
ಕೆಲವರಿಗೆ ವಾಚ್ ಖರೀದಿಸುವುದೆಂದರೆ ಅದೇನೋ ಕ್ರೇಜ್. ಹೀಗಾಗಿ ದುಬಾರಿ ಬೆಲೆಯ ಹಾಗೂ ಯಾರ ಬಳಿಯೂ ಇರದ ವಾಚ್ ಕಲೆಕ್ಷನ್ ಇಟ್ಟುಕೊಂಡಿರುತ್ತಾರೆ. ಯಾವುದೇ ಕೈಗಡಿಯಾರವಿರಲಿ, ಅದರಲ್ಲಿ ಕಂಪೆನಿಯ ಹೆಸರು ಹಾಗೂ 1,2, 3 ಹೀಗೆ ಹನ್ನೆರಡರವರೆಗೂ ಸಂಖ್ಯೆಗಳನ್ನು ಬರೆದಿರುವುದನ್ನು ನೀವು ನೋಡಿರುತ್ತೀರಿ. ಆದರೆ ಹೆಚ್ಎಂಟಿ ಕಂಪೆನಿಯ ಈ ವಾಚ್ ಮಾತ್ರ ವಿಭಿನ್ನತೆಯಿಂದಲೇ ಕನ್ನಡಿಗರ ಗಮನ ಸೆಳೆದಿದೆ. ಹೌದು ಕರ್ನಾಟಕ ಸರ್ಕಾರದ ಅಧಿಕೃತ ಲಾಂಛನವಾಗಿರುವ ಗಂಡಭೇರುಂಡ ಹಾಗೂ ಕನ್ನಡ ಅಂಕಿಗಳಿರುವುದೇ ಈ ಕೈಗಡಿಯಾರದ ವಿಶೇಷತೆಯಾಗಿದ್ದು, ಸಾಮಾಜಿಕಜಾಲತಾಣಗಳಲ್ಲಿ ಹರಿದಾಡುತ್ತಿರುವ ಈ ಕೈಗಡಿಯಾರದ ಪೋಟೋ ಕಂಡ ನೆಟ್ಟಿಗರು ಇದು ನಮ್ಮ ಕನ್ನಡದ ಗುರುತಿನ ಪ್ರತೀಕ ಎಂದು ಕಾಮೆಂಟ್ ಮಾಡಿದ್ದಾರೆ.





