವೀಯ ಮೌಲ್ಯಗಳ…

You Missed

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ಪತ್ನಿ ಮಕ್ಕಳನ್ನ ಹ* ಗೈದು ಪತಿ ನೇಣಿಗೆ ಶರಣು !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿಗೆ ಗೌರವ ಡಾಕ್ಟರೇಟ್ !

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಮಾಜಿ ಪ್ರಧಾನಿ ಹೆಚ್​​.ಡಿ. ದೇವೇಗೌಡರ ಪತ್ನಿ ಚನ್ನಮ್ಮ ನಿಧನ

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಚುಂಚನಗಿರಿ ಮಠದ 120 ಕೋಟಿ ಆಸ್ತಿ ಲೂಟಿ ಯತ್ನ, 11 ಜನ ಬಂಧನ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಒಡಿಶಾದ ಪುರಿಯಲ್ಲಿ ಇಂದಿನಿಂದ ಭವ್ಯ ‘ಜಗನ್ನಾಥ ರಥಯಾತ್ರೆ’ ಆರಂಭ !

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!

ಟೀಮ್ ಇಂಡಿಯಾದಲ್ಲಿ ಈಗಲೂ ಕೊಹ್ಲಿಯೇ ‘ಕಿಂಗ್’..!