ಅಶ್ವಿನಿ ಕಣ್ಣಲ್ಲಿ ನೀರು ತರಿಸಿದ ಗಿಲ್ಲಿ, ‘ನಾನು ಬದುಕ್ತಾ ಇರೋದೇ ಮರ್ಯಾದೆಗೋಸ್ಕರ.’

ಬಿಗ್​ಬಾಸ್​​ನ ಇವತ್ತಿನ ಎಪಿಸೋಡ್​​ನಲ್ಲಿ ಅಶ್ವಿನಿ ಗೌಡ ಮತ್ತು ಗಿಲ್ಲಿ ಮಧ್ಯೆ ಘನಘೋರ ಮಾತಿನ ಯುದ್ಧ ನಡೆದಿದ್ದು, ಕೊನೆಯಲ್ಲಿ ಅಶ್ವಿನಿ ಗೌಡ ಕಣ್ಣೀರಿಟ್ಟಿದ್ದಾರೆ.

ಇಬ್ಬರ ಮಧ್ಯೆ ಆಗಿದ್ದೇನು?
ಇಂದು ರಾತ್ರಿ ಬಿಗ್​​ಬಾಸ್ ಮನೆಯಲ್ಲಿ ಏನು ಆಗಿದೆ ಅನ್ನೋದಕ್ಕೆ ಸ್ಪಷ್ಟ ಚಿತ್ರಣ ಸಿಗಲಿದೆ. ಗಿಲ್ಲಿ ಮತ್ತು ಅಶ್ವಿನಿ ಗೌಡ ಮಧ್ಯೆ ಗಲಾಟೆ ಆಗಿರೋದಂತೂ ಸತ್ಯ. ಕಲರ್ಸ್ ಕನ್ನಡ ಬೆಳಗ್ಗೆ ಪ್ರೊಮೋ ಶೇರ್ ಮಾಡಿದೆ. ಅದರಲ್ಲಿ ಗಿಲ್ಲಿ ಹಾಗೂ ಅಶ್ವಿನಿ ಗೌಡ ಗೇಮ್​ನ ಉಸ್ತುವಾರಿ ನೀಡಲಾಗಿದೆ. ಈ ವೇಳೆ ಸ್ಪರ್ಧಿಗಳ ನಡುವೆ ಗೇಮ್ ಆಡಿಸುವ ವಿಚಾರಕ್ಕೆ ಗಲಾಟೆ ಆಗಿದೆ. ಒಬ್ಬರಿಗೊಬ್ಬರು ಕರೆಕ್ಟ್ ಆಗಿ ಉಸ್ತುವಾರಿ ಮಾಡುವಂತೆ ಕಿರುಚಾಡಿದ್ದಾರೆ. ಆಗ ಗಿಲ್ಲಿ, ನೀನು ಕರೆಕ್ಟ್ ಆಗಿ ಮಾಡು ಎಂದಿದ್ದಾರೆ. ಅಷ್ಟಕ್ಕೆ ರೊಚ್ಚಿಗೇಳುವ ಅಶ್ವಿನಿ, ನೀನ್ಯಾರು ಅಂತಾ ಹೇಳೋಕೆ ನೀನ್ಯಾವನೋ ಎಂದು ಕೂಗಾಡಿದ್ದಾರೆ. ಆಗ ಇಬ್ಬರ ಮಧ್ಯೆ ಮಾತಿನ ಯುದ್ಧ ಜೋರಾಗಿ ನಡೆದಿದೆ. ಮಾತಿನ ಮಧ್ಯೆ ನೀನ್ಯಾವನೋ, ಯೋಗ್ಯತೆ ಎಂಬ ಪದಗಳೆಲ್ಲ ತೂರಿಕೊಂಡು ಬಂದಿವೆ. ಇದೇ ಗಲಾಟೆಯಲ್ಲಿ ಅಶ್ವಿನಿಗೆ ಗಿಲ್ಲಿ ನೋವು ತರುವ ರೀತಿಯಲ್ಲಿ ಮಾತನ್ನಾಡಿದಂತೆ ಕಾಣ್ತಿದೆ. ಗಲಾಟೆ ಮುಗಿದ ಬಳಿಕ ಧ್ರುವಂತ್, ಜಾಹ್ನವಿ ಹಾಗೂ ಧನುಷ್ ಜೊತೆ ಅಶ್ವಿನಿ ನೋವು ಹಂಚಿಕೊಂಡಿದ್ದಾರೆ. ಒಬ್ಬ ಕಾಮಿಡಿ ನಟ ಅಂದಮಾತ್ರಕ್ಕೆ ಏನು ಮಾತಾಡಿದರೂ ಓಕೆನಾ? ಒಬ್ಬರನ್ನ ತೇಜೋವಧೆ ಮಾಡೋದು ಎಷ್ಟು ಸರಿ? ಅದೆಲ್ಲ ಮಾತನ್ನಾಡೋಕೆ ಆತ ಯಾರು? ಎಂದು ಬೇಸರ ಹೊರ ಹಾಕಿದ್ದಾರೆ.ಗಿಲ್ಲಿ ಹೇಳಿದ್ದೇನು..?
ಗಾರ್ಡನ್ ಏರಿಯಾದಲ್ಲಿ ಅಶ್ವಿನಿ, ಜಾಹ್ನವಿ ಹಾಗೂ ಧ್ರುವಂತ್ ಮತ್ತು ರಾಶಿಕಾ ಒಂದು ಕಡೆ ಕೂತ್ಕೊಂಡು ಗಲಾಟೆ ವಿಚಾರವನ್ನು ಚರ್ಚೆ ಮಾಡ್ತಿರುತ್ತಾರೆ. ಅವರಿಗೆ ಕೇಳುವ ರೀತಿಯಲ್ಲಿ ಜೋರಾಗಿ.. ಎಲ್ಲರೂ ವೃದ್ಧಾಪ್ಯದವರೇ ಸೇರಿ ಹೋಗ್ತಾರೆ ಎಂದು ಕಷ್ಟಪಟ್ಟು ಕಳುಹಿಸುತ್ತ ಇದ್ದಾರೆ ಎಂದಿದ್ದಾರೆ. ವೃದ್ಧರು ಅಂತಾ ಹೇಳಿರೋದು ಅಶ್ವಿನಿಗೆ ಹರ್ಟ್ ಆದಂತೆ ಕಾಣ್ತಿದೆ.

