ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್‌ಸಿಬಿ ಆರಂಭ ಕೆಟ್ಟದಾಗಿತ್ತು. ನಾಯಕ ರಜತ್ ಪಾಟೀದಾರ್ 12 ರನ್ ಗಳಿಸಿ ಔಟಾದರು. ಫಿಲ್ ಸಾಲ್ಟ್ 8, ಕೊಹ್ಲಿ 7, ಪಡಿಕ್ಕಲ್ 4 ಗಳಿಸಿ ಔಟಾದರು. ಲಿವಿಂಗ್‌ಸ್ಟೋನ್ 54, ಜಿತೇಶ್ ಶರ್ಮಾ 34 ಮತ್ತು ಟಿಮ್ ಡೇವಿಡ್ 32 ರನ್ ಗಳಿಸಿ ತಂಡದ ಸ್ಕೋರ್ ಅನ್ನು 169ರ ಆಚೆಗೆ ಕೊಂಡೊಯ್ದರು. ಗುಜರಾತ್ ಪರ ಜೋಸ್ ಬಟ್ಲರ್ 73 ಮತ್ತು ಸಾಯಿ ಸುದರ್ಶನ್ 29, ಶೆರ್ಫೇನ್ ರುದರ್ಫೋರ್ಡ್30 ರನ್ ಗಳಿಸಿದರು. ಬೌಲಿಂಗ್‌ನಲ್ಲಿ ಸಿರಾಜ್ 3 ವಿಕೆಟ್ ಮತ್ತು ಸಾಯಿ ಕಿಶೋರ್ 2 ವಿಕೆಟ್ ಪಡೆದರು.