 

Related Posts

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಸಿಎಂ ಸಿದ್ದರಾಮಯ್ಯ ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಉಡುಗೊರೆ ಕೊಟ್ಟಿದ್ದಾರೆ ಅಂತ ನೋಡೋದಾದ್ರೆ, ರಾಜ್ಯದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ 7 ಸಾವಿರ ಕೋಟಿ ಸರ್ಕಾರದ ಅನುದಾನವನ್ನು ಜಿಬಿಎ ಮೂಲಕ ಹಂಚಿಕೆ ಮಾಡಲು ಸೂಚನೆ, ಒಟ್ಟು 8 ಸಾವಿರ ಕೋಟಿ ಆಯವ್ಯಯಕ್ಕೆ ಜಿಬಿಎ ಅನುಮೋದನೆ…

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ಖ್ಯಾತ ದಳಪತಿ ವಿಜಯ್ ಮುಚ್ಚುಮರೆ ಇಲ್ಲದೇ ನಟಿ ತ್ರಿಷಾ ಕೃಷ್ಣನ್ ಜೊತೆ ತಿರುಗಾಡುತ್ತಿದ್ದಾರೆ. ಅವರ ಈ ವರ್ತನೆಯಿಂದ ಅಭಿಮಾನಿಗಳಿಗೆ ಮುಜುಗರ ಆಗಿದೆ. ಆದರೆ ಕೆಲವು ಅಭಿಮಾನಿಗಳು ಬೆಂಬಲಕ್ಕೆ ನಿಂತಿದ್ದಾರೆ. ವಿಜಯ್ ಅವರ ರಾಜಕೀಯ ಭವಿಷ್ಯಕ್ಕೆ ತ್ರಿಷಾ ಜೊತೆಗಿನ ಒಟನಾಟದಿಂದ ತೊಂದರೆ ಆಗುವ…

You Missed

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

UPSC ಪರೀಕ್ಷೆಯಲ್ಲಿ ಅನುಜ್‌ ಅಗ್ನಿಹೋತ್ರಿ ಫಸ್ಟ್ ರ‍್ಯಾಂಕ್

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ಬಜೆಟ್​​ನಲ್ಲಿ ಬೆಂಗಳೂರಿಗೆ ಏನು ಸಿಕ್ತು?

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

ತ್ರಿಷಾ, ವಿಜಯ್ ಮುಚ್ಚುಮರೆ ಇಲ್ಲದೇ ತಿರುಗಾಡುತ್ತಿದ್ದಾರೆ!

2026 ರ ಬಜೆಟ್​​ನಲ್ಲಿ ರಾಜ್ಯದ ಜನರಿಗೆ ಏನೆಲ್ಲಾ ಸಿಕ್ತು?

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವ ಜನತೆ ಸಾಯುತ್ತಿರುವುದಕ್ಕೆ ಕಾರಣ ಕೋವಿಡ್ ಲಸಿಕೆ ಅಲ್ವವೇ ಅಲ್ಲ; ಅಸಲಿ ಸತ್ಯ ಬಿಚ್ಚಿಟ್ಟ ಡಾಕ್ಟರ್!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!

ಯುವಹೃದಯಕ್ಕೆ ಎದುರಾಗಿದೆ ಕುತ್ತು: 40ರ ಹರೆಯದವರಲ್ಲಿ ಹೆಚ್ಚುತ್ತಿದೆ ಹೃದಯಾಘಾತದ ಭೀತಿ!